ತನ್ನ ತಂಡದ ನೋವಿನ ಕ್ಷಣಗಳನ್ನು ನೋಡಲು ಕಠಿಣವಾಗುತ್ತಿದೆ – ಕೋಚ್ ರಾಹುಲ್ ದ್ರಾವಿಡ್ ಭಾವುಕ

ತನ್ನ ತಂಡದ ನೋವಿನ ಕ್ಷಣಗಳನ್ನು ನೋಡಲು ಕಠಿಣವಾಗುತ್ತಿದೆ – ಕೋಚ್ ರಾಹುಲ್ ದ್ರಾವಿಡ್ ಭಾವುಕ

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಅಭಿಯಾನ ನೋವಿನಲ್ಲಿ ಮುಕ್ತಾಯಗೊಂಡಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯೂ ಕೊನೆಗೊಂಡಿದೆ. ರವಿಶಾಸ್ತ್ರಿ ನಂತರ ರೋಹಿತ್ ಶರ್ಮಾ ಜೊತೆಗೆ ಭಾರತ ತಂಡದ ಸಾರಥ್ಯ ವಹಿಸಿಕೊಂಡವರು ದ್ರಾವಿಡ್. ಈ ನಡುವೆ ರಾಹುಲ್ ದ್ರಾವಿಡ್ ತನ್ನ ತಂಡ ಎದುರಿಸಿದ ನೋವಿನ ಕ್ಷಣಗಳ ಬಗ್ಗೆ ಭಾವುಕರಾಗಿ ನುಡಿದಿದ್ದಾರೆ.

ಇದನ್ನೂ ಓದಿ:HEAD ಗೆ ತಲೆಬಾಗಿದ ಭಾರತ – ಭಾರತದ ಸೋಲಿಗೆ ಏನು ಕಾರಣ? ಆಸ್ಟ್ರೇಲಿಯಾ ಗೆದ್ದು ಬೀಗಲು ಸಾಧ್ಯವಾಗಿದ್ದು ಹೇಗೆ?

ದ್ರಾವಿಡ್ ಅವರ 2 ವರ್ಷಗಳ ಒಪ್ಪಂದವು ಭಾನುವಾರಕ್ಕೆ ಕೊನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯುವ ಬಗ್ಗೆ ನಾನಿನ್ನೂ ಯಾವುದೇ ರೀತಿಯ ಯೋಚನೆಗಳನ್ನು ಮಾಡಿಲ್ಲ. ಯಾಕಂದರೆ ನನ್ನ ಸಂಪೂರ್ಣ ಗಮನ ಈ ಬಾರಿಯ ಸರಣಿ ಮತ್ತು ಪಂದ್ಯದ ಮೇಲಿತ್ತು. ಭವಿಷ್ಯದ ಬಗ್ಗೆ ಯೋಚನೆ ಮಾಡಲು ಕೂಡ ಸಮಯವಿರಲಿಲ್ಲ. ಹೀಗಾಗಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ನನಗೆ ಒಂದಿಷ್ಟು ಸಮಯ ಬೇಕಾಗಿದೆ ಎಂದು ತಿಳಿಸಿದರು. ಇದೇ ವೇಳೆ ರಾಹುಲ್ ದ್ರಾವಿಡ್ ಫೈನಲ್ ಸೋಲಿನ ಬಳಿಕ ಆಟಗಾರರ ಮನಸ್ಥಿತಿಯ ಬಗ್ಗೆ ಮಾತನಾಡಿದರು. ಹುಡುಗರು ತುಂಬ ನಿರಾಶೆಗೊಂಡಿದ್ದಾರೆ. ಇಡೀ ಡ್ರೆಸ್ಸಿಂಗ್ ಕೋಣೆಯೇ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ತರಬೇತುದಾರನ್ನಾಗಿ ಅವರನ್ನು ಈ ಸ್ಥಿತಿಯಲ್ಲಿ ನೋಡುವುದು ನನಗೆ ಕಷ್ಟಕರವಾಗಿತ್ತು ಎಂದಿದ್ದಾರೆ. ಅವರ ಜೊತೆ ತುಂಬಾ ಸಮಯ ಕಳೆದಿರುವ ನಾನು ಅವರ ಬಗ್ಗೆ ವೈಯಕ್ತಿಕವಾಗಿ ತಿಳಿದಿದ್ದೇನೆ. ಹೀಗಾಗಿ ಅವರನ್ನು ಈ ಸ್ಥಿತಿಯಲ್ಲಿ ನೋಡುವುದು ಕಠಿಣವಾಗಿತ್ತು ಎಂದಿದ್ದಾರೆ.

ದ್ರಾವಿಡ್ ಅವರ ಅಧಿಕಾರಾವಧಿಯಲ್ಲಿ, ಭಾರತವು ಒಂದು ವಿಶ್ವ ಟೆಸ್ಟ್ ಚಾಂಪಿಯನ್ಸ್ ಫೈನಲ್, ಒಂದು ಟಿ20 ವಿಶ್ವಕಪ್ ಮತ್ತು ಒಂದು ಏಕದಿನ ವಿಶ್ವಕಪ್ ಅನ್ನು ಆಡಿತು. ಆದರೆ ಅವರಿಂದಲೂ ಭಾರತದ ಐಸಿಸಿ ಟ್ರೋಫಿಯ ಬರವನ್ನು ಕೊನೆಗೊಳಿಸಲು ಸಾಧ್ಯವಾಗಲಿಲ್ಲ ಅನ್ನೋದೇ ಬೇಸರದ ವಿಚಾರ.

Sulekha