ಬಿಗ್ ಬಾಸ್ ಅಸುರಾಧಿಪತಿ ಕಾಕ್ರೋಚ್.. ರಕ್ಷಿತಾ ಶೆಟ್ಟಿಗೆ ಪನಿಶ್ಮೆಂಟ್! – ಇಬ್ಬರು OUT.. ಹೊಸ ಎಂಟ್ರಿ ಇವ್ರೇ?

ಮೊದಲ ವಾರ ಕೊಂಚ ಸೈಲೆಂಟ್ ಆಗಿದ್ದ ಬಿಗ್ ಬಾಗ್ ಮನೆ ಈಗ ಫುಲ್ ವೈಲೆಂಟ್ ಆಗಿದೆ.. ಇಬ್ಬರು ಔಟ್ ಆಗ್ತಿದ್ದಂತೆ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಈ ಬೆನ್ನಲ್ಲೇ ಸ್ಪರ್ಧಿಗಳು ಬಿಗ್ ಬಾಸ್ ಟಾಸ್ಕ್ ಜೊತೆ ತಮ್ಮ ಆಟನೂ ಶುರು ಮಾಡ್ಕೊಂಡಿದ್ದಾರೆ.. ಆದ್ರೀಗ ಕಾಕ್ರೋಚ್ ಸುಧಿ ದೊಡ್ಮನೆಯ ಅಸುರಾಧಿಪತಿ ಆಗಿದ್ದಾರೆ.. ಸುಧೀ ಆರ್ಭಟಕ್ಕೆ ಮನೆಮಂದಿ ಶಾಕ್ ಆಗಿದ್ದಾರೆ.. ದೊಡ್ಮನೆಗೆ ಬಂದ ರಕ್ಷಿತಾ ಶೆಟ್ಟಿಗೆ ಮೊದಲ ಆಟದಲ್ಲೇ ಪನಿಶ್ಮೆಂಟ್ ಸಿಕ್ಕಿದೆ.. ಮತ್ತೊಂದ್ಕಡೆ ದೊಡ್ಮನೆಗೆ ಹೊಸ ಸ್ಪರ್ಧಿಗಳು ಎಂಟ್ರಿ ಆಗೋದು ಪಕ್ಕಾ ಆಗಿದೆ.
ಇದನ್ನೂ ಓದಿ: ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ಕೆಡಿ ಪೋಸ್ಟರ್ ರಿಲೀಸ್ – ರಗಡ್ ಲುಕ್ನಲ್ಲಿ ಕಾಣಿಸಿಕೊಂಡ ಆ್ಯಕ್ಷನ್ ಪ್ರಿನ್ಸ್
ಬಿಗ್ ಬಾಸ್ ಕನ್ನಡ ಸೀಸನ್ 12 ರ ಅಸಲಿ ಆಟ ಶುರುವಾಗಿದೆ.. ಫಿನಾಲೆಗೆ ಹತ್ತಿರವಾಗ್ತಿದ್ದಾಗ ಕೊಡ್ತಿದ್ದ ಟಾಸ್ಕ್ಗಳನ್ನ ಈ ಸೀಸನ್ ನಲ್ಲಿ ಆರಂಭದ ದಿನಗಳಲ್ಲೇ ಕೊಡಲಾಗ್ತಿದೆ.. ಯಾರೂ ಊಹಿಸಿರದ ಟ್ವಿಸ್ಟ್ಗಳನ್ನ ಈ ಸೀಸನ್ ನಲ್ಲಿ ನೀಡಲಾಗಿದೆ.. ಮೊದಲ ದಿನ ಔಟ್ ಆಗಿದ್ದ ರಕ್ಷಿತಾ ಶೆಟ್ಟಿ ದೊಡ್ಮನೆಗೆ ಶನಿವಾರ ಎಂಟ್ರಿಕೊಟ್ಟಿದ್ದಾರೆ.. ತನ್ನನ್ನ ಹೊರ ಹಾಕಿದ್ದಕ್ಕೆ ಕಿಚ್ಚನ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿದ್ರು.. ಸಿಲ್ಲಿ ರೀಸನ್ ಕೊಟ್ಟು ನನ್ನ ಹೊರ ಹಾಕಿದ್ರು.. ಪ್ರಾಪರ್ ರೀಸನ್ ಕೊಡದೇ ಎಲಿಮಿನೇಟ್ ಮಾಡಿದ್ದು ಯಾಕೆ.. ಸ್ಪಂದನಾ, ಮಾಳು ಬದಲು ನನ್ನನ್ನ ಉಳಿಸಿಕೊಳ್ಬೋದಿತ್ತಲ್ಲ ಎಂದು ಪ್ರಶ್ನೆ ಮಾಡಿದ್ರು. ಅದಾದ್ಮೇಲೆ ಯಾರನ್ನ ಹೊರ ಕಳಿಸ್ಬೇಕು ಎಂದು ಸುದೀಪ್ ಕೇಳಿದಾಗಲೂ ಎಲ್ಲರನ್ನ ಕಳಿಸ್ಬೇಕು ಅಂತಾ ರಕ್ಷಿತಾ ಹೇಳಿದ್ದು ನೋಡಿ ಮನೆ ಮಂದಿ ಶಾಕ್ ಆದ್ರು.. ರಕ್ಷಿತಾ ದೊಡ್ಮನೆಗೆ ಬರ್ತಿದ್ದಂತೆ ಎಲಿಮಿನೇಷನ್ ಕೂಡ ನಡೆದಿದೆ. ಮೊದಲ ವಾರ ಇಬ್ಬರು ಸ್ಪರ್ಧಿಗಳು ದೊಡ್ಮನೆಯಿಂದ ಎಲಿಮಿನೇಷನ್ ಆಗಿದ್ದಾರೆ.. ವೀಕ್ಷಕರ ಊಹೆಯಂತೆ ಆರ್ಜೆ ಅಮಿತ್ ಹಾಗೂ ಕರಿಬಸಪ್ಪ ಎಲಿಮಿನೇಟ್ ಆಗಿದ್ದಾರೆ.. ಮೊದಲ ವಾರ ಫುಲ್ ಸೈಲೆಂಟ್ ಆಗಿದ್ದ ಜೋಡಿ, ಆಟ ಕೂಡ ಚೆನ್ನಾಗಿ ಆಡಿರ್ಲಿಲ್ಲ.. ಹೀಗಾಗಿ ಅಮಿತ್, ಕರಿಬಸಪ್ಪ ಔಟ್ ಆಗಿದ್ದಾರೆ.
ಇನ್ನು ಬಿಗ್ಬಾಸ್ ಮನೆಯಲ್ಲಿ ಫಿನಾಲೆ ಆಟ ಈಗಾಗಲೇ ಶುರುವಾಗಿದೆ. ಅದರೂ ಕೆಲ ಸ್ಪರ್ಧಿಗಳು ಸೈಲೆಂಟ್ ಆಗಿಯೇ ಇದ್ದರು. ಅದ್ರ ಜೊತೆಗೆ ಸ್ಪರ್ಧಿಗಳು ಅನೇಕ ತಪ್ಪುಗಳನ್ನು ಮಾಡಿದ್ದರು. ವೀಕೆಂಡ್ನಲ್ಲಿ ಸುದೀಪ್ ಸ್ಪರ್ಧಿಗಳಿಗೆ ತಮ್ಮ ತಪ್ಪನ್ನು ಮನವರಿಕೆ ಮಾಡಿದ್ದಾರೆ. ಜೊತೆಗೆ ಈ ಮನೆಯಿಂದ ಯಾರು, ಯಾವಾಗ ಬೇಕಾದ್ರೂ ಎಲಿಮಿನೇಟ್ ಆಗ್ಬೋದು.. ಎಷ್ಟು ಜನ ಬೇಕಾದ್ರೂ ಸ್ಪರ್ಧಿಗಳಾಗಿ ಈ ಮನೆಗೆ ಬರ್ಬೋದು.. ಇನ್ಮುಂದೆ ಕೇರ್ಫುಲ್ ಆಗಿ ಆಟ ಆಡಿ ಎಂದು ಸುದೀಪ್ ಎಚ್ಚರಿಕೆ ಕೊಟ್ಟಿದ್ದಾರೆ. ಇದೀಗ ಸ್ಪರ್ಧಿಗಳು ಇನ್ಮೇಲಾದ್ರೂ ಎಚ್ಚೆತ್ತುಕೊಳ್ತಾರಾ? ತಮ್ಮ ಆಟ ಶುರುಮಾಡ್ಕೊಳ್ತಾರಾ? ಎರಡನೇ ವಾರ ಹೇಗಿರಲಿದೆ ಎಂಬ ಕ್ಯೂರಿಯಾಸಿಟಿ ವೀಕ್ಷಕರಲ್ಲಿದೆ. ಇದೀಗ ಕಾಕ್ರೋಚ್ ಸುಧೀ ದೊಡ್ಮನೆಯ ಅಸುರಾಧಿಪತಿ ಆಗಿದ್ದಾರೆ. ದೊಡ್ಮನೆಯಲ್ಲಿ ಈಗ ಸುಧೀ ಹೇಳಿದ್ದೇ ರೂಲ್ಸ್.. ಆಡಿದ್ದೇ ಆಟ ಅನ್ನೋ ತರ ಆಗಿದೆ. ಸುದೀ ಕೊಡೋ ಆಟಕ್ಕೆ ಮನೆಮಂದಿ ಫುಲ್ ರೋಸ್ಟ್ ಆಗಿದ್ದಾರೆ. ಆಟ ಶುರುಮಾಡಿದ ಮೊದಲ ದಿನವೇ ರಕ್ಷಿತಾ ಪನಿಶ್ಮೆಂಟ್ ಸಿಕ್ಕಿದೆ.
