ಕೈ ಅಂಗಳದಲ್ಲಿ ನವೆಂಬರ್‌ ಕ್ರಾಂತಿ ಕಿಚ್ಚು! – ನ.15ಕ್ಕೆ ಸಿಎಂ, ಡಿಸಿಎಂ ದೆಹಲಿಗೆ ಭೇಟಿ

ಕೈ ಅಂಗಳದಲ್ಲಿ ನವೆಂಬರ್‌ ಕ್ರಾಂತಿ ಕಿಚ್ಚು! – ನ.15ಕ್ಕೆ ಸಿಎಂ, ಡಿಸಿಎಂ ದೆಹಲಿಗೆ ಭೇಟಿ

ಒಂದೆಡೆ ಸಿಎಂ ಕುರ್ಚಿ ಬದಲಾವಣೆಯ ಗುಸುಗುಸು ಕಾಂಗ್ರೆಸ್ ಆಂತರಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದರೆ ಮತ್ತೊಂದೆಡೆ, ಅತ್ಯಧಿಕ ಅವಧಿ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ದಾಖಲೆ ಬರೆಯುವತ್ತ ಸಿದ್ದರಾಮಯ್ಯ ದಾಪುಗಾಲಿಡುತ್ತಿದ್ದಾರೆ. ಇಷ್ಟು ದಿನ ಬಿಹಾರ ಚುನಾವಣೆಯಲ್ಲಿ ಬ್ಯುಸಿಯಾಗಿದ್ದ ಕಾಂಗ್ರೆಸ್‌ ಹೈಕಮಾಂಡ್‌ ಇನ್ನು ಕರ್ನಾಟಕದತ್ತ ಚಿತ್ತ ಹರಿಸೋಕೆ ಮುಂದಾಗಿದೆ. ಇನ್ನೆರಡು ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣೆಯಾಗುವ ಮುನ್ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ಇನ್ಮುಂದೆ ಮಹಿಳಾ ನೌಕರರಿಗೆ ವೇತನ ಸಹಿತ ವರ್ಷಕ್ಕೆ 12 ರಜೆ! – ರಾಜ್ಯ ಸರ್ಕಾರದಿಂದ ಬಂತು ಅಧಿಕೃತ ಆದೇಶ!

ನವೆಂಬರ್‌ ಕ್ರಾಂತಿ ಚರ್ಚೆ ಸದ್ದು ಮಾಡ್ತಿದ್ದಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನವೆಂಬರ್ 15ರಂದು  ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.‌ ಈ ಬೆನ್ನಲ್ಲೇ ಸಚಿವ ಸ್ಥಾನ ಭದ್ರಪಡಿಸಿಕೊಳ್ಳೋಕೆ ಸಚಿವರು ಕೂಡ ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಒಂದು ವೇಳೆ ಶನಿವಾರ ಸಿಎಂ ಹಾಗೂ ಡಿಸಿಎಂಗೆ ರಾಹುಲ್ ಗಾಂಧಿ ಭೇಟಿಯಾಗಲು ಸಮಯ ಸಿಕ್ಕರೆ ರಾಜಕೀಯ ಗೊಂದಲಗಳಿಗೆ ತೆರೆ ಬೀಳೋ ಸಾಧ್ಯತೆ ಇದೆ.

ಇನ್ನು ಸಿಎಂ, ಡಿಸಿಎಂ ದೆಹಲಿ ಭೇಟಿ ನೀಡುತ್ತಿರುವ ಹೊಸ್ತಿಲಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ಬಂದಿದ್ದಾರೆ. ಖರ್ಗೆ ರಾಜ್ಯಕ್ಕೆ ಬರ್ತಿದ್ದಂತೆ ಸಚಿವರು ಭೇಟಿಯಾಗಲು ಸರ್ಕಸ್‌ ನಡೆಸುತ್ತಿದ್ದಾರೆ. ಇಂದು ಸಚಿವ ಜಮೀರ್ ಅಹ್ಮದ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಖರ್ಗೆಯವರನ್ನು ಭೇಟಿಯಾಗಿದ್ದಾರೆ. ಮಂಗಳವಾರ ದೆಹಲಿಯಲ್ಲಿ ಸತೀಶ್ ಜಾರಕಿಹೊಳಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಭೇಟಿಯಾಗಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.

Shwetha M