ಡಿಕೆ ಶಿವಕುಮಾರ್ ಮನೆಯಲ್ಲಿ ನಾಳೆ ಬ್ರೇಕ್ ಫಾಸ್ಟ್ – ಇಡ್ಲಿ ಜೊತೆ ನಾಟಿಕೋಳಿ ಸವಿಯಲಿದ್ದಾರೆ ಸಿದ್ದರಾಮಯ್ಯ

ಡಿಕೆ ಶಿವಕುಮಾರ್ ಮನೆಯಲ್ಲಿ ನಾಳೆ ಬ್ರೇಕ್ ಫಾಸ್ಟ್ – ಇಡ್ಲಿ ಜೊತೆ ನಾಟಿಕೋಳಿ ಸವಿಯಲಿದ್ದಾರೆ  ಸಿದ್ದರಾಮಯ್ಯ

ರಾಜ್ಯದಲ್ಲಿ ಸಿಎಂ ಕುರ್ಚಿ ಕಿತ್ತಾಟಕ್ಕೆ ಸಿದ್ದರಾಮಯ್ಯರ ಮನೆಯಲ್ಲಿ ನಡೆದ ಬ್ರೇಕ್‌ಫಾಸ್ಟ್ ಮೀಟಿಂಗ್ ತೆರೆ ಎಳೆದಿದೆ. ನಮ್ಮ ನಡುವೆ ಯಾವುದೇ ಕಿತ್ತಾಟ ಇಲ್ಲ, ಕಾಂಗ್ರೆಸ್‌ ಹೈ ಕಮಾಂಡ್ ಹಾಕಿದ ಗೆರೆ ದಾಟಲ್ಲ ಅಂತ ಹೇಳಿದ್ರು.  ಮೊನ್ನೆ ಸಿಎಂ ಸಿದ್ದರಾಮಯ್ಯ ಮನೆಗೆ ಇಡ್ಲಿ ತಿನ್ನೋಕೆ ಹೋಗಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಈಗ ಸಿಎಂ ಸಿದ್ದರಾಮಯ್ಯರನ್ನ ತಮ್ಮ ಮನೆಗೆ ಬ್ರೇಕ್ ಫಾಸ್ಟ್ ಗೆ ಆಹ್ವಾನಿಸಿದ್ದಾರೆ. ಸಿದ್ದರಾಮಯ್ಯರಿಗೆ ನಾಟಿ ಕೋಟಿ ಅಂದ್ರೆ ಬಲು ಇಷ್ಟ..ಹೀಗಾಗಿ ನಾಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಇಷ್ಟವಾದ ನಾಟಿ ಕೋಳಿ ಸಾರು ಅನ್ನು ಸಿದ್ದಪಡಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಕುಟುಂಬ ನಿರ್ಧರಿಸಿದೆ.

ಇದನ್ನೂ ಓದಿ: 7 ಕೋಟಿ ದರೋಡೆ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸ್‌ ಇಲಾಖೆ – RBIಗೆ ಪತ್ರ ಬರೆದ ಪೊಲೀಸರು!

ಬ್ರೇಕ್ ಫಾಸ್ಟ್ ತಿಂಡಿಗಳ ಜೊತೆಗೆ ನಾಟಿ ಕೋಳಿ ಸಾರು ಕೂಡ ಸಿಎಂ ಸಿದ್ದರಾಮಯ್ಯ ಅವರಿಗಾಗಿ ಸಿದ್ದವಾಗಲಿದೆ. ವಿಶೇಷ ಅಂದರೇ, ಈಗ ಡಿ.ಕೆ.ಶಿವಕುಮಾರ್ ನಾನ್ ವೆಜ್ ಊಟ ಸೇವಿಸುತ್ತಿಲ್ಲ. ತುಮಕೂರಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಸ್ವಾಮೀಜಿಗಳ ಸಲಹೆ ಮೇರೆಗೆ ಡಿಕೆಶಿ ನಾನ್ ವೆಜ್ ಬಿಟ್ಟಿದ್ದಾರೆ. ಆದ್ರೆ  ತಮ್ಮ ಮನೆಗೆ ಅತಿಥಿಯಾಗಿ ಬರುವ ಸಿಎಂ ಸಿದ್ದರಾಮಯ್ಯ ಅವರಿಗೆ ಅವರ ಇಷ್ಟದ ನಾನ್ ವೆಜ್ ಕೋಳಿ ಸಾರು ಅನ್ನು ಉಣಬಡಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದಾರೆ.

ಕುರ್ಚಿ ಕಚ್ಚಾಟಕ್ಕೆ ಬ್ರೇಕ್ ಹಾಕೋಕೆ ಕಳೆದ ಶನಿವಾರ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ ನೀಡಿ ಉಪ್ಪಿಟ್ಟು, ಇಡ್ಲಿ ಸೇವಿಸಿದ್ದರು. ಈಗ ಸಿಎಂ ಸಿದ್ದರಾಮಯ್ಯ ಅವರಿಗಾಗಿ ನಾಟಿ ಕೋಳಿ ಸಾರು ತಯಾರಾಗೋದು ವಿಶೇಷ. ಕಳೆದ 2-3  ವರ್ಷದಲ್ಲಿ 2ನೇ ಭಾರಿಗೆ  ಡಿ.ಕೆ.ಶಿವಕುಮಾರ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದಾರೆ. ಸಿಎಂ, ಡಿಸಿಎಂ ಇಬ್ಬರಿಗೂ ತಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಮಾಧ್ಯಮಗಳ ಮುಂದೆ ಜೊತೆಯಾಗಿ ಹೇಳುವಂತೆ ಸೂಚನೆ ಕೊಟ್ಟಿದೆ. ಹೀಗಾಗಿ ಮತ್ತೆ ಸಿಎಂ, ಡಿಸಿಎಂ ಇಬ್ಬರೂ ಜೋಡೆತ್ತುಗಳ ರೀತಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ.

Kishor KV