ಆ ಹುಡುಗಿಯನ್ನು ಮದುವೆ ಆಗಬೇಕು ಅಂದ್ಕೊಂಡಿದ್ದೆ! –  ಫಸ್ಟ್ ಟೈಂ ಸಿದ್ಧರಾಮಯ್ಯ ಒನ್‌ಸೈಡ್ ಲವ್‌ಸ್ಟೋರಿ ರಿವೀಲ್!

ಆ ಹುಡುಗಿಯನ್ನು ಮದುವೆ ಆಗಬೇಕು ಅಂದ್ಕೊಂಡಿದ್ದೆ! –  ಫಸ್ಟ್ ಟೈಂ ಸಿದ್ಧರಾಮಯ್ಯ ಒನ್‌ಸೈಡ್ ಲವ್‌ಸ್ಟೋರಿ ರಿವೀಲ್!

ಕಾಲೇಜು ದಿನಗಳಲ್ಲಿ ಕ್ರಶ್‌, ಲವ್‌ ಎಲ್ಲಾ ಕಾಮನ್‌.. ಕಾಲೇಜು ದಿನಗಳಲ್ಲಿ ಅನೇಕರು ಪ್ರೀತಿಯಲ್ಲಿ ಬಿದ್ದಿರುತ್ತಾರೆ. ಇದೀಗ ಸಿಎಂ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ತಮ್ಮ ಕಾಲೇಜು ಲವ್‌ ಸ್ಟೋರಿ ರಿವೀಲ್‌ ಮಾಡಿದ್ದಾರೆ. ಕಾಲೇಜು ದಿನಗಳಲ್ಲಿ ತಾನೂ ಪ್ರೀತಿಯಲ್ಲಿ ಬಿದ್ದಿದ್ದೆ. ಆದ್ರೆ ಆ ಹುಡುಗಿ ಮದುವೆಗೆ ಒಪ್ಪಲಿಲ್ಲ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್‌ ಜಗಳ ವಿಕೋಪಕ್ಕೆ ತಿರುಗಿ ಗುಂಪು ಘರ್ಷಣೆ – 8 ಮಂದಿಗೆ ಗಾಯ, ಬೆಳಗಾವಿಯಲ್ಲಿ ಉದ್ವಿಗ್ನ  

ಹೌದು, ಸಿಎಂ ಸಿದ್ದರಾಮಯ್ಯ ಅವರು ಜನ ಸ್ಪಂದನ ಮತ್ತು ಮಾನವ ಮಂಟಪ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೋಂದಣಿ ವೆಬ್‌ಸೈಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಿದ್ರು.. ಈ ವೇಳೆ ತಮ್ಮ ಒನ್‌ಸೈಡ್ ಲವ್‌ಸ್ಟೋರಿಯನ್ನು ಸಿದ್ದರಾಮಯ್ಯ ರಿವೀಲ್ ಮಾಡಿದ್ದಾರೆ. ನಾನು ಅಂತರ್ಜಾತಿ ಮದುವೆ ಮಾಡಿಕೊಳ್ಳಬೇಕು ಎಂದು ಆಸೆಪಟ್ಟಿದ್ದೆ. ನಾನು ಲಾ ಓದುವಾಗ ಒಂದು ಹುಡುಗಿ ಜೊತೆ ಸ್ನೇಹ ಇತ್ತು. ಅದರ ಬಗ್ಗೆ ತಪ್ಪುತಪ್ಪಾಗಿ ಅಂದುಕೊಳ್ಳಬೇಡಿ. ಹುಡುಗಿ ಜೊತೆ ಸ್ನೇಹ ಇತ್ತು ಅಷ್ಟೇ ಎಂದು ತಮ್ಮ ಕಾಲೇಜು ದಿನದ ನೆನಪು ಮೆಲುಕು ಹಾಕಿದರು.

ಆಕೆಯನ್ನು ನಾನು ಮದುವೆ ಆಗಬೇಕು ಅಂದುಕೊಂಡಿದ್ದೆ. ಆದರೆ ಮದುವೆ ಆಗಲು ಆಗಲಿಲ್ಲ. ಯಾಕೆಂದರೆ ಹುಡುಗಿನೂ ಒಪ್ಪಲಿಲ್ಲ, ಹುಡುಗಿಯ ಮನೆಯವರೂ ಒಪ್ಪಲಿಲ್ಲ. ಹಾಗಾಗಿ ನಾನು ಅಂತರ್ಜಾತಿ ಮದುವೆ ಆಗಲಿಕ್ಕೆ ಆಗಲಿಲ್ಲ. ಕೊನೆಗೆ ನಮ್ಮ ಜಾತಿಯ ಹುಡುಗಿಯನ್ನೇ ಮದುವೆ ಮಾಡಿಕೊಳ್ಳಬೇಕಾಯಿತು ಎಂದು ಕಾಲೇಜು ದಿನದ ಹುಡುಗಿಯ ಸ್ನೇಹದ ವಿಚಾರ ಹೇಳಿ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.

Shwetha M