ಶ್ರೇಯಸ್‌ಗೆ ಅದೃಷ್ಟ ತಂದ ಕೋಚ್ ಲಕ್ಷ್ಮಣ್ – ಫ್ಯಾನ್ಸ್ ತಲೆಮೇಲೆ ಕಿಶನ್ ಆಟೋಗ್ರಾಫ್..!

ಶ್ರೇಯಸ್‌ಗೆ ಅದೃಷ್ಟ ತಂದ ಕೋಚ್ ಲಕ್ಷ್ಮಣ್ – ಫ್ಯಾನ್ಸ್ ತಲೆಮೇಲೆ ಕಿಶನ್ ಆಟೋಗ್ರಾಫ್..!

ಕ್ರಿಕೆಟ್ ಜಗತ್ತಿನ ರೋಚಕ ಸುದ್ದಿಗಳ ಹೈಲೆಟ್ಸ್..

 

ಜಿಂಬಾಬ್ವೆ ವಿರುದ್ಧದ 3ನೇ T20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅರ್ಧಶತಕ ಸಿಡಿಸೋ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ವೈಭವ್‌ 49 ಎಸೆತಗಳಲ್ಲಿ 81 ರನ್ ​ಬಾರಿಸಿದ್ರು. ಈ ಅರ್ಧಶತಕದೊಂದಿಗೆ ವಿಶ್ವ T20 ಕ್ರಿಕೆಟ್​​​ನಲ್ಲಿ 2 ಅರ್ಧಶತಕ ಸಿಡಿಸಿದ ಕಿರಿಯ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಈ ಮೂಲಕ ನೇಪಾಳದ ಕುಶಾಲ್ ಮಲ್ಲ ಅವರ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ಕುಶಾಲ್‌ 16 ವರ್ಷ ತುಂಬೋದ್ರೊಳಗೆ 1 ಅರ್ಧಶತಕ ಸಿಡಿಸಿದ್ದರು. ಆದ್ರೆ ವೈಭವ್ 2 ಅರ್ಧಶತಕ ಸಿಡಿಸಿ ವಿಶೇಷ ದಾಖಲೆ ಬರೆದಿದ್ದಾರೆ.

ಗಾಯದ ನಡುವೆಯೂ ಜಿಂಬಾಬ್ವೆ ಬೌಲರ್ಸ್‌ ಬೆವರಿಳಿಸಿದ್ದರು ಬೇಬಿಬಾಸ್. ಯೆಸ್.. 49 ಎಸೆತಗಳಲ್ಲಿ 81 ರನ್ ಬಾರಿಸಿದ ಸೂರ್ಯವಂಶಿ ಪ್ಲೇಯರ್‌ ಆಫ್‌ ದಿ ಮ್ಯಾಚ್‌, ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇಂಜುರಿ ನಡುವೆಯೂ ಛಲ ಬಿಡದೆ ಬೊಂಬಾಟ್‌ ಬ್ಯಾಟಿಂಗ್‌ ಮಾಡಿದ ವೈಭವ್‌ಝಿಂಬಾಬ್ವೆ ಬೌಲರ್ಸ್ ನ್ನು ಬೆಂಡತ್ತಿದ್ದಲ್ಲದೇ, ಚೆಂಡನ್ನು ಮೈದಾನದ ಮೂಲೆ ಮೂಲೆಗೂ ಬಾರಿಸಿ ಫೀಲ್ಡರ್ಸ್‌ ಬೆವರಿಳಿಸಿದರು.

ಜಿಂಬಾಬ್ವೆ ವಿರುದ್ಧದ T20 ಸರಣಿ ಗೆಲುವಿನ ಬೆನ್ನಲ್ಲೇ ಶ್ರೇಯಸ್‌ ಅಯ್ಯರ್‌ ತನ್ನ ತಂಡವನ್ನು ಹೊಗಳಿದ್ದಾರೆ. ಯುವ ಆಟಗಾರರು ಮೈದಾನದಲ್ಲಿ ತೋರುತ್ತಿರುವ ಎನರ್ಜಿ, ಆಟದ ಮೇಲಿರುವ ಬದ್ಧತೆ ನಿಜಕ್ಕೂ ಅದ್ಭುತ. ಸತತವಾಗಿ ಆಡುವಾಗ ಇಷ್ಟೊಂದು ಉತ್ಸಾಹ ಕಾಯ್ದುಕೊಳ್ಳುವುದು ಸುಲಭದ ಮಾತಲ್ಲ. ಒಬ್ಬ ನಾಯಕನಾಗಿ ಹಾಗೂ ತಂಡವಾಗಿ ನಮಗೆ ಇಂತಹ ಎನರ್ಜಿಯ ಅಗತ್ಯವಿತ್ತು. ಇದರಿಂದಾಗಿಯೇ ಝಿಂಬಾಬ್ವೆ ನೆಲದಲ್ಲಿ ಕ್ಲೀನ್ ಸ್ವೀಪ್ ಗೆಲುವು ಸಾಧ್ಯವಾಯ್ತು ಎಂದು ಶ್ರೇಯಸ್ ಹೇಳಿದ್ದಾರೆ.

