ಸೋಲಿನ ಹೊಣೆ ಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ – ಖಾದರ್ ರನ್ನ ಸ್ಪೀಕರ್ ಮಾಡಿದ್ದಕ್ಕೆ ಇಬ್ರಾಹಿಂ ಕಿಡಿ!

ಸೋಲಿನ ಹೊಣೆ ಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ – ಖಾದರ್ ರನ್ನ ಸ್ಪೀಕರ್ ಮಾಡಿದ್ದಕ್ಕೆ ಇಬ್ರಾಹಿಂ ಕಿಡಿ!

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಹೀನಾಯವಾಗಿ ಸೋಲನುಭವಿದೆ. ಕಾಂಗ್ರೆಸ್ ಪಕ್ಷ 135 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ರೆ 66 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹಾಗೇ ಜೆಡಿಎಸ್ ಪಕ್ಷ ಈ ಬಾರಿ ಕೇವಲ 19 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಉಳಿದಂತೆ ನಾಲ್ಕು ಕ್ಷೇತ್ರಗಳಲ್ಲಿ ಪಕ್ಷೇತರರು ಜಯ ಸಾಧಿಸಿದ್ದಾರೆ. ಜೆಡಿಎಸ್ ಸೋಲಿನ ನೈತಿಕ ಹೊಣೆ ಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬುಧವಾರ ಸಿ.ಎಂ.ಇಬ್ರಾಹಿಂ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ : ‘ಒಳ್ಳೇದು ಮಾಡಿದ್ದರೆ ನಾನು ಇಲ್ಲೇಕೆ ಇರುತ್ತಿದ್ದೆ’ – ಡಾ.ಕೆ ಸುಧಾಕರ್​ಗೆ ಪ್ರದೀಪ್ ಈಶ್ವರ್ ಟಾಂಗ್!

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಇಬ್ರಾಹಿಂ, ಇವತ್ತು ದೇವೇಗೌಡ್ರು ಹಿರಿಯರು, ಮುಖಂಡರು ಎಲ್ಲರನ್ನ ಕರೆದಿದ್ದಾರೆ. ಫಲಿತಾಂಶ ಬಂದ ಮರುದಿನ ಸೋಲಿನ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ‌ ಸಲ್ಲಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಗೇ ಹೊಸ ಸರ್ಕಾರ ರಚನೆಯಾಗಿದೆ ಶುಭವಾಗಲಿ. ಕಾಂಗ್ರೆಸ್‌ನಲ್ಲಿದ್ದರೆ ಮಂತ್ರಿಯಾಗುತ್ತಿದ್ರಿ ಎಂಬ ಪ್ರಶ್ನೆಗೆ ಉತ್ತರಿಸಿ, ಗೌರವ ಇಲ್ಲದ ಕಡೆ ಸ್ಥಾನಕ್ಕೆ ಹೋಗಲ್ಲ, ಮಾನಕ್ಕೆ ಹೋಗುತ್ತೇವೆ. ಯು.ಟಿ.ಖಾದರ್‌ನ ಡಿಸಿಎಂ ಮಾಡಬಹುದಿತ್ತಲ್ಲ. ಈಗ ಅವರು ಎದ್ದೇಳುವ ಹಾಗೂ ಇಲ್ಲ, ಮಾತನಾಡುವ ಹಾಗೂ ಇಲ್ಲ. ಯು‌.ಟಿ.ಖಾದರ್ ಸ್ಪೀಕರ್ ಮಾಡಿದ ಕಾಂಗ್ರೆಸ್ ನಡೆಗೆ ಟೀಕೆ ಮಾಡಿದರು.

ಬಿಜೆಪಿ ವಿರೋಧಿ ಅಲೆ ಲಾಭ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೂ ನಾವು ರಾಜ್ಯದಲ್ಲಿ 60 ಲಕ್ಷ ಮತ ಪಡೆದಿದ್ದೇವೆ. ಜಿಪಂ, ತಾಪಂ ಚುನಾವಣೆಗೆ ಸಜ್ಜಾಗಿ ಅಂತ ಕಾರ್ಯಕರ್ತರಿಗೆ ಹೇಳುತ್ತೇನೆ. ಈ ಸರ್ಕಾರದ ಮೂರು ತಿಂಗಳ ಹನಿಮೂನ್ ಪಿರಿಯಡ್ ನೋಡುತ್ತೇವೆ. ನಮ್ಮಲ್ಲಿ ಮತ ಪರಿವರ್ತನೆಗಾಗಿ ಸಿದ್ಧತೆ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದೇವೆ. ಕೊನೆಯ ನಾಲ್ಕು ದಿನದ ತಂತ್ರಗಾರಿಕೆಯಲ್ಲಿ ವಿಫಲವಾಗಿದ್ದೇವೆ ಎಂದಿದ್ದಾರೆ.

 

suddiyaana