ಮುಂಬೈ ಏರ್​ಪೋರ್ಟ್ ನಲ್ಲಿ​​ ತಪ್ಪಿದ ದೊಡ್ಡ ಅನಾಹುತ – ಲ್ಯಾಂಡ್‌ ಆಗ್ತಿದ್ದಂತೆ ರನ್​​ವೇನಲ್ಲಿ ಸ್ಕಿಡ್​​ ಆದ ಏರ್ ಇಂಡಿಯಾ ವಿಮಾನ

ಮುಂಬೈ ಏರ್​ಪೋರ್ಟ್ ನಲ್ಲಿ​​ ತಪ್ಪಿದ ದೊಡ್ಡ ಅನಾಹುತ – ಲ್ಯಾಂಡ್‌ ಆಗ್ತಿದ್ದಂತೆ ರನ್​​ವೇನಲ್ಲಿ ಸ್ಕಿಡ್​​ ಆದ ಏರ್ ಇಂಡಿಯಾ ವಿಮಾನ

ದೇಶದಾದ್ಯಂತ ವರುಣನ ಆರ್ಭಟ ಜೋರಾಗಿದೆ. ಈಗಾಗಲೇ ಕೆಲ ರಾಜ್ಯಗಳಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಇದೀಗ ಭಾರಿ ಮಳೆಯ ಪರಿಣಾಮ ಏರ್‌ ಇಂಡಿಯಾ ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ಸ್ಕಿಡ್‌ ಆಗಿದೆ.

ಇದನ್ನೂ ಓದಿ: 4ನೇ ಟೆಸ್ಟ್‌ನಲ್ಲಿ ರಿಷಭ್ ಕೇವಲ ಬ್ಯಾಟರ್ – ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ತಾರಾ ಕೆ.ಎಲ್ ರಾಹುಲ್?

ಸೋಮವಾರ ಏರ್‌ಇಂಡಿಯಾ ವಿಮಾನ ಕೊಚ್ಚಿಯಿಂದ ಮುಂಬೈಗೆ ಹೊರಟಿತ್ತು. ವಿಮಾನವು ಜುಲೈ 21 ರಂದು ಬೆಳಗ್ಗೆ 9.27 ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ. ಆದ್ರೆ ಮುಂಬೈ ನಿಲ್ದಾಣ ಭಾಗದಲ್ಲಿ ಭಾರಿ ಮಳೆ ಇದ್ದ ಕಾರಣ ವಿಮಾನ ರನ್‌ವೇಯಿಂದ ಜಾರಿದೆ. ಪರಿಣಾಮ ವಿಮಾನ ಸ್ಕಿಡ್‌ ಆಗಿದೆ ಎಂದು ವರದಿಯಾಗಿದೆ.

ವಿಮಾನಯಾನ ಸಂಸ್ಥೆಯ ಪ್ರಕಾರ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇಫ್‌ ಆಗಿದ್ದಾರೆ. ಯಾರಿಗೂ ಗಾಯವಾಗಿಲ್ಲ. ತೀವ್ರ ಮಳೆಯಿಂದಾಗಿ ಜಾರುವ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಈ ಘಟನೆ ಸಂಭವಿಸಿದೆ. ವಿಮಾನ ನಿಲ್ದಾಣದ ಪ್ರಾಥಮಿಕ ರನ್‌ವೇಗೆ ಸಣ್ಣಪುಟ್ಟ ಹಾನಿಗಳು ವರದಿಯಾಗಿವೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.ವಿಮಾನವನ್ನು ಹೆಚ್ಚಿನ ಬಳಕೆಗೆ ಅನುಮತಿಸುವ ಮೊದಲು ಅಗತ್ಯ ತಪಾಸಣೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಮುಂಬೈನಲ್ಲಿ ನಿರಂತರ ಮಳೆ ಸುರಿಯುತ್ತಿದೆ. ನಗರದ ಅನೇಕ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರ ದಟ್ಟಣೆ ಉಂಟಾಗಿದೆ.  ಮುಂದಿನ ಎರಡು ದಿನಗಳಲ್ಲಿ ಮುಂಬೈ ನಿವಾಸಿಗಳು ಮತ್ತಷ್ಟು ಮಳೆ ಎದುರಿಸಲು ಸಿದ್ಧರಾಗಬೇಕು. ಮುಂದಿನ 48 ಗಂಟೆಗಳಲ್ಲಿ ಮಳೆ ಇನ್ನಷ್ಟು ತೀವ್ರವಾಗುವ ನಿರೀಕ್ಷೆಯಿದೆ ಮತ್ತು ಬಲವಾದ ಗಾಳಿ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

Shwetha M