ಪೀಣ್ಯದ ಇಸ್ರೋ ನಿಯಂತ್ರಣ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ – ಇಸ್ರೋ ಅಧ್ಯಕ್ಷರಿಗೆ ಪೇಟ ತೊಡಿಸಿ ಸನ್ಮಾನ

ಪೀಣ್ಯದ ಇಸ್ರೋ ನಿಯಂತ್ರಣ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ – ಇಸ್ರೋ ಅಧ್ಯಕ್ಷರಿಗೆ ಪೇಟ ತೊಡಿಸಿ ಸನ್ಮಾನ

ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ -3 ಗೆ ಸಕ್ಸಸ್‌ ಕಂಡಿದೆ. ಚಂದ್ರಯಾನ – 3 ರ ಯಶಸ್ವಿ ಲ್ಯಾಂಡಿಂಗ್ ಹಿನ್ನೆಲೆ ದೇಶ, ವಿದೇಶಾದ್ಯಂತ ಇಸ್ರೋ ಕಾರ್ಯಾಚರಣೆಗೆ ಪ್ರಶಂಸೆ, ಅಭಿನಂದನೆಗಳು ವ್ಯಕ್ತವಾಗುತ್ತಿದೆ.  ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಪೀಣ್ಯದಲ್ಲಿರುವ ಇಸ್ರೋ ನಿಯಂತ್ರಣ ಕೇಂದ್ರಕ್ಕೆ ತೆರಳಿ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಭಾರತ ಮತ್ತು ಮನುಕುಲದ ಹೆಮ್ಮೆಯ ಕ್ಷಣ -ಚಂದ್ರಯಾನ-3 ಯಶಸ್ಸಿಗೆ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದು ಹೀಗೆ..

ಜುಲೈ. 14 ರಂದು ಶ್ರೀಹರಿಕೋಟದಿಂದ ಚಂದ್ರಯಾನ – 3 ಉಡಾವಣೆಯಾಗಿತ್ತು. ಆಗಸ್ಟ್‌ -23 ರ ಸಂಜೆ 6.04 ಕ್ಕೆ ವಿಕ್ರಮ್‌ ಲ್ಯಾಂಡ್‌ ಸುರಕ್ಷಿತವಾಗಿ ಲ್ಯಾಂಡಿಂಗ್‌ ಆಗಿದೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಗುರುವಾರ ಬೆಳಗ್ಗೆ ಇಸ್ರೋ ನಿಯಂತ್ರಣ ಕೇಂದ್ರಕ್ಕೆ ತೆರಳಿದ್ದಾರೆ. ಈ ವೇಳೆ ಚಂದ್ರಯಾನ- 3ರ ಸಾಧನೆ, ಕಾರ್ಯನಿರ್ವಹಣೆ, ಮುಂದಿನ ಕಾರ್ಯಚಟುಟಿಕೆ ಬಗ್ಗೆ ವಿಜ್ಞಾನಿಗಳು ಸಿಎಂ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ವೇಳೆ ಸಿಎಂ, ಇಸ್ರೋ ಅಧ್ಯಕ್ಷರಿಗೆ ಪೇಟ ತೊಡಿಸಿ ಸನ್ಮಾನ ಮಾಡಿದ್ದಾರೆ. ಬಳಿಕ ಮಾತನಾಡಿ,ನಿಮ್ಮ ಪ್ರಯತ್ನ, ಶ್ರಮದಿಂದ ಇದೆಲ್ಲ ಸಾಧ್ಯವಾಗಿದ್ದು ನಾಡಿನ ಜನರ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು. ಬುಧವಾರ ಸಂಜೆ ಉಪ‌ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಸ್ರೋಗೆ ಭೇಟಿ ನೀಡಿ ಅಭಿನಂದಿಸಿದ್ದರು.

ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 26ರಂದು ಬೆಂಗಳೂರಿನ ಇಸ್ರೊ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

ಸದ್ಯ ದಕ್ಷಿಣಾ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಬ್ರಿಕ್ಸ್ ಶೃಂಗಸಭೆಯಲ್ಲಿ ನಿರತರಾಗಿದ್ದಾರೆ. ನಿನ್ನೆ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗುತ್ತಿದ್ದಂತೆ ಜೊಹಾನ್ಸ್ ಬರ್ಗ್ ನಿಂದ ಪ್ರಧಾನಿ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಅಲ್ಲದೆ ಅಲ್ಲಿಂದಲೇ ಇಸ್ರೊ ಅಧ್ಯಕ್ಷ ಸೋಮನಾಥ್ ಅವರಿಗೆ ಖುದ್ದು ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದರು..

suddiyaana