ಹುಲಿಯಾ ಘರ್ಜನೆಗೆ ಬೆಚ್ಚಿದ BJP – ಬಿಹಾರ ‘ಕೈ’ಗೆ ಸಿದ್ದರಾಮಯ್ಯ ಬಲ
ಸಿದ್ದು ಮಾತಿಗೆ ಮೋದಿಯೇ ಸೈಲೆಂಟ್

ಹುಲಿಯಾ ಘರ್ಜನೆಗೆ ಬೆಚ್ಚಿದ BJP – ಬಿಹಾರ ‘ಕೈ’ಗೆ ಸಿದ್ದರಾಮಯ್ಯ ಬಲಸಿದ್ದು ಮಾತಿಗೆ ಮೋದಿಯೇ ಸೈಲೆಂಟ್

ಸಿದ್ದರಾಮಯ್ಯ ಕ್ರೇಜ್ ಕೇವಲ ಕರ್ನಾಟಕದಲ್ಲಿ ಮಾತ್ರವಿಲ್ಲ.. ದೇಶದ ಬೇರೆ ರಾಜ್ಯದಲ್ಲೂ ಸಿದ್ದರಾಮಯ್ಯ ಹವಾ ಇದೆ. ಸಿದ್ದುನಾ ನೋಡೋಕೆ ಅವರ ಮಾತು ಕೇಳುವುದ್ದಕ್ಕೆ ಕಾಯ್ತಾ ಇರ್ತಾರೆ.. ನಿಮ್ಗೆ ಗೊತ್ತಿದ್ಯೋ ಗೊತ್ತಿಲ್ವೋ ಕಾಂಗ್ರೆಸ್‌ನಲ್ಲಿ ರಾಹುಲ್‌ ಗಾಂಧಿಗಿಂತ ಸಿದ್ದರಾಮಯ್ಯ ಕ್ರೇಜ್ ಜಾಸ್ತಿ ಇದೆ ಅಂತನೇ ಹೇಳಬುಹುದು.. ಕರ್ನಾಟಕದ ಸಿಎಂ ಆದ್ರೂ ಬೇರೆ ರಾಜ್ಯದಲ್ಲಿ ಇವರ ಮಾಡಿದ ಕೆಲಸ ಇವರ ಗ್ಯಾರಂಟಿ ಯೋಜನೆಗಳು ಮಾತನಾಡ್ತಿವೆ.. ಅಲ್ಲದೇ ಸಿದ್ದರಾಮಯ್ಯ ಮಾತನಾಡೋ ಸ್ಟೈಲ್‌ಗೆ ಬೇರೆ ರಾಜ್ಯದಲ್ಲಿ ಫ್ಯಾನ್ಸ್ ಇದ್ದಾರೆ. ಸದ್ಯ ಈಗ ಬಿಹಾರ ವಿಧನಾಸಭಾ ಎಲೆಕ್ಷನ್ ನಡೀತಾ ಇದೆ. ಬುಧವಾರ ಸಿದ್ದು ಪಾಟ್ನಾಕ್ಕೆ ಎಂಟ್ರಿಕೊಟ್ಟಿದ್ರು. ಆಗ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಕ್ರೇಜ್ ಜೋರಾಗಿತ್ತು. ಜಿಂದಾಬಾದ್ ಜಿಂದಾಬಾದ್ ಸಿದ್ದರಾಮಯ್ಯ ಜಿಂದಾಬಾದ್ ಅಂತ ಕೂಗಿದ್ರು. ಇದ್ದನ್ನ ಕೇಳಿ ಸಿದ್ದರಾಮಯ್ಯ ಫುಲ್ ಖುಷಿಯಾಗಿ ಹೋದ್ರು. ಅಲ್ಲದೇ ಬಿಹಾರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಾಕಾರಣಿ ಸಭೆಯಲ್ಲಿಯಲ್ಲಿ ಸಿದ್ದರಾಮಯ್ಯ ಬಿಜೆಪಿ ಮಾತಿನ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಆರ್‌ಎಸ್‌ಎಸ್‌ ವೋಟ್ ಚೋರಿ ಬಗ್ಗೆ ಮಾತನಾಡಿದ್ದು, ಸಿದ್ದರಾಮಯ್ಯ ಮಾತಿನಿಂದ ಬಿಹಾರದಲ್ಲಿ ಕಾಂಗ್ರೆಸ್‌ಗೆ ಒಂದು ರೀತಿಯ ಬಲ ಬಂದಂತೆ ಆಗಿದೆ.