ಇನ್ನು ಶ್ರೇಯಸ್ ಅಯ್ಯರ್, ಕೋಚ್ ವಿವಿಎಸ್ ಲಕ್ಷ್ಮಣ್ ಗೂ ಧನ್ಯವಾದ ಹೇಳಿದ್ದಾರೆ. ನಮ್ಮನ್ನು ಪ್ರೇರೇಪಿಸಿದ್ದಕ್ಕಾಗಿ ಮತ್ತು ನಮಗೆ ಸ್ಫೂರ್ತಿ ನೀಡಿದ್ದಕ್ಕಾಗಿ ವಿವಿಎಸ್ ಸರ್‌ಗೆ ಧನ್ಯವಾದಗಳು. ನಾವು ಪ್ರತಿದಿನ ಮೈದಾನಕ್ಕೆ ಕಾಲಿಟ್ಟಾಗ, ನೀವು ಹೇಳಿದ ಎಲ್ಲವೂ ಸೂಕ್ತವಾಗಿತ್ತು ಮತ್ತು ನಾವು ಅದನ್ನು ಮಾಡಬಲ್ಲೆವು ಎಂಬ ಧೈರ್ಯತಂದುಕೊಟ್ಟಿತ್ತು. ಆದ್ದರಿಂದ, ತುಂಬಾ ಧನ್ಯವಾದಗಳು ಎಂದು ಶ್ರೇಯಸ್ ಹೇಳಿದ್ದಾರೆ. ನಾಯಕನ ಈ ಮಾತು ಕೇಳಿದಾಗ, ಕೋಚ್ ಮತ್ತು ಕ್ಯಾಪ್ಟನ್ ಸಂಬಂಧ ಚೆನ್ನಾಗಿದ್ದರೆ ಮಾತ್ರ ಗೆಲುವು ಸಾಧ್ಯ ಅನ್ನೋ ಮಾತು ನಿಜ ಅನ್ನಿಸುತ್ತೆ.

ಝಿಂಬಾಬ್ವೆ ವಿರುದ್ಧಸರಣಿ ಗೆಲ್ಲುತ್ತಿದ್ದಂತೆ ಕೋಚ್ ವಿವಿಎಸ್ ಲಕ್ಷ್ಮಣ್ ಬೇಬಿಬಾಸ್ ಸೂರ್ಯವಂಶಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಕೋಚ್ ಲಕ್ಷ್ಮಣ್, ಸೂರ್ಯವಂಶಿಯ ಬ್ಯಾಟಿಂಗ್ ಶೈಲಿಯನ್ನು ಹೊಗಳಿದ್ರು. ಆದರೆ,  ಭವಿಷ್ಯದಲ್ಲಿ ಸುದೀರ್ಘ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉಳಿಯಬೇಕಾದರೆ ದೈಹಿಕ ದೃಢತೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದ್ರು. ವೈಭವ್ ತುಂಬಾ ಕಿರಿಯ ಆಟಗಾರ. ಅವರು ಫಿಟ್‌ನೆಸ್ ವಿಚಾರದ ಬಗ್ಗೆ ಗಮನಹರಿಸಲೇಬೇಕು ಎಂದು ವಿವಿಎಸ್​ ಲಕ್ಷ್ಮಣ್ ಸೂಚನೆ ಕೊಟ್ಟಿದ್ದಾರೆ.

ಜಿಂಬಾಬ್ವೆ ವಿರುದ್ದ 3ನೇ ಪಂದ್ಯದಲ್ಲಿ ವೈಭವ್‌ ಬ್ಯಾಟಿಂಗ್‌ ಶೈಲಿ ಎಲ್ಲರ ಗಮನಸೆಳೆದಿದೆ. ತಮ್ಮಇನ್ನಿಂಗ್ಸ್​ನಲ್ಲಿ 49 ಎಸೆತಗಳನ್ನು ಎದುರಿಸಿದ ವೈಭವ್ 9 ಬೌಂಡರಿ ಹಾಗೂ 4 ಸಿಕ್ಸರ್ ಕೂಡ ಬಾರಿಸಿದ್ರು. ಈ 4 ಸಿಕ್ಸರ್​ನಲ್ಲಿ 1 ಸಿಕ್ಸರ್ ಬರೋಬ್ಬರಿ 102 ಮೀಟರ್ ದೂರ ಹೋಗಿ ಬಿದ್ದಿತು. ಇದು ಗ್ಯಾಲರಿಯಲ್ಲಿದ್ದವರನ್ನ ಹುಬ್ಬೇರಿಸುವಂತೆ ಮಾಡಿತ್ತು. ಅಂದ್ಹಾಗೆ ವೈಭವ್‌ ಮೊದಲ ಪಂದ್ಯದಲ್ಲೂ 99 ಮೀಟರ್ ದೂರ ಸಿಕ್ಸರ್ ಬಾರಿಸಿದ್ದರು.

ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಎದುರಾದ ಆಘಾತಕಾರಿ ಸೋಲಿನ ಬೆನ್ನಲ್ಲೇ, ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗಳಲ್ಲೂ ಸೋಲು ಕಂಡಿತ್ತು. ಈ ಸಾಲು ಸಾಲು ಸೋಲುಗಳ ಹಿನ್ನೆಲೆಯಲ್ಲಿ ಬಿಸಿಸಿಐ ಈಗ ತುರ್ತು ಪರಾಮರ್ಶನಾ ಸಭೆ ಕರೆದಿದೆ. ಜೊತೆಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೂ ಬಿಸಿಸಿಐ ಬಿಸಿ ಮುಟ್ಟಿಸಲಿದೆ.

ಝಿಂಬಾಬ್ವೆ ಪ್ರವಾಸದಲ್ಲಿ ಬ್ಯಾಟಿಂಗ್ ವೈಫಲ್ಯದ ಬೆನ್ನಲ್ಲೇ ಅಭಿಷೇಕ್ ಶರ್ಮಾ ಪೋಸ್ಟ್ ಒಂದನ್ನ ಶೇರ್ ಮಾಡಿಕೊಂಡಿದ್ದಾರೆ. ಕಳಪೆ ಬ್ಯಾಟಿಂಗ್ ಪ್ರದರ್ಶನದ ಬೆನ್ನಲ್ಲೇ ಭಾವನಾತ್ಮಕ ಪೋಸ್ಟ್​ ಹಂಚಿಕೊಂಡಿರುವ ಅಭಿಷೇಕ್, ಚಿನ್ನದಂತಹ ಅವಕಾಶಗಳು ಕೈ ತಪ್ಪಿದಾಗ ಬೇಸರವಾಗುತ್ತದೆ, ಆದರೆ ಇದು ಕಲಿಕೆಯ ಹಾದಿ. ಮುಂಬರುವ ದಿನಗಳಲ್ಲಿ ಕಠಿಣ ಪರಿಶ್ರಮದೊಂದಿಗೆ ಇನ್ನಷ್ಟು ಬಲಿಷ್ಠವಾಗಿ ಕಂಬ್ಯಾಕ್ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಜಿಂಬಾಬ್ವೆ ವಿರುದ್ದದ ಕೊನೆಯ ಪಂದ್ಯದಲ್ಲಿ ಫನ್ನಿ ಇನ್ಸಿಡೆಂಟ್‌ ನಡೆದಿದೆ. ಇಶಾನ್‌ ಕಿಶನ್‌ ಪೆವಿಲಿಯನ್‌ನತ್ತ ಬರುತ್ತಿದ್ದ ವೇಳೆ ಅಭಿಮಾನಿ ಆಟೋಗ್ರಾಫ್ ನೀಡುವಂತೆ ಮನವಿ ಮಾಡಿದ್ದಾರೆ. ಸರಿ ಎಂದು ಹತ್ತಿರ ಹೋದಾಗ ಇಶಾನ್ ಕಿಶನ್‌ ಶಾಕ್‌ ಆಗಿದ್ದಾರೆ. ಆಟೋಗ್ರಾಫ್ ಹಾಕಲು ತನ್ನ ಬೋಳು ತಲೆ ತೋರಿಸಿ ಆಟೋಗ್ರಾಫ್‌ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಅಭಿಮಾನಿಯ ಒತ್ತಾಯಕ್ಕೆ ಮಣಿದ ಕಿಶನ್ ಬೋಳು ತಲೆ ಮೇಲೆ ಸಹಿ ಮಾಡಿದ್ದಾರೆ. ಈ ಫನ್ನಿ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗ್ತಿದೆ.

ಟೀಂ ಇಂಡಿಯಾ ವೇಗಿ ಮಯಾಂಕ್‌ ಯಾದವ್‌ T20 ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಪಡೆಯೋ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.T20 ಕ್ರಿಕೆಟ್‌ನಲ್ಲಿ ಭಾರತದ ಪರ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮಾಯಾಂಕ್ ಮೊದಲ ಸ್ಥಾನ ಪಡೆದಿದ್ದಾರೆ. ಈ ಮೂಲಕ ಭುವನೇಶ್ವರ್ ಕುಮಾರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಭುವಿ 87 ಪಂದ್ಯಗಳಲ್ಲಿ 3 ಬಾರಿ ಈ ಸಾಧನೆ ಮಾಡಿದ ಏಕೈಕ ಭಾರತೀಯ ಬೌಲರ್ ಆಗಿದ್ದರು. ಆದ್ರೀಗ ಮಯಾಂಕ್ ಕೇವಲ ಆರೇ ಪಂದ್ಯಗಳಲ್ಲಿ ಈ ಅದ್ಭುತ ಸಾಧನೆ ಮಾಡಿದ್ದಾರೆ.

 

 

 

Sulekha

Leave a Reply

Your email address will not be published. Required fields are marked *