ಸಿಎಂ ಬೊಮ್ಮಾಯಿ ಇದ್ದ ಹೆಲಿಕಾಪ್ಟರ್ ಟೇಕ್ ಆಫ್ ವೇಳೆ ಅವಾಂತರ – ಟೇಕ್ ಆಫ್​ ಆಗಿ ಮತ್ತೆ ಲ್ಯಾಂಡ್​​!

ಸಿಎಂ ಬೊಮ್ಮಾಯಿ ಇದ್ದ ಹೆಲಿಕಾಪ್ಟರ್ ಟೇಕ್ ಆಫ್ ವೇಳೆ ಅವಾಂತರ – ಟೇಕ್ ಆಫ್​ ಆಗಿ ಮತ್ತೆ ಲ್ಯಾಂಡ್​​!

ಚಿಕ್ಕಬಳ್ಳಾಪುರ: ಸಿಎಂ ಬಸವರಾಜ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೇಕ್ ಆಫ್ ಆಗಿ ಮತ್ತೆ ಲ್ಯಾಂಡ್ ಆಗಿರುವ ಘಟನೆ ಚಿಕ್ಕಬಳ್ಳಾಪುರದ ಎಸ್​ಜೆಸಿಐಟಿ ಹೆಲಿಪ್ಯಾಡ್​ನಲ್ಲಿ ನಡೆದಿದೆ.

ಇದನ್ನೂ ಓದಿ: ಬಿಎಸ್ ವೈ ಮನೆಗೆ ಕಲ್ಲೇಟು.. ಪೊಲೀಸರಿಂದ ಲಾಠಿ ಚಾರ್ಜ್ – ಒಳಮೀಸಲಾತಿ ಕಿಚ್ಚಿಗೆ ಶಿಕಾರಿಪುರ ಕೊತಕೊತ!

ಇಂದು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಡಾ. ಕೆ ಸುಧಾಕರ್​ ಚಿಕ್ಕಬಳ್ಳಾಪುರದಿಂದ ರಾಮನಗರಕ್ಕೆ ತೆರಳಲೆಂದು ಹೆಲಿಕಾಪ್ಟರ್​​ ಹತ್ತಿದ್ದರು. ಹೆಲಿಕಾಪ್ಟರ್ ಟೇಕ್ ಅಫ್ ಆಗುತ್ತಿದ್ದಂತೆ ಮೈದಾನ ಧೂಳಿನಿಂದ ಆವರಿಸಿದೆ. ಇದರಿಂದ ಪೈಲಟ್ ಗೆ ಆಕಾಶ ಕಾಣಿಸದಂತಾಗಿದೆ. ಹೀಗಾಗಿ ಮತ್ತೆ ಲ್ಯಾಂಡಿಂಗ್ ಮಾಡಲಾಗಿದೆ.  ಇದನ್ನು ಕಂಡ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳುವಷ್ಟರಲ್ಲಿ ಹೆಲಿಕಾಪ್ಟರ್​ ಮತ್ತೆ ಟೇಕ್​ ಆಫ್​​ ಆಗಿದೆ. ಸದ್ಯ ಈ ವೇಳೆ ಯಾವುದೇ ತೊಂದರೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

suddiyaana