ಇದನ್ನೂ ಓದಿ:

ಸಿದ್ದರಾಮಯ್ಯ ಮಾತು ಕೇಳುವುದ್ದಕ್ಕೆ ಒಂದು ಮಾ ಬಂಗ್ಲೆಗುಡ್ಡದಲ್ಲಿ ಸಿಕ್ಕ ಮತ್ತೊಂದು ಅಸ್ಥಿಪಂಜರದ ಗುರುತು ಪತ್ತೆ – 2013ರಿಂದ ನಾಪತ್ತೆಯಾದ ಈತ ಯಾರು?ಜಾ.. ಅವರ ಹಾವ ಭಾವದ ಜೊತೆ ರಾಗಾ ಎಳೆಯುತ್ತಾ ಮಾತಾಡುತ್ತಿದ್ದರೇ ಅವರ ಮಾತನ್ನ ಕೇಳಬೇಕು ಅನ್ಸುತ್ತೆ.. ಸಿದ್ದು ಹವಾ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಬಿಹಾರದಲ್ಲೂ ಇದೆ ಅನ್ನೋದ್ದನ್ನ  ತೋರಿಸಿದ್ದಾರೆ. ಅಲ್ಲೂ ಕೂಡ ಇವರಿಗೆ ಸಖತ್ ಫ್ಯಾನ್ಸ್ ಇದ್ದಾರೆ. ಅದ್ರಲ್ಲೂ ಈಗ ಪಾಟ್ನಾದಲ್ಲಿ ಸಿದ್ದರಾಮಯ್ಯ ಮಾಡಿರೋ ಬಿಜೆಪಿ ಮೇಲೆ ಮಾಡಿರೋ ಆರೋಪ ಈಗ ಸದ್ದು ಮಾಡ್ತಿದೆ.

ಬಿಜೆಪಿ ದೇಶದಲ್ಲಿ ವೋಟ್ ಕಳ್ಳತನ ಮಾಡ್ತಿದೆ

ಸಿದ್ದರಾಮಯ್ಯ ಬಿಜೆಪಿ ಮೇಲೆ ಬಿಹಾರದಲ್ಲಿ ಮೊದಲು ಗುಡುಗಿದ್ದು ವೋಟ್ ಜೋರಿ ಬಗ್ಗೆ..  ಬಿಹಾರದಲ್ಲಿ ತಮ್ಮ ಮಾತಿನ ಬಿರುಗಾಳಿ ಎಬ್ಬಿಸಿದ ಸಿದ್ದರಾಮಯ್ಯ ಕರ್ನಾಟಕದ ಮಹದೇವಪುರ, ಆಳಂದ ಸೇರಿದಂತೆ ದೇಶಾದ್ಯಂತ ಬಿಜೆಪಿ ವೋಟ್ ಚೋರಿ ಮಾಡ್ತಿದೆ. ಶಾಸಕರನ್ನು ಖರೀದಿಸಿ ಜನರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಸಿದ್ದರಾಮಯ್ಯ ಗುಡುಗಿದ್ರು. ಇದೇ ಟೈಂನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನ ಹೊಗಳಿದ್ರು. ಚುನಾವಣಾ ಅಕ್ರಮಗಳ ವಿರುದ್ಧ ನಡೆಸುತ್ತಿರುವ ಹೋರಾಟವು ದೇಶದ ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿಯಾಗಿದೆ ಎಂದು ಶ್ಲಾಘಿಸಿದರು. ಬಿಹಾರದ ಸಿಐಆರ್ ದುರಂತವು ಬಿಜೆಪಿಯ ಅಧಿಕಾರ ದಾಹವನ್ನು ಬಯಲಿಗೆಳೆಯುತ್ತದೆ ಅಂತ ಹೇಳಿದ್ರು. ಬಿಜೆಪಿ ಮತ ಕಳ್ಳತನದಲ್ಲಿ ತೊಡಗಿದೆ. ಮತಕಳ್ಳತನ ಮಾಡುವುದು, ಶಾಸಕರನ್ನು ಕೊಳ್ಳುವುದು ಮತ್ತು ಜನರ ಧ್ವನಿಯನ್ನು ಹತ್ತಿಕ್ಕುವುದು ಅವರ ಕೆಲಸ ಅಂತ ರಾಹುಲ್ ಗಾಂಧಿ ಮಾಡಿರೋ ವೋಟ್ ಜೋರಿ ಆರೋಪಕ್ಕೆ ಸಿದ್ದರಾಮಯ್ಯ ಧ್ವನಿ ಗೂಡಿಸಿದ್ದಾರೆ.