ವೀಕೆಂಡ್ ಮಸ್ತಿಯಲ್ಲಿದ್ದ ಬಿಗ್ಬಾಸ್ ಮನೆಯಲ್ಲಿ ಇದೀಗ ಅಸುರಾಧಿಪತಿ ಕಿಚ್ಚು ಎದ್ದಿದೆ. ಮೊದಲ ಫಿನಾಲೆ ಕಂಟೆಸ್ಟೆಂಟ್ ಕಾಕ್ರೋಚ್ ಸುಧಿಗೆ ಬಿಗ್ಬಾಸ್ ವಿಶೇಷ ಅಧಿಕಾರ ನೀಡಿದ್ದಾರೆ. ಅದುವೇ ಅಸೂರ, ಸರ್ವೋಚ್ಛ, ಅಧಿಪತಿ ಆಗಿದ್ದಾರೆ. ಈ ಬೆನ್ನಲ್ಲೇ ಸುಧಿ ಅಸುರ ವೇಷ ಧರಿಸಿ ದೊಡ್ಮನೆಯಲ್ಲಿ ಅಟ್ಟಹಾಸ ಶುರುಮಾಡಿದ್ದಾರೆ. ಈ ಬೆನ್ನಲ್ಲೇ ತಪ್ಪು ಮಾಡಿದವರಿಗೆ, ಕೆಲಸ ಮಾಡದ ಜನರಿಗೆ ಹಿಟ್ಲರ್ ಮಾದರಿಯಲ್ಲಿ ಅಸುರಾಧಿಪತಿ ಶಿಕ್ಷೆ ನೀಡ್ತಿದ್ದಾರೆ. ಅದರಂತೆಯೇ ಗಿಲ್ಲಿ, ಕಾವ್ಯ, ರಕ್ಷಿತಾ ಶೆಟ್ಟಿಗೆ ಬಸ್ಕಿ ಹೊಡೆಸಿದ್ದಾರೆ. ಬಳಿಕ ತಾನು ಬಂದಾಗ ಎಲ್ಲರೂ ಎದ್ದು ನಿಲ್ಬೇಕು ಅಂತಾ ಹೇಳಿದ್ದಾರೆ. ಇದಕ್ಕೆ ಗಿಲ್ಲಿ ಬಾತ್ರೂಮ್ನಲ್ಲಿದ್ರೂ ಎದ್ದು ನಿಲ್ಬೇಕಾ ಎಂದು ಕೇಳಿದ್ದಾರೆ. ಈ ಬೆನ್ನಲ್ಲೇ ಗಿಲ್ಲಿ, ಕಾವ್ಯಳನ್ನ ಸ್ವಿಮ್ಮಿಂಗ್ ಪೂಲ್ಗೆ ತಳ್ಳಿಹಾಕಿದ್ದಾರೆ. ಇನ್ನು ರಾಜ್ಯದ ಮಹಾರಾಣಿ ಎಂದು ಪೋಸ್ ಕೊಟ್ಟಿದ್ದ ಜಾಹ್ನವಿಗೆ ಅಧಿಪತಿ ಸ್ಪೆಷಲ್ ಟ್ರೀಟ್ ಮಾಡಿದ್ದಾರೆ. ಆಕೆಯನ್ನು ಎಳ್ಕೊಂಡು ಹೋಗಿ ಸ್ವಿಮ್ಮಿಂಗ್ ಪೂಲ್ಗೆ ತಳ್ಳಿ ಎಂದು ಅಸುರಾಧಿಪತಿ ಆದೇಶ ನೀಡಿದ್ದಾರೆ. ಅದರಂತೆಯೇ ಡಾಗ್ ಸತೀಶ್, ಚಂದ್ರಪ್ರಭ ಹಾಗೂ ಧ್ರುವಂತೆ ಅವರನ್ನು ಸ್ವಿಮ್ಮಿಂಗ್ ಪೂಲ್ಗೆ ತಳ್ಳಿದ್ದಾರೆ. ಅಸುರಾಧಿಪತಿಯ ಆಟ, ಕಾಟಕ್ಕೆ ಮನೆಮಂದಿ ಫುಲ್ ಸುಸ್ತಾಗಿದ್ದಾರೆ. ಇದೀಗ ರಕ್ಷಸರನ್ನು ಸಂಹಾರ ಮಾಡುತ್ತೇವೆ ಎಂದು ಅಶ್ವಿನಿ ಗೌಡ ಜೊತೆ ರಾಜಮಾತೆಯರು ಸಂಕಲ್ಪ ಮಾಡಿದ್ದಾರೆ. ಹೀಗಾಗಿ ಈ ವಾರದ ಎಪಿಸೋಡ್ ತುಂಬಾನೇ ಕ್ಯೂರಿಯಾಸಿಟಿ ಹುಟ್ಟಿಕೊಂಡಿದೆ.

ನೋಡಿರಿ

