ದಳ ಶಾಸಕರ ಬೆಂಬಲ ನನಗೆ ಇದೆ ಎಂದಿದ್ದ ಸಿ.ಎಂ ಇಬ್ರಾಹಿಂ – ಜೆಡಿಎಸ್ ಇಬ್ಭಾಗವಾಗುವ ಭಯದಲ್ಲಿದ್ರಾ ದೊಡ್ಡಗೌಡರು..?

ದಳ ಶಾಸಕರ ಬೆಂಬಲ ನನಗೆ ಇದೆ ಎಂದಿದ್ದ ಸಿ.ಎಂ ಇಬ್ರಾಹಿಂ – ಜೆಡಿಎಸ್ ಇಬ್ಭಾಗವಾಗುವ ಭಯದಲ್ಲಿದ್ರಾ ದೊಡ್ಡಗೌಡರು..?

ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಬಳಿಕ ಸಿಎಂ ಇಬ್ರಾಹಿಂ ತೀವ್ರ ಅಸಮಾಧಾನಗೊಂಡಿದ್ದಾರೆ. ಬಳಿಕ ಬಹಿರಂಗವಾಗಿಯೇ ಹೇಳಿಕೆಗಳನ್ನ ನೀಡುತ್ತಿದ್ರು. ಇದೀಗ ಜೆಡಿಎಸ್ ವರಿಷ್ಠರು ಇಬ್ರಾಹಿಂ ಅವರನ್ನ ಉಚ್ಛಾಟನೆ ಮಾಡಿದ್ದಾರೆ. ದೊಡ್ಡಗೌಡರು ಇಂಥಾದ್ದೊಂದು ನಿರ್ಧಾರ ಕೈಗೊಳ್ಳಲು ಕಾರಣ ಅಸಮಾಧಾನ. ಹಿಂದಿನಿಂದಲೂ ಕೂಡ ಇಬ್ರಾಹಿಂ ಅವರನ್ನ ನಿರ್ಲಕ್ಷ್ಯ ಮಾಡಲಾಗಿತ್ತು. ಜೆಡಿಎಸ್ ಬಿಜೆಪಿ ಮೈತ್ರಿ ವೇಳೆಯೂ ಅವ್ರನ್ನ ಹೊರಗಿಡಲಾಗಿತ್ತು.

ಇದನ್ನೂ ಓದಿ : ಸಿ.ಎಂ ಇಬ್ರಾಹಿಂ ಉಚ್ಛಾಟನೆ ಹಿಂದಿದೆ ‘ರೆಬೆಲ್’ ರಾಜಕೀಯ – ಪುತ್ರನಿಗೆ ದೊಡ್ಡಗೌಡ್ರು ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದ್ದರ ಗುಟ್ಟೇನು?