BJP-RSS ದೇಶದ ಆತ್ಮ ಅಳಿಸಿಹಾಕಲು ಬಯುಸುತ್ತಿದೆ

ನ್ನೂ ಸಿದ್ದರಾಮಯ್ಯ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ದೊಡ್ಡ ಆರೋಪವನ್ನೇ ಮಾಡಿದ್ದಾರೆ.  ಬಿಜೆಪಿ-ಆರ್‌ಎಸ್ಎಸ್ ಒಕ್ಕೂಟವು ಈ ದೇಶದ ಆತ್ಮವನ್ನು ಅಳಿಸಿಹಾಕಲು ಬಯಸಿದೆ. ಆದರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಅಂದಿದ್ದಾರೆ. ಅಂದ್ರೆ ಆರ್‌ಎಸ್‌ಎಸ್‌ ದೇಶಕ್ಕೆ ಮಾರಕ ಅನ್ನೋ ಅರ್ಥದಲ್ಲಿ ಸಿದ್ದರಾಮ್ಯ ಬಿಹಾರದಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ ನಾವು ಕೇವಲ ಚುನಾವಣೆಗಾಗಿ ಹೋರಾಡುತ್ತಿಲ್ಲ. ನಾವು ಭಾರತವನ್ನು ಉಳಿಸಲು ಹೋರಾಡುತ್ತಿದ್ದೇವೆಂದು ಸಿದ್ದರಾಮಯ್ಯ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಈ ಹೇಳಿಕೆ ದೊಡ್ಡ ಚರ್ಚೆಯನ್ನ ಹುಟ್ಟು ಹಾಕಿದ್ದು.. ಆರ್‌ಎಸ್‌ಎಸ್‌  ದೇಶಕ್ಕಾಗಿ ಇರೋದು ಹೇಗೆ ದೇಶದ ಆತ್ಮ ಅಳಿಸುತ್ತೆ ಅನ್ನೋ ಪ್ರಶ್ನೆಯನ್ನ ಮಾಡಿದ್ದಾರೆ.

ಮೋದಿ ಸರ್ಕಾರ ವಿದೇಶಾಂಗ ನೀತಿಯಲ್ಲಿ ವಿಫಲ

ನರೇಂದ್ರ ಮೋದಿ ಸರ್ಕಾರವು ವಿದೇಶಾಂಗ ನೀತಿಯಲ್ಲಿ ವಿಫಲವಾಗಿದೆ. ಭಾರತದ ವಿದೇಶಾಂಗ ನೀತಿಯು ಇಂದು ಅಧೀನತೆಗೆ ಇಳಿದಿದೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಹೇಳಿದಾಗ, ಮೋದಿಯವರು ಬಾಯಿ ತೆರೆಯಲಿಲ್ಲ. ಇದು ರಾಜತಾಂತ್ರಿಕತೆಯಲ್ಲ, ಬದಲಾಗಿ ನಮ್ಮ ಸಾರ್ವಭೌಮತ್ವದ ರಾಜಿಯಾಗಿದೆ ಎಂದುಮೋದಿ ವಿರುದ್ದ ವಾಗ್ದಾಳಿ ನಡೆಸಿದ್ರು.

