ಕಾವೇರಿ ಬಗ್ಗೆ ತಮಿಳುನಾಡು ಸಿಎಂ ವಿಜಯ್ ಮಾತು – ಡಿಕೆ ಶಿವಕುಮಾರ್ ಜೊತೆ ಏನೆಲ್ಲಾ ಮಾತುಕತೆ ನಡೀತು?

ಕಾವೇರಿ ಬಗ್ಗೆ ತಮಿಳುನಾಡು ಸಿಎಂ ವಿಜಯ್ ಮಾತು – ಡಿಕೆ ಶಿವಕುಮಾರ್ ಜೊತೆ ಏನೆಲ್ಲಾ ಮಾತುಕತೆ ನಡೀತು?

ಚೆನ್ನೈನ ಮಹಾಬಲಿಪುರದಲ್ಲಿ ಗೃಹಸಚಿವ ಅಮಿತ್ ಷಾ ಅಧ್ಯಕ್ಷತೆಯಲ್ಲಿ ದಕ್ಷಿಣ ವಲಯ‌ ಮಂಡಳಿ ಸಭೆ ನಡೆದಿದೆ. ಕರ್ನಾಟಕ ಸಿಎಂ ಡಿಕೆ ಶಿವಕುಮಾರ್  ಮತ್ತು ತಮಿಳುನಾಡು ಸಿಎಂ ಜೋಸೆಫ್​ ವಿಜಯ್ ​ ಒಟ್ಟಿಗೆ ಕಾಣಿಸಿಕೊಂಡರು.  ನೀರು ಕೋಟ್ಯಂತರ ಜನರ ಜೀವನ, ಕೃಷಿ ಮತ್ತು ಜೀವನೋಪಾಯಕ್ಕೆ ಅತ್ಯಂತ ಮಹತ್ವದ್ದಾಗಿದೆ. ಅಂತಾರಾಜ್ಯ ನದಿಗಳ ನಿರ್ವಹಣೆ ಪರಸ್ಪರ ಸಹಕಾರ ಹಾಗೂ ಕಾನೂನಿನ ನಿಯಮಗಳಿಗೆ ಸಂಪೂರ್ಣ ಗೌರವದ ಆಧಾರದ ಮೇಲೆ ನಡೆಯಬೇಕು ಎಂದು ಸಿಎಂ ವಿಜಯ್​ ಹೇಳಿದ್ದಾರೆ.

ಈ ವಿಚಾರದಲ್ಲಿ ಎರಡು ಪ್ರಮುಖ ತತ್ವಗಳು ಮಾರ್ಗದರ್ಶಿಯಾಗಬೇಕು. ಮೊದಲನೆಯದಾಗಿ, ಕೆಳಹರಿವಿನ ರಾಜ್ಯಗಳ ನ್ಯಾಯಸಮ್ಮತ ಹಕ್ಕುಗಳು ಹಾಗೂ ಖಚಿತ ನದಿ ಹರಿವಿನ ಮೇಲೆ ಅವಲಂಬಿತವಾಗಿರುವ ಜನರ ಜೀವನೋಪಾಯವನ್ನು ಸಂಪೂರ್ಣವಾಗಿ ರಕ್ಷಿಸಬೇಕು. ಎರಡನೆಯದಾಗಿ, ಸುಪ್ರೀಂ ಕೋರ್ಟ್‌ನ ತೀರ್ಪುಗಳು, ನ್ಯಾಯಮಂಡಳಿಗಳ ಆದೇಶಗಳು ಮತ್ತು ನದಿ ನಿರ್ವಹಣೆಗಾಗಿ ರೂಪಿಸಲಾಗಿರುವ ಕಾನೂನುಬದ್ಧ ವ್ಯವಸ್ಥೆಗಳನ್ನು ಅಕ್ಷರಶಃ ಜಾರಿಗೊಳಿಸಬೇಕು.

ಇದನ್ನೂಓದಿ: ‘ನನ್ನ ಸಾ*ವಿಗೆ ಪತ್ನಿಯ ಅ*ನೈತಿಕ ಸಂಬಂಧವೇ ಕಾರಣ’ – ಡೆ*ತ್‌ನೋಟ್‌ ಬರೆದಿಟ್ಟು ಗಂಡ್ ಸೂಸೈ*ಡ್

ಕಾವೇರಿ ವಿಚಾರದಲ್ಲಿ, ಸುಪ್ರೀಂ ಕೋರ್ಟ್‌ನ ತೀರ್ಪು ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ಧಾರಗಳನ್ನು ಸಮಯಕ್ಕೆ ಸರಿಯಾಗಿ ಜಾರಿಗೊಳಿಸುವುದು ಅತ್ಯಗತ್ಯ. ಮುಲ್ಲಪೆರಿಯಾರ್ ವಿಚಾರದಲ್ಲಿ, ಅಣೆಕಟ್ಟಿನ ಸುರಕ್ಷತೆ ಮತ್ತು ನೀರಿನ ಮಟ್ಟ ನಿರ್ವಹಣೆ ನ್ಯಾಯಾಲಯದ ತೀರ್ಪುಗಳ ಮಾರ್ಗದರ್ಶನದಲ್ಲೇ ಮುಂದುವರಿಯಬೇಕು. ನೀರಿನ ಮಟ್ಟವನ್ನು 152 ಅಡಿಗೆ ಏರಿಸಲು ನೀಡಿರುವ ನ್ಯಾಯಾಲಯದ ತೀರ್ಪನ್ನೂ ಪಾಲಿಸಬೇಕು.

Kishor KV

One thought on “ಕಾವೇರಿ ಬಗ್ಗೆ ತಮಿಳುನಾಡು ಸಿಎಂ ವಿಜಯ್ ಮಾತು – ಡಿಕೆ ಶಿವಕುಮಾರ್ ಜೊತೆ ಏನೆಲ್ಲಾ ಮಾತುಕತೆ ನಡೀತು?

Leave a Reply

Your email address will not be published. Required fields are marked *