ಸರ್ಕಾರಿ ಕಚೇರಿಯಲ್ಲಿ ಸಿಸಿಟಿವಿ ಇದ್ರೆ ಹುಷಾರ್ – ಚೀನಾದ ಭದ್ರತಾ ಕ್ಯಾಮೆರಾಗಳಿದ್ರೆ ಇನ್ನೂ ಡೇಂಜರ್..!

ಸರ್ಕಾರಿ ಕಚೇರಿಯಲ್ಲಿ ಸಿಸಿಟಿವಿ ಇದ್ರೆ ಹುಷಾರ್ – ಚೀನಾದ ಭದ್ರತಾ ಕ್ಯಾಮೆರಾಗಳಿದ್ರೆ ಇನ್ನೂ ಡೇಂಜರ್..!

ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲಾಗಿರುವ ಚೀನಾ ನಿರ್ಮಿತ ಭದ್ರತಾ ಕ್ಯಾಮೆರಾಗಳನ್ನು ಸುರಕ್ಷತೆ ದೃಷ್ಟಿಯಿಂದ ತೆರವುಗೊಳಿಸಲು ನಿರ್ಧರಿಸಲಾಗಿದೆ ಎಂದು ಆಸ್ಟ್ರೇಲಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. 200 ಕ್ಕೂ ಹೆಚ್ಚು ಭದ್ರತಾ ಕ್ಯಾಮೆರಾಗಳನ್ನು ಆಸ್ಟ್ರೇಲಿಯಾದ ಸರ್ಕಾರಿ ಕಟ್ಟಡಗಳಲ್ಲಿ ಅಳವಡಿಸಲಾಗಿದೆ. ಈಗಾಗಲೇ ಯುನೈಟೆಡ್ ಸ್ಟೇಟ್ಸ್  ಮತ್ತು ಬ್ರಿಟನ್‌ನಲ್ಲಿಯೂ ಇದೇ ರೀತಿಯ ಕ್ರಮಗಳನ್ನು ಅನುಸರಿಸಲಾಗಿದೆ. ಚೀನಾದ ಕಂಪನಿಗಳಿಗೆ ಬೀಜಿಂಗ್‌ನ ಭದ್ರತಾ ವಲಯ ಗುಪ್ತಚರ ಮಾಹಿತಿ ಹಂಚಿಕೊಳ್ಳುವಂತೆ ಒತ್ತಾಯಿಸಬಹುದು ಎಂಬ ಕಾರಣಕ್ಕಾಗಿಯೇ ಕಳೆದ ವರ್ಷದ ನವೆಂಬರ್‌ನಲ್ಲಿ ಬ್ರಿಟನ್​ನಲ್ಲಿ ಈ ಕಾರ್ಯ ಆರಂಭವಾಗಿತ್ತು.

ಇದನ್ನೂ ಓದಿ: ಆಸ್ಟ್ರೇಲಿಯನ್ ನೋಟುಗಳಲ್ಲಿ 2ನೇ ಎಲಿಜಬೆತ್ ರಾಣಿ ಫೋಟೋ ಇರಲ್ಲ – ಕಾರಣ ಏನು ಗೊತ್ತಾ..!?

ಕ್ಯಾಮೆರಾಗಳನ್ನು ಹಿಕ್ವಿಷನ್ ಮತ್ತು ಡಹುವಾ ಕಂಪನಿಗಳು ತಯಾರಿಸಿವೆ. ಇವೆರಡನ್ನೂ ಯುನೈಟೆಡ್ ಸ್ಟೇಟ್ಸ್‌ ನಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಚೀನಾದ ಈ ಕಂಪನಿಗಳು ತಯಾರಿಸಿದ ಸಿಸಿಟಿವಿ ಕ್ಯಾಮೆರಾಗಳ ಆಮದನ್ನು ಅಮೆರಿಕಾ ನಿಷೇಧಿಸಿತ್ತು. ರಾಷ್ಟ್ರೀಯ ಭದ್ರತೆಗೆ ಇವು ಸ್ವೀಕಾರಾರ್ಹವಲ್ಲ ಎಂದು ಅಮೆರಿಕ ಅಭಿಪ್ರಾಯಪಟ್ಟಿತ್ತು.

suddiyaana