ಬಿಜೆಪಿ ಅಸಮಾಧಾನಿತ ನಾಯಕರಿಗೆ ಕಾಂಗ್ರೆಸ್‌ ಗೇಟ್‌ ಬಂದ್‌! – ಆಪರೇಷನ್‌ ಹಸ್ತಕ್ಕೆ ಬ್ರೇಕ್‌ ಹಾಕಿದ್ರಾ ಸಿಎಂ ಸಿದ್ಧರಾಮಯ್ಯ

ಬಿಜೆಪಿ ಅಸಮಾಧಾನಿತ ನಾಯಕರಿಗೆ ಕಾಂಗ್ರೆಸ್‌ ಗೇಟ್‌ ಬಂದ್‌! – ಆಪರೇಷನ್‌ ಹಸ್ತಕ್ಕೆ ಬ್ರೇಕ್‌ ಹಾಕಿದ್ರಾ ಸಿಎಂ ಸಿದ್ಧರಾಮಯ್ಯ

ಲೋಕಸಭೆ ಚುನಾವಣೆಯ ಕಾವು ಜೋರಾಗಿದೆ. ಈಗಾಗಲೇ ಚುನಾವಣೆ ದಿನಾಂಕ ಘೋಷಣೆ ಮಾಡಲಾಗಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಬಿಜೆಪಿ ಈಗಾಗಲೇ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಟಿಕೆಟ್‌ ಕೈ ತಪ್ಪಿದ ನಾಯಕರು ಪಕ್ಷದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಟಿಕೆಟ್‌ ಆಸೆಗಾಗಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲು ಪ್ಲಾನ್‌ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್‌ ಸೇರಲು ಪ್ಲಾನ್‌ ಮಾಡಿಕೊಂಡವರಿಗೆ ಸಿಎಂ ಸಿದ್ಧರಾಮಯ್ಯ ಶಾಕ್‌ ನೀಡಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರಕ್ಕೆ ಸುಮಲತಾ ಶಿಫ್ಟ್! – ಮಂಡ್ಯದಿಂದ ಹೆಚ್ ಡಿ ಕುಮಾರಸ್ವಾಮಿ ಕಣಕ್ಕೆ?

ಹೌದು, ಮೈಸೂರು ಕ್ಷೇತ್ರದಿಂದ ಬಿಜೆಪಿಯ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಕಣಕ್ಕೆ ಇಳಿಸುವ ಪ್ರಸ್ತಾಪಕ್ಕೆ ಒಂದೇ ಮಾತಿನಲ್ಲಿ ಸಿಎಂ ಸಿದ್ದರಾಮಯ್ಯ ಆಗುವುದಿಲ್ಲ ಎಂದು ಖಡಕ್‌ ಆಗಿ ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದೀಗ ಟಿಕೆಟ್‌ಗಾಗಿ ಕಾಂಗ್ರೆಸ್ ಸೇರುವ ಬಿಜೆಪಿಗರ ಆಸೆಗೆ ಸಿಎಂ ಸಿದ್ದರಾಮಯ್ಯ ತಣ್ಣೀರು ಹಾಕಿದ್ದಾರೆ. ಬಿಜೆಪಿ ಅಸಮಾಧಾನಿತ ನಾಯಕರಿಗೆ ಕಾಂಗ್ರೆಸ್‌ ಗೇಟ್‌ ಬಂದ್‌ ಆಗಿದೆ.

ಬೆಂಗಳೂರು ಭಾಗದ ಪ್ರಭಾವಿ ಬಿಜೆಪಿ ಶಾಸಕರೊಬ್ಬರು ಕಾಂಗ್ರೆಸ್ ಜೊತೆ ಈಗಲೂ ಉತ್ತಮ ಸಂಬಂಧ ಹೊಂದಿದ್ದು ಅವರು ಬಿಜೆಪಿಯ ಮಾಜಿ ಮುಖ್ಯಮಂತ್ರಿಯನ್ನು ಕಾಂಗ್ರೆಸ್‌ ಸೇರಿಸುವ ಪ್ರಯತ್ನ ನಡೆಸಿದ್ದರು.  ಮೈಸೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿ ಮಾಜಿ ಮುಖ್ಯಮಂತ್ರಿಯನ್ನು ಕಣಕ್ಕೆ ಇಳಿಸೋಣ. ನಾನು ಮಾತನಾಡಿದ್ದು ಅವರು ಸ್ಪರ್ಧಿಸಲು ಒಪ್ಪಿಗೆ ನೀಡಿದ್ದಾರೆ. ನೀವು ಅನುಮತಿ ನೀಡಿದರೆ ಪಕ್ಷಕ್ಕೆ ಕರೆದುಕೊಂಡು ಬರುತ್ತೇನೆ ಎಂದು ತಿಳಿಸಿದ್ದರು.

ಆಪರೇಷನ್ ಕಾಂಗ್ರೆಸ್‌ಗೆ ಒಪ್ಪದ ಸಿಎಂ, ಬಿಜೆಪಿಯ ನಾಯಕರು ಚುನಾವಣೆ ವೇಳೆ ಕಾಂಗ್ರೆಸ್ ಸೇರಿ ಟಿಕೆಟ್ ಪಡೆಯುವುದು ಬೇಡ. ಜಗದೀಶ್ ಶೆಟ್ಟರ್ ಕೇಸ್‌ನಿಂದ ನಾವು ಪಾಠ ಕಲಿತ್ತಿದ್ದೇವೆ. ಸೋತರೂ, ಗೆದ್ದರೂ ನಮ್ಮ ಪಕ್ಷದವರೇ ಇರಲಿ. ಇನ್ನೊಮ್ಮೆ ಆ ರೀತಿಯ ತಪ್ಪು ಮಾಡಬಾರದು. ಬರುವುದಿದ್ದರೆ ಚುನಾವಣೆ ನಂತರ ಕಾಂಗ್ರೆಸ್‌ಗೆ ಬರಲಿ. ಆಗ ಸೇರ್ಪಡೆಯಾದರೆ ಅವರಿಗೆ ಏನಾದರೂ ವ್ಯವಸ್ಥೆ ಮಾಡೋಣಾ ಎಂದು ಹೇಳಿ ಆಪರೇಷನ್‌ ಕಾಂಗ್ರೆಸ್‌ಗೆ ಬ್ರೇಕ್‌ ಹಾಕಿದ್ದಾರೆ.

Shwetha M