ವಿಮಾನದಲ್ಲಿ ಉಚಿತ ಪ್ರಯಾಣ..! – ಸಿಎಂ ಬಂಪರ್ ಆಫರ್

ವಿಮಾನದಲ್ಲಿ ಉಚಿತ ಪ್ರಯಾಣ..! – ಸಿಎಂ ಬಂಪರ್ ಆಫರ್

ಚುನಾವಣೆ ಸಮೀಪಿಸುತ್ತಿದ್ದಂತೆ ಮಧ್ಯಪ್ರದೇಶದಲ್ಲಿ ಭರ್ಜರಿ ಆಫರ್ ಕೂಡಾ ಶುರುವಾಗಿದೆ. ಅದರಲ್ಲೂ ಈ ಬಾರಿ ನೀಡಿರುವುದು ಮಾತ್ರ ಬರೀ ಆಫರ್ ಅಲ್ಲ. ಬೊಂಬಾಟ್ ಆಫರ್. ಹಿರಿಯ ನಾಗರಿಕರು ತೀರ್ಥಕ್ಷೇತ್ರಗಳಿಗೆ ಉಚಿತವಾಗಿಯೇ ವಿಮಾನದಲ್ಲಿ ಪ್ರಯಾಣ ಮಾಡಬಹುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಣೆ ಮಾಡಿದ್ದಾರೆ.  ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರಿಗೆ ಉಚಿತವಾಗಿ ನೀಡಲಾಗುತ್ತಿರುವ ದರ್ಶನ ವ್ಯವಸ್ಥೆಯಲ್ಲಿ ವಿಮಾನ ಪ್ರಯಾಣ ಸೌಲಭ್ಯವನ್ನೂ ಸೇರಿಸಲಾಗುವುದು ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಇದನ್ನೂ ಓದಿ:  ಚುನಾವಣಾ ಹೊಸ್ತಿಲಲ್ಲೇ ಪ್ರಧಾನಿ ಮೋದಿ ರೌಂಡ್ಸ್ –  ಬಿಜೆಪಿ ನಾಯಕರಿಗೆ ‘ಬೂಸ್ಟರ್’ ಡೋಸ್!

ಈ ಆಫರ್ 60 ವರ್ಷ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರಿಗೆ ಮಾತ್ರ.  ಈ ಯೋಜನೆಯಲ್ಲಿರುವ ಕ್ಷೇತ್ರಗಳಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಖರ್ಚಿನಲ್ಲೇ ವಿಮಾನ ಪ್ರಯಾಣದ ವ್ಯವಸ್ಥೆ ಇರುತ್ತದೆ. ಈಗಾಗಲೇ ವಿಶೇಷ ರೈಲು, ಬಸ್, ಆಹಾರ, ವಸತಿ, ಗೈಡ್ ಇತ್ಯಾದಿ ಹಲವು ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ. ಈಗ ಸಿಎಂ ಅವರು ವಿಮಾನದ ವ್ಯವಸ್ಥೆಯನ್ನೂ ಮಾಡುವುದಾಗಿ ಹೇಳಿದ್ದಾರೆ. ಇದು ಮಧ್ಯಪ್ರದೇಶದ ಹಿರಿಯ ನಾಗರಿಕರಿಗೆ ಮಾತ್ರ ಲಭ್ಯ ಇರುವ ಉಚಿತ ದರ್ಶನ ಸೇವೆ. ಬದ್ರಿನಾಥ್, ಕೇದಾರನಾಥ್, ಅಮರನಾಥ್, ಶಿರಡಿ, ರಾಮೇಶ್ವರಂ, ಶ್ರವಣಬೆಳಗೊಳ ಸೇರಿದಂತೆ ಹಲವು ಧಾರ್ಮಿಕ ಸ್ಥಳಗಳು ಈ ಪಟ್ಟಿಯಲ್ಲಿವೆ. ಮುಸ್ಲಿಮರ ಅಜ್ಮೇರ್ ಷರೀಫ್ ಮಸೀದಿ, ಕ್ರೈಸ್ತರ ವೇಲಂಕಣಿ ಚರ್ಚ್ ಕೂಡ ಒಳಗೊಂಡಿವೆ.

ಈ ಅವಕಾಶ ಕೇವಲ ಹಿರಿಯ ನಾಗರಿಕರಿಗೆ ಮಾತ್ರವಲ್ಲ, ಶೇ. 60ರಷ್ಟು ದೈಹಿಕ ನ್ಯೂನತೆ ಇರುವ ವಿಶೇಷ ಚೇತನದ ವ್ಯಕ್ತಿಗಳು ತಮ್ಮೊಂದಿಗೆ ಒಬ್ಬ ಪಾಲಕನನ್ನು ಕರೆದೊಯ್ಯಬಹುದು. ಪುರುಷರಾದರೆ 60 ವರ್ಷ ಮೇಲ್ಪಟ್ಟಿರಬೇಕು. ಮಹಿಳೆಯಾದರೆ 58 ವರ್ಷ ಮೇಲ್ಪಟ್ಟಿರಬೇಕು. ದಂಪತಿ ಪೈಕಿ ವಯೋಮಿತಿಯಲ್ಲಿ ಯಾರಾದರೊಬ್ಬರು ಅರ್ಹರಿದ್ದರೆ ಸಾಕು ಇಬ್ಬರೂ ಜೊತೆಯಲ್ಲಿ ಹೋಗಿ ಉಚಿತ ದರ್ಶನ ಭಾಗ್ಯ ಪಡೆಯಬಹುದು.

suddiyaana