ಮಂಗಳೂರಿನಲ್ಲಿ ದೈವದ ಕಾರಣಿಕ! – ತನ್ನಿಂದ ತಾನೆ ತೂಗಿದ ದೈವದ ಉಯ್ಯಾಲೆ!

ತುಳುನಾಡಿನಲ್ಲಿ ದೈವಗಳು ತಮ್ಮ ಇರುವಿಕೆ ಹಾಗೂ ಕಾರ್ಣಿಕವನ್ನು ಆಗ್ಗಾಗ್ಗೆ ತೋರಿಸುತ್ತಲೇ ಬಂದಿದೆ. ಇದೀಗ ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ವಲಯದ ಕುಡುಂಬೂರು ನಡುಗಿರಿಯಲ್ಲಿರುವ ದೈವಸ್ಥಾನದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಮಂಗಳೂರು ಭಾಗದ ಶ್ರೀ ಜಾರಂದಾಯ ಹಾಗೂ ಸಹಪರಿವಾರ ದೈವಸ್ಥಾನದಲ್ಲಿ ನಡೆದ ಪಿಲಿಚಂಡಿ ದೈವದ ನೇಮೋತ್ಸವದ ವೇಳೆ ದೈವದ ಉಯ್ಯಾಲೆ ತನ್ನಿಂದ ತಾನೇ ತೂಗಿರುವ ಘಟನೆ ನಡೆದಿದ್ದು, ಈ ದೃಶ್ಯ ಕಂಡು ಭಕ್ತರಲ್ಲಿ ಅಚ್ಚರಿಯನ್ನು ಮೂಡಿಸಿದೆ.
ಇದನ್ನೂ ಓದಿ: ಮದುವೆ ಒಪ್ಪಿಲ್ಲ ಎಂದು ಗರ್ಲ್ಫ್ರೆಂಡ್ನ ಕೊಂದ! – ಯೂಟ್ಯೂಬ್ ನೋಡಿ ಪ್ರೇಮಿಯ ಆತ್ಮ ವಶೀಕರಣಕ್ಕೆ ಯತ್ನಿಸಿದ!
ನೇಮೋತ್ಸವದ ಸಂದರ್ಭದಲ್ಲಿ ಪಿಲಿಚಂಡಿ ದೈವಕ್ಕೆ ಗಗ್ಗರ ಇಡುವಾಗ ದೈವಸ್ಥಾನ ಪ್ರದೇಶದಲ್ಲಿ ಏಕಾಏಕಿ ದೊಡ್ಡ ಸದ್ದು ಕೇಳಿ ಬಂದಿದ್ದು, ಅಲ್ಲಿದ್ದವರು ಏನಿದು ಸದ್ದು ಎಂದು ಆತಂಕಗೊಂಡರು. ನಂತರ ನೋಡಿದಾಗ ನೇಮೋತ್ಸವ ನಡೆಯುತ್ತಿದ್ದ ಸ್ಥಳದ ಮುಂಭಾಗದಲ್ಲಿರುವ ಹೊಳ್ಳರ ಚಾವಡಿಯಲ್ಲಿದ್ದ ದೈವದ ತೂಗುಯ್ಯಾಲೆ ತನ್ನಿಂದ ತಾನೇ ತೂಗುತ್ತಿರುವುದನ್ನು ಕಣ್ಣಾರೆ ಕಂಡು ಅಲ್ಲಿ ನೆರೆದವರು ಆಶ್ಚರ್ಯಗೊಂಡಿದ್ದಾರೆ. ದೈವದ ಪವಾಡವನ್ನು ಕಣ್ಣಾರೆ ಕಂಡ ಜನರು ಭಕ್ತಿಪರವಶರಾಗಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತರು ದೈವಸ್ಥಾನಕ್ಕೆ ಹರಿದುಬಂದಿದ್ದು, ದೈವದ ಕಾರ್ಣಿಕ ಕಂಡು ಪುಳಕಿತರಾಗಿದ್ದಾರೆ. ಕರಾವಳಿ ಭಾಗದಲ್ಲಿ ದೈವ ನೇಮೋತ್ಸವಗಳ ವೇಳೆ ಇಂತಹ ಅಚ್ಚರಿಯ ಘಟನೆಗಳು ನಡೆದಿರುವ ಉದಾಹರಣೆಗಳು ಇದಕ್ಕೂ ಮೊದಲು ನಡೆದಿವೆ. ಪಿಲಿಚಂಡಿ ದೈವದ ಈ ಪವಾಡ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ನೋಡಿರಿ

