ಪಕ್ಕದ ಕಟ್ಟಡವೇರಿ ಫೋಟೋ ಕ್ಲಿಕ್- ಖಾಸಗಿತನಕ್ಕೆ ಧಕ್ಕೆ ತಂದವರ ವಿರುದ್ಧ ನಟಿ ಕಂಪ್ಲೇಂಟ್

ಪಕ್ಕದ ಕಟ್ಟಡವೇರಿ ಫೋಟೋ ಕ್ಲಿಕ್- ಖಾಸಗಿತನಕ್ಕೆ ಧಕ್ಕೆ ತಂದವರ ವಿರುದ್ಧ ನಟಿ ಕಂಪ್ಲೇಂಟ್

ಬಾಲಿವುಡ್ ಸೆಲೆಬ್ರೆಟಿ ಜೋಡಿಗಳಾದ ಆಲಿಯಾ ಭಟ್ ಮತ್ತು ರಣ್‌ಬೀರ್ ಕಪೂರ್ ತಮ್ಮ ಮುದ್ದು ಕಂದಮ್ಮನ ಜೊತೆ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಆದರೆ, ಕೆಲವರಿಗೆ ಎಕ್ಸ್ ಕ್ಲೂಸಿವ್ ಫೋಟೋ ತೆಗೆಯೋ ಹುಚ್ಚು. ಜೊತೆಗೆ ಆಲಿಯಾ ಭಟ್ ಕೂಡಾ ತಮ್ಮ ಮಗುವಿನ ಫೋಟೋ ಯಾರಿಗೂ ತೆಗೆಯಲು ಕೂಡಾ ಬಿಟ್ಟಿಲ್ಲ. ಆದರೆ, ಪಾಪರಾಜಿಗಳಿಗೆ ಮಾತ್ರ ಆಲಿಯಾ ಭಟ್ ಮೇಲೇನೇ ಕಣ್ಣು. ಹೀಗಾಗಿ ಆಲಿಯಾ ಭಟ್ ಮನೆಯ ಪಕ್ಕದ ಕಟ್ಟಡವೇರಿ ಫೋಟೋ ಕ್ಲಿಕ್ ಮಾಡಿದ್ದಾರೆ. ಈ ಕುರಿತು ಆಲಿಯಾ ಭಟ್ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:  ‘ನಿಮಗಾಗಿ ಎಲ್ಲಾ ಕಡೆ ಹುಡುಕುತ್ತೇನೆ ಅಮ್ಮಾ..’ – ಜಾನ್ವಿ ಕಪೂರ್ ಭಾವುಕ ಮಾತು..

ಈ ಬಗ್ಗೆ ಬರೆದುಕೊಂಡಿರುವ ಆಲಿಯಾ ಭಟ್, ‘ನಾನು ನನ್ನ ಮನೆಯಲ್ಲಿ ಕುಳಿತಿದ್ದೆ. ಯಾರೋ ನನ್ನನ್ನು ಗಮನಿಸುತ್ತಿದ್ದಾರೆ ಎನಿಸಿತು. ಈ ಕಾರಣಕ್ಕೆ ಹೊರಗೆ ನೋಡಿದೆ. ಪಕ್ಕದ ಕಟ್ಟಡದಲ್ಲಿ ಇಬ್ಬರು ನನ್ನ ಕಡೆ ಕ್ಯಾಮೆರಾ ಆನ್ ಮಾಡಿ ನಿಂತಿದ್ದರು. ಇದು ಯಾವ ರೀತಿಯಲ್ಲಿ ಓಕೆ? ಇದು ಖಾಸಗಿ ತನಕ್ಕೆ ತಂದ ಧಕ್ಕೆ. ಯಾವಾಗಲೂ ಲೈನ್ ಕ್ರಾಸ್ ಮಾಡಬಾರದು. ಆದರೆ, ಆ ಲೈನ್ ಈಗ ಕ್ರಾಸ್ ಆಗಿದೆ’ ಎಂದು ಆಲಿಯಾ ಭಟ್ ಆಕ್ರೋಶ ಹೊರಹಾಕಿದ್ದಾರೆ. ಜತೆಗೆ ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಆಲಿಯಾ ಭಟ್ ಅವರ ಪೋಸ್ಟ್ಗೆ ಅರ್ಜುನ್ ಕಪೂರ್, ಜಾನ್ವಿ ಕಪೂರ್, ಅನುಷ್ಕಾ ಶರ್ಮಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಬೆಂಬಲಿಸಿದ್ದಾರೆ. ಕಳೆದ ವರ್ಷ ವಿರಾಟ್ ಕೊಹ್ಲಿ ರೂಂನ ವಿಡಿಯೋ ವೈರಲ್ ಆಗಿತ್ತು. ಇದನ್ನು ಅನುಷ್ಕಾ ಶರ್ಮಾ ಪ್ರಶ್ನೆ ಮಾಡಿದ್ದರು. ಅವರು ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆಲಿಯಾ ಭಟ್ ಪೋಸ್ಟ್ನ ಶೇರ್ ಮಾಡಿಕೊಂಡಿರುವ ಅನುಷ್ಕಾ ಪಾಪರಾಜಿಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

suddiyaana