ವಿಧಾನಸಭೆಯಲ್ಲೂ ವಿಶ್ವಾಸಮತ ಯಾಚನೆ ಗೆದ್ದ ವಿಜಯ್‌- ದಳಪತಿ ಸರ್ಕಾರಕ್ಕೆ 144 ಶಾಸಕರ ಬೆಂಬಲ

ವಿಧಾನಸಭೆಯಲ್ಲೂ ವಿಶ್ವಾಸಮತ ಯಾಚನೆ ಗೆದ್ದ ವಿಜಯ್‌- ದಳಪತಿ ಸರ್ಕಾರಕ್ಕೆ 144 ಶಾಸಕರ ಬೆಂಬಲ

ದಳಪತಿ ವಿಜಯ್ ಈಗ ತಮಿಳುನಾಡಿನ ಸಿಎಂ. ಮೊದಲ ರಾಜಕೀಯ ಪ್ರಯತ್ನದಲ್ಲಿಯೇ ಯಶಸ್ವಿಯಾಗಿರುವ ವಿಜಯ್ ಇಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೀಗ ದಳಪತಿ ಮತ್ತೊಂದು ಪರೀಕ್ಷೆಯಲ್ಲೂ ಪಾಸ್‌ ಆಗಿದ್ದಾರೆ. ಇದೀಗ ವಿಜಯ್‌ ವಿಧಾನಸಭೆಯಲ್ಲೂ ನಿರೀಕ್ಷೆಗೂ ಮೀರಿ ವಿಶ್ವಾಸಮತ ಗೆದ್ದಿದ್ದಾರೆ.

ಇದನ್ನೂ ಓದಿ: RCB Vs KKR ನಡುವೆ ಇಂದು ಹೈವೋಲ್ಟೇಜ್ ಮ್ಯಾಚ್ – ಪ್ಲೇ ಆಫ್ಸ್ ರೇಸ್ ಬ್ಯಾಟಲ್ ಗೆಲ್ಲೋದ್ಯಾರು?

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ ಸರ್ಕಾರ ರಚನೆಗೆ ಸಾಕಷ್ಟು ಕಸರತ್ತು ನಡೆದಿತ್ತು. ಹಲವು ದಿನಗಳ ಕಸರತ್ತಿನ ಬಳಿಕ ಕೊನೆಗೂ ಮ್ಯಾಜಿಕ್ ಸಂಖ್ಯೆಗೆ ಬೇಕಿದ್ದ ಬೆಂಬಲ ಪಡೆದು ಮೈತ್ರಿ ಸರ್ಕಾರ ರಚನೆ ಮಾಡಿರುವ ವಿಜಯ್, ಇದೀಗ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಿದ್ದಾರೆ. ಸರ್ಕಾರಕ್ಕೆ 144 ಮಂದಿ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಟಿವಿಕೆ, ಕಾಂಗ್ರೆಸ್‌, ಸಿಪಿಎಂ, ಸಿಪಿಐ, ಮುಸ್ಲಿಮ್‌ ಲೀಗ್‌, ವಿಸಿಕೆ ಜೊತೆ ಎಐಡಿಎಂಕೆ 22 ಮಂದಿ ವಿಜಯ್‌ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್‌ ಸರ್ಕಾರಕ್ಕೆ 118 ಶಾಸಕರ ಬೆಂಬಲವಿತ್ತು. ಆದರೆ, ಬಹುಮತ ಸಾಬೀತು ಪಡಿಸುವ ವೇಳೆ ಡಿಎಂಕೆ ಮತ್ತು ಡಿಎಂಡಿಕೆ ಶಾಸಕರು ಸಭಾತ್ಯಾಗ ಮಾಡಿದರು. ಪಿಎಂಕೆಯ ನಾಲ್ವರು ಶಾಸಕರು ಮತ್ತು ಒಬ್ಬ ಬಿಜೆಪಿ ಶಾಸಕರು ಮತದಾನದಿಂದ ದೂರ ಉಳಿದರು. ಸದನದಲ್ಲಿ ಉಳಿದ 22 ಡಿಎಂಕೆ ಶಾಸಕರು ವಿಶ್ವಾಸಮತದ ವಿರುದ್ಧ ಮತ ಹಾಕಿದರು.

Shwetha M

Leave a Reply

Your email address will not be published. Required fields are marked *