ಸಿಎಂ ಇಬ್ರಾಹಿಂ ರಾಜ್ಯಾಧ್ಯಕ್ಷ ಆಗಿದ್ರೂ ಅವ್ರನ್ನ ಹೊರಗಿಟ್ಟು ಹೆಚ್ ಡಿಕೆ ನಿರ್ಧಾರ ಕೈಗೊಂಡಿದ್ದಾರೆ. ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆಯೂ ಇಬ್ರಾಹಿಂ ಬಳಿ HDK ಚರ್ಚಿಸಿಯೇ ಇರಲಿಲ್ಲ.  ಪುತ್ರ ನಿಖಿಲ್ ಜೊತೆ ತೆರಳಿ ಕುಮಾರಸ್ವಾಮಿ ಅಮಿತ್ ಶಾರನ್ನ ಭೇಟಿಯಾಗಿದ್ರು. ಅಮಿತ್ ಶಾ ಭೇಟಿಯೂ ಗೊತ್ತಿರಲಿಲ್ಲ ಅಂತಾ ಇಬ್ರಾಹಿಂ ಹೇಳ್ತಿದ್ದಾರೆ. ಈ ತಿಕ್ಕಾಟದ ನಡುವೆಯೇ ನಮಗೆ ಮುಸ್ಲಿಮರಷ್ಟೇ ಮತದಾರರಿಲ್ಲ ಅಂತಾ ಹೆಚ್​ಡಿಕೆ ಹೇಳಿದ್ರು. ಬಳಿಕ ಜೆಡಿಎಸ್ ಬಗ್ಗೆ ಇಬ್ರಾಹಿಂ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ರು. ಕಳೆದ ವಾರ ಬೆಂಬಲಿಗರು ಮತ್ತು ಮುಸ್ಲಿಂ ನಾಯಕರ ಜೊತೆ ಸಭೆ ನಡೆಸಿ ಚರ್ಚಿಸಿದ್ರು. ಸಭೆ ಬಳಿಕ ಬಿಜೆಪಿ ಜತೆ ಜೆಡಿಎಸ್ ಹೋಗಲ್ಲ, ನಮ್ಮದೇ ಒರಿಜಿನಲ್ ಜೆಡಿಎಸ್. ಇಂಡಿಯಾ ಒಕ್ಕೂಟಕ್ಕೆ ನಮ್ಮ ಬೆಂಬಲ ಅಂತಾ ಇಬ್ರಾಹಿಂ ಬಹಿರಂಗವಾಗಿಯೇ ಹೇಳಿದ್ರು.  ಕುಮಾರಸ್ವಾಮಿ ಮತ್ತು ನಿಖಿಲ್ ಉಚ್ಛಾಟನೆಗೆ ಕಾಲ ಪಕ್ವವಾಗಿಲ್ಲ. 19 ಶಾಸಕರನ್ನ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದೇನೆ, ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ ಮೈತ್ರಿಯಿಂದಾಗಿ ಹಲವು ಶಾಸಕರ ಬೆಂಬಲ ನಮಗೆ ಇದೆ ಅಂತಾ ಇಬ್ರಾಹಿಂ ಹೇಳಿದ್ದಾರೆ. ಮೈತ್ರಿ ವಿಚಾರವಾಗಿಯೇ ಕುಮಾರಸ್ವಾಮಿ ಮತ್ತು ಇಬ್ರಾಹಿಂ ನಡುವೆ ಟಾಕ್ ವಾರ್ ಜೋರಾಗ್ತಿದೆ. ಈ ಬೆಳವಣಿಗೆಗಳ ನಡುವೆಯೇ HDK, ನಿಖಿಲ್ ಉಚ್ಛಾಟನೆ ಪತ್ರ ವೈರಲ್ ಆಗಿದೆ.  ಶಾಸಕರು ಡಿವೈಡ್ ಆಗುವ ಭೀತಿಯಲ್ಲಿ ಹೆಚ್ ಡಿ ದೇವೇಗೌಡ ಅವರು ಇದ್ರು. ಈ ನಡುವೆ ಇಬ್ರಾಹಿಂ ರನ್ನೂ HDD ಪಕ್ಷದಿಂದ ಉಚ್ಛಾಟನೆ ಮಾಡಿದ್ದ ಪತ್ರ ವೈರಲ್ ಆಗಿತ್ತು.

ಹೀಗೆ ಈ ಎಲ್ಲಾ ಬೆಳವಣಿಗೆಗಳ ನಡುವೆ ಜೆಡಿಎಸ್ ವರಿಷ್ಠರು ಇಬ್ರಾಹಿಂರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಿದ್ದಾರೆ. ದೇವೇಗೌಡರ ನಡೆಯಿಂದ ಇಬ್ರಾಹಿಂ ಕೂಡ ಸಿಟ್ಟಾಗಿದ್ದಾರೆ. ದೇವೇಗೌಡರಿಗಾಗಿ ನಾಲ್ಕು ವರ್ಷ ವಿಧಾನಪರಿಷತ್ ಸದಸ್ಯ ಅವಧಿ ಮುಗಿಯುವ ಮೊದಲೇ ಬಿಟ್ಟು ಬಂದೆ. ಈ ಮಗನಿಗೆ ಎಂತಹ ಪ್ರೀತಿ ತೋರಿಸಿದ್ದೀರಿ ನೀವು. ಎಷ್ಟು ಜನರ ಮನೆ ಹಾಳು ಮಾಡಬೇಕು ಎಂದುಕೊಂಡಿದ್ದೀರಿ ಎಂದು ಹರಿಹಾಯ್ದಿದ್ದಾರೆ. ಈ ಮೂಲಕ ಬಿಜೆಪಿ ಜೊತೆಗಿನ ಮೈತ್ರಿ ಬಳಿಕ ಜೆಡಿಎಸ್ ನಲ್ಲಿ ಬಹುದೊಡ್ಡ ಬದಲಾವಣೆಗಳೇ ನಡೆಯುತ್ತಿವೆ. ಇದೀಗ ರಾಜ್ಯಾಧ್ಯಕ್ಷ ಪಟ್ಟವನ್ನ ಕುಮಾರಸ್ವಾಮಿಯವರೇ ಏರಿದ್ದಾರೆ.

Shantha Kumari