 ಬಿಜೆಪಿ ಆಡಳಿತಕ್ಕೆ ಬಡವರು ಬಲಿ 

ಬಿಜೆಪಿಯ ಆಡಳಿತದಲ್ಲಿ ಸಾಮಾನ್ಯ ಭಾರತೀಯರು ನಲುಗಿ ಹೋಗುತ್ತಿದ್ದಾರೆ ಎಂದ ಸಿದ್ದರಾಮಯ್ಯ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ, ನಿರುದ್ಯೋಗ ನಮ್ಮ ಯುವಕರ ಬೆನ್ನೆಲುಬನ್ನು ಮುರಿದಿದೆ, ಅಸಮಾನತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಮೋದಿಯವರ ಸರ್ಕಾರದಿಂದ,ಭಾರತದಲ್ಲಿ ಬಿಲಿಯನೇರ್ಗಳು ಪ್ರಗತಿ ಹೊಂದುತ್ತಿದ್ದು, ಬಡವರು ಎರಡು ಹೊತ್ತಿನ ಊಟಕ್ಕಾಗಿ ಪರದಾಡುತ್ತಿರುವವ ದೇಶವನ್ನಾಗಿ ಮಾಡಿದೆ. ಆದರೆ ಈ ಕತ್ತಲಿನಲ್ಲಿ ಕಾಂಗ್ರೆಸ್ ಆಶಾಕಿರಣವಾಗಿದೆ ಎಂದು ಸಿದ್ದು ಬಿಜೆಪಿ ಮೇಲೆ ಮಾತಿನ ಬಾಣ ಬಿಟ್ಟಿದ್ರು. ಸಿದ್ದರಾಮಯ್ಯ ಅವರ ಈ ಮಾತುಗಳು ಬಿಹಾರದಲ್ಲಿ ಕಾಂಗ್ರೆಸ್ ವೋಟ್ ಹೆಚ್ಚುವಂತೆ ಮಾಡಿದೆ. ಈಗಾಗಲೇ ಬಿಹಾರದಲ್ಲಿ ಬಿಜೆಪಿ ಮತ್ತು JDU ಸ್ಟ್ರಾಂಗ್ ಇದೆ. ಈ ಕೋಟೆ ಓಡೆಯೆ ಕಾಂಗ್ರೆಸ್ ಮತ್ತು RJD ಒದ್ದಾಡುತ್ತಿದೆ. ಹೀಗಾಗಿ ಎಲೆಕ್ಷನ್ ಡೇಟ್ ಫಿಕ್ಸ್ ಆದ ಮೇಲೆ ಮತ್ತೆ ಸಿಎಂ ಸಿದ್ದರಾಮಯ್ಯರನ್ನ ಕರೆದುಕೊಂಡು ಹೋಗಿ ಬಿಹಾರದಲ್ಲಿ ರ್ಯಾಲಿ ಮಾಡಿಸಿ ವೋಟ್‌ಗಳನ್ನ ಕಾಂಗ್ರೆಸ್‌ ಅತ್ತ ಸೆಳೆಯೋಕೆ ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಈಗಗಾಲೇ ಬಿಹಾರದಲ್ಲಿ ಸಿದ್ದರಾಮಯ್ಯ ಅವರಿಗೆ ಇರೋ ಬೆಂಬಲ ನೋಡಿರೋ ಕಾಂಗ್ರೆಸ್ ಹೈಕಮಾಂಡ್, ಬಿಹಾರ ಎಲೆಕ್ಷನ್‌ನಲ್ಲಿ ಸಿದ್ದರಾಮಯ್ಯರನ್ನ ಚೆನ್ನಾಗಿ ಬಳಸಿಕೊಂಡು ಎಲೆಕ್ಷನ್ ಗೆಲ್ಲೋಕೆ ರೆಡಿಯಾಗ್ತಿದೆ.

Kishor KV