ಕಮೋಡ್‌ ಒಳಗೆ ಪ್ರತ್ಯಕ್ಷವಾದ ನಾಗಪ್ಪ! – ಹಾವು ಕಂಡು ಮನೆ ಮಾಲೀಕರು ಮಾಡಿದ್ದೇನು ಗೊತ್ತಾ?

ಕಮೋಡ್‌ ಒಳಗೆ ಪ್ರತ್ಯಕ್ಷವಾದ ನಾಗಪ್ಪ! – ಹಾವು ಕಂಡು ಮನೆ ಮಾಲೀಕರು ಮಾಡಿದ್ದೇನು ಗೊತ್ತಾ?

ಮಳೆಗಾಲದಲ್ಲಿ ಹಾವು, ಕೀಟಗಳ ಕಾಟ ಹೆಚ್ಚಾಗಿರುತ್ತೆ. ಸಣ್ಣ ಸಂದಿ ಸಿಕ್ಕಿದ್ರೂ ಸಾಕು. ಸಿಕ್ಕಿದ್ದೇ ಚಾನ್ಸ್‌ ಅಂತ ಅಲ್ಲಿಯೇ ಸೇರ್ಕೊಳ್ಳುತ್ತೆ. ಹೀಗಾಗಿ ಮಳೆಗಾಲದಲ್ಲಿ  ಮೈಯೆಲ್ಲಾ ಕಣ್ಣಾಗಿಟ್ಟಿರ್ಬೇಕು. ಸ್ವಲ್ಪ ಎಚ್ಚರ ತಪ್ಪಿದ್ರೂ ಅನಾಹುತ ಕಟ್ಟಿಟ್ಟ ಬುತ್ತಿ. ಇದೀಗ ಇಲ್ಲೊಂದು ಕಡೆ ಕಮೋಡ್‌ ಒಳಗೆ ನಾಗಪ್ಪ ಪ್ರತ್ಯಕ್ಷ ಆಗಿದ್ದಾನೆ.

ಇದನ್ನೂ ಓದಿ: ಪಾಕಿಸ್ತಾನಿ ಗಾಯಕ ಸಿಂಗರ್‌ ಚಾಹತ್ ಫತೇಹ್ ಅಲಿ ಖಾನ್‌ ಮೇಲೆ ಮೊಟ್ಟೆ ಎಸೆತ

ಹೌದು. ಈ ಘಟನೆ ಅಜ್ಮೀರ್​ನ ಮನೆಯೊಂದರಲ್ಲಿ ನಡೆದಿದೆ. ಮನೆಯೊಂದರ  ಕಮೋಡ್​​ನಲ್ಲಿ ಬೃಹದಾಕಾರದ ನಾಗರ ಹಾವು ಪ್ರತ್ಯಕ್ಷವಾಗಿದೆ. ಮನೆಯ ಎರಡನೇ ಮಹಡಿಯ ಶೌಚಾಲಯದ ಕಮೋಡ್​​ನಲ್ಲಿ ಹಾವು ಪತ್ತೆಯಾಗಿದೆ. ಈ ವೇಳೆ  ಮನೆಯವರು ಆತಂಕಗೊಂಡಿದ್ದಾರೆ.

ಮನೆಯವರಿಗೆ ಹಾವು ಕಂಡಿದ್ದು ಹೇಗೆ?

ಮನೆ ಮಾಲೀಕರು ಸ್ನಾನಕ್ಕೆಂದು ಬಾತ್​ರೂಂಗೆ ಹೋಗಿದ್ದಾರೆ. ಈ ವೇಳೆ ಕಮೋಡ್​ಬಳಿ ಹಾವಿನ ಸದ್ದು ಕೇಳಿಸಿದೆ. ಈ ವೇಳೆ ಆತಂಕಗೊಂಡ ಆ ವ್ಯಕ್ತಿ ಮನೆಯಲ್ಲಿದ್ದವರನ್ನ ಕರೆದಿದ್ದಾರೆ. ನಾಗರ ಹಾವು ಮನೆಯವರನ್ನ ನೋಡುತ್ತಿದ್ದಂತೆ ದಾಳಿಗೆ ಮುಂದಾಗಿದೆ. ಈ ವೇಳೆ ಉರಗ ಪ್ರೇಮಿ ಸುಖದೇವ್ ಭಟ್​ಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಉರಗ ಪ್ರೇಮಿ ಹಾಗೂ ವನ್ಯಜೀವಿ ಸಂರಕ್ಷಣಾ ತಂಡ 30 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ, ನಾಗರ ಹಾವನ್ನ ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.

Shwetha M