ಸಿಎಂ ಬದಲಾವಣೆ ಫಿಕ್ಸ್?‌  – ಕುರ್ಚಿಗಾಗಿ ಕಸರತ್ತು.. ಕೈ ನಾಯಕರ ಸರಣಿ ಸಭೆ ರಹಸ್ಯ ಏನು?

ಸಿಎಂ ಬದಲಾವಣೆ ಫಿಕ್ಸ್?‌  – ಕುರ್ಚಿಗಾಗಿ ಕಸರತ್ತು.. ಕೈ ನಾಯಕರ ಸರಣಿ ಸಭೆ ರಹಸ್ಯ ಏನು?

ಮುಡಾ ಕೇಸ್‌ ನಲ್ಲಿ ಸಿಎಂ ಸಿದ್ದರಾಮಯ್ಯ  ಸಂಕಷ್ಟಕ್ಕೆ ಸಿಲುಕಿದ್ದಾರೆ..   ಮುಖ್ಯಮಂತ್ರಿ ಪಟ್ಟದಿಂದ ಸಿದ್ದರಾಮಯ್ಯ ಇಳಿತಾರಾ ಅನ್ನೋ ಪ್ರಶ್ನೆ ರಾಜ್ಯದ ಜನರನ್ನು ಕಾಡುತ್ತಿತ್ತು.. ಆದರೆ ಸ್ವತಃ ಸಿಎಂ ಕೂಡ ನಾನು ಬಗ್ಗಲ್ಲ ಜಗ್ಗಲ್ಲ ಎಂದಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿರೋ ಬೆಳವಣಿಗೆಗಳು ಮಾತ್ರ ಏನೋ ನಡೆಯುತ್ತಿದೆ ಅನ್ನೋದನ್ನು ಸಾರಿ ಸಾರಿ ಹೇಳುತ್ತಿವೆ.

ಇದನ್ನೂ ಓದಿ: ಕೆಎಸ್ಆರ್ಟಿಸಿಯಿಂದ ದಸರಾ ಧಮಾಕ- ವಿವಿಧ ಸ್ಥಳಗಳಿಗೆ 2000ಕ್ಕೂ ಹೆಚ್ಚು ಬಸ್ಗಳ ವ್ಯವಸ್ಥೆ

ಹೌದು, ಮುಡಾ ಜಟಾಪಟಿ ಮಧ್ಯೆ ಕಾಂಗ್ರೆಸ್‌ ಸಚಿವರು ಮತ್ತು ಶಾಸಕರು ಗೌಪ್ಯ ಸಭೆ ನಡೆಸಲು ಆರಂಭಿಸಿದ್ದಾರೆ. ಈ ಎಲ್ಲಾ ಸಭೆಗಳಿಗೆ ಬ್ರೇಕ್‌ ಹಾಕಲು ಹೈಕಮಾಂಡ್‌ ಮುಂದಾಗಿದ್ದು ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ನೇರವಾಗಿಯೇ ರಾಜ್ಯ ಕಾಂಗ್ರೆಸ್‌ ನಾಯಕರ ಜೊತೆ ಸಭೆ ನಡೆಸಲು ಆರಂಭಿಸಿದ್ದಾರೆ. ಖರ್ಗೆ ಅವರು ಗುಪ್ತವಾಗಿ ಸಭೆ ನಡೆಸಿದ ನಾಯಕರ ಜೊತೆ ಸಭೆ ನಡೆಸಿ ಹೈಕಮಾಂಡ್‌ಗೆ ವರದಿ ನೀಡಲು ಮುಂದಾಗಿದ್ದಾರೆ.

  • ಯಾವ ದಿನ ಯಾರ ಸಭೆ?
  • ಆ.20 – ಬೆಂಗಳೂರಿನಲ್ಲಿ ಡಿಕೆಶಿಯನ್ನು ಭೇಟಿಯಾಗಿ ಸತೀಶ್ ಜಾರಕಿಹೊಳಿ ಮಾತುಕತೆ
  • ಆ.30 – ಸತೀಶ್ ಜಾರಕಿಹೊಳಿ ನಿವಾಸಕ್ಕೆ ಪರಮೇಶ್ವರ್ ಮೊದಲ ಭೇಟಿ
  • ಸೆ.02 – ಸತೀಶ್ ಜಾರಕಿಹೊಳಿ ನಿವಾಸಕ್ಕೆ ಪರಮೇಶ್ವರ್ ಎರಡನೇ ಭೇಟಿ
  • ಸೆ. 03 – ಸತೀಶ್ ಜಾರಕಿಹೊಳಿ ದೆಹಲಿ ಭೇಟಿ
  • ಸೆ. 07 – ಎಂ.ಬಿ ಪಾಟೀಲ್ ನಿವಾಸದಲ್ಲಿ ಪರಂಮೇಶ್ವರ್‌ ಭೇಟಿ, ಬ್ರೇಕ್‌ಫಾಸ್ಟ್
  • ಸೆ. 30 – ಪರಮೇಶ್ವರ್ ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಭೇಟಿ
  • ಅ.03 – ಪರಮೇಶ್ವರ್-ಜಾರಕಿಹೊಳಿ-ಮಹಾದೇವಪ್ಪ ಸಭೆ
  • ಅ.04 – ದೆಹಲಿಯಲ್ಲಿ ಖರ್ಗೆಯನ್ನು ಭೇಟಿ ಮಾಡಿದ ಜಾರಕಿಹೊಳಿ
  • ಅ.06 – ತುಮಕೂರಿನಲ್ಲಿ ಪರಮೇಶ್ವರ್-ಜಾರಕಿಹೊಳಿ ಭೇಟಿ
  • ಅ.06 – ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿ ಮಾಡಿದ ಡಿಕೆಶಿ

Shwetha M