ಸಿಎಂ ಸಿದ್ಧರಾಮಯ್ಯ ನಮ್ಮ ಪಕ್ಷದವರಲ್ಲ, ಬೇರೆ ಪಕ್ಷದಿಂದ ಬಂದವರು! – ಡಿಕೆ ಸುರೇಶ್

ಸಿಎಂ ಸಿದ್ಧರಾಮಯ್ಯ ನಮ್ಮ ಪಕ್ಷದವರಲ್ಲ, ಬೇರೆ ಪಕ್ಷದಿಂದ ಬಂದವರು! – ಡಿಕೆ ಸುರೇಶ್

ಈ ಬಾರಿಯ ಲೋಕಸಭೆ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ. ರಾಜಕೀಯ ಜಿದ್ದಾಜಿದ್ದಿಗೆ ಹೆಸರಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಮತ್ತೆ ಕಣಕ್ಕಿಳಿದಿದ್ದಾರೆ. ಇವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧೆ ಮಾಡಿರುವುದರಿಂದ ಇದು ಪ್ರತಿಷ್ಠೆಯ ಕದನವಾಗಿ ರೂಪುಗೊಂಡಿದೆ. ಇದೀಗ ಡಿಕೆ ಬ್ರದರ್ಸ್‌ ಪ್ರಚಾರ ಕಾರ್ಯದಲ್ಲಿ ಬ್ಯೂಸಿಯಾಗಿದ್ದಾರೆ. ಈ ವೇಳೆ ಡಿಕೆ ಸುರೇಶ್‌ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಬೇರೆ ಪಕ್ಷದಿಂದ ಬಂದವರು ಆದರೂ ನಾವು ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಕೇಸ್‌ – ಶಂಕಿತ ಉಗ್ರರ ಬಳಿ ಇತ್ತು ಕರ್ನಾಟಕದ ಇಬ್ಬರ ನಕಲಿ ಆಧಾರ್‌ ಕಾರ್ಡ್‌!

ರಾಮನಗರದಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿಕೆ ಸುರೇಶ್‌, ಇವತ್ತು ಸಿದ್ದರಾಮಯ್ಯ ಅವರು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಅವರು ಮೂಲ ನಮ್ಮ ಪಕ್ಷದವರಲ್ಲ, ಬೇರೆ ಪಕ್ಷದಿಂದ ಬಂದವರು ಆದರೂ, ನಾವು ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಹೊಸ ಕಾಯಕಲ್ಪ ಕೊಟ್ಟಿದ್ದಾರೆ. ಬಡವರಿಗಾಗಿ ಒಂದಷ್ಟು ಕಾರ್ಯಕ್ರಮ ಕೊಟ್ಟಿದ್ದಾರೆ. ಹಾಗಾಗಿ ಹಣೇಲಿ ಬರೆದಿದ್ದರೆ ಎಲ್ಲಾ ಆಗುತ್ತೆ, ಬರೆದಿಲ್ಲ ಅಂದ್ರೆ ಏನೂ ಮಾಡೋಕಾಗಲ್ಲ ಎಂದು ನುಡಿದಿದ್ದಾರೆ.

ಜೆಡಿಎಸ್‌ನವರು ಸಿದ್ದರಾಮಯ್ಯ ಅವರಿಗೆ ಬೀಗ ಹಾಕಿ ಕೂರಿಸಿದ್ರು, ಸಸ್ಪೆಂಡ್ ಮಾಡಿದ್ದರು. ಆದ್ರೆ ಅವರ ಯೋಗ ಅಲ್ಲಿ ಬರೆದಿರಲಿಲ್ಲ, ಇಲ್ಲಿ (ಕಾಂಗ್ರೆಸ್) ಬರೆದಿತ್ತು. ಹಾಗೆಯೇ ನಿಮ್ಮ ಯೋಗ ಸಹ ಬರೆದಿರಬಹುದು. ಯಾರನ್ನೂ ಅಡ್ಡ ಹಾಕೋಕೆ ಹೋಗ್ಬೇಡಿ, ಪಕ್ಷ ಬೆಳೆಯುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.

Shwetha M