ಚಾರ್‌ ಧಾಮ್‌ ಯಾತ್ರೆ ವೇಳೆ ರಕ್ತ ಹೆಪ್ಪುಗಟ್ಟಿಸುವಂತಹ ಶೀತ – 45 ದಿನಗಳಲ್ಲಿ 119 ಯಾತ್ರಾರ್ಥಿಗಳು ಸಾವು

ಚಾರ್‌ ಧಾಮ್‌ ಯಾತ್ರೆ ವೇಳೆ ರಕ್ತ ಹೆಪ್ಪುಗಟ್ಟಿಸುವಂತಹ ಶೀತ – 45 ದಿನಗಳಲ್ಲಿ 119 ಯಾತ್ರಾರ್ಥಿಗಳು ಸಾವು

ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಒಂದಾದ ಚಾರ್ ಧಾಮ್‌ ಏಪ್ರಿಲ್‌ 22 ರಂದು ಆರಂಭವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಆಗಮಿಸುತ್ತಿದ್ದಾರೆ. ಕಳೆದ 45 ದಿನಗಳಲ್ಲಿ ಭಾರೀ ಪ್ರಮಾಣದ ಪ್ರತಿಕೂಲ ಹವಾಮಾನದ ಪರಿಣಾಮ ಸುಮಾರು 119 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮಾನವಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ – ಬಾಹ್ಯಾಕಾಶ ಯಾತ್ರೆಗೆ ಆಹಾರ ರೀತಿ ಹೇಗಿದೆ?

6 ತಿಂಗಳಿಗೆ ಒಮ್ಮೆ ತೆರೆಯುವ ಚಾರ್‌ ಧಾಮ್‌ ಯಾತ್ರೆ ಪ್ರಸಕ್ತ ಸಾಲಿನಲ್ಲಿ ಏಪ್ರಿಲ್‌ 22 ರಿಂದ ಆರಂಭವಾಗಿದೆ. ಈ ಯಾತ್ರೆಯಲ್ಲಿ 45 ದಿನಗಳ ಕಾಲಾವಧಿಯಲ್ಲಿ 119 ಮಂದಿ ಪ್ರತಿಕೂಲ ಹವಾಮಾನ, ಅನಾರೋಗ್ಯದಿಂದಾಗಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.

ಚಾರ್‌ ಧಾಮ್‌ ಯಾತ್ರೆಗೆ ಪ್ರತಿವರ್ಷ ಸುಮಾರು 20 ಲಕ್ಷ ಯಾತ್ರಾರ್ಥಿಗಳು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಬಾರಿ ಸುಮಾರು 2.1 ಲಕ್ಷ ಮಂದಿಗೆ ಯಾತ್ರೆ ವೇಳೆ ಆರೋಗ್ಯ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗಿದೆ. ಈ ಬಾರಿಯೂ ಹಿಮಾಲಯ ತಪ್ಪಲಿನಲ್ಲಿ ಮಳೆ ಮತ್ತು ಹಿಮಪಾತ ಮುಂದುವರಿದ ಪರಿಣಾಮ ಚಾರ್‌ ಧಾಮ್‌ ಯಾತ್ರೆಗೆ ಆಗಮಿಸಿದ್ದ ಯಾತ್ರಾರ್ಥಿಗಳು ಭಾರೀ ಶೀತ, ಹೃದಯ ಸ್ತಂಭನಕ್ಕೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟ 119 ಯಾತ್ರಾರ್ಥಿಗಳ ಪೈಕಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಗುಜರಾತ್‌ ನಿಂದ ಆಗಮಿಸಿದ್ದ 58 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

suddiyaana