ಬೇಸಿಗೆಯಲ್ಲಿ ಈ ಪಾತ್ರೆಯಲ್ಲಿಟ್ಟ ನೀರು ಕುಡಿದ್ರ ಎಷ್ಟೊಂದು ಪ್ರಯೋಜನ! – ಮಡಿಕೆ ಮಹಾತ್ಮೆ ಗೊತ್ತಾ?

ಬೇಸಿಗೆಗಾಲ ಶುರುವಾಗಿದೆ. ಬಿಸಲಿನ ತಾಪಕ್ಕೆ ಜನ ಬೆಂಡಾಗಿದ್ದಾರೆ. ಎಷ್ಟು ನೀರು ಕುಡಿದ್ರೂ ಸಾಕಾಗಲ್ಲ. ಹೀಗಾಗಿ ಅನೇಕರು ಕೋಲ್ಡ್ ವಾಟರ್‌ನ ಕುಡಿಯುತ್ತಾರೆ. ಫ್ರಿಡ್ಜ್‌ನಲ್ಲಿಟ್ಟ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದ್ದಲ್ಲ. ಹೀಗಾಗಿ ಅನೇಕರು ಮಣ್ಣಿನ ಮಡಕೆಯಲ್ಲಿ ನೀರು ಇಡುತ್ತಾರೆ. ಮಣ್ಣಿನ ಮಡಕೆಯ ನೀರು ಕುಡಿಯುವುದು ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ.
ಇದನ್ನೂ ಓದಿ: LPG ಗ್ಯಾಸ್ ವಿತರಣೆಗೆ ರಾಜ್ಯ ಸರ್ಕಾರದಿಂದ ಹೊಸ ಗೈಡ್‌ಲೈನ್ಸ್! – ಯಾರೆಲ್ಲಾ ಬುಕ್ ಮಾಡಬಹುದು?
ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿದ್ದ ನೀರು ಕುಡಿಯುವುದು ಒಳ್ಳೆಯದು. ಜೇಡಿಮಣ್ಣು ನೈಸರ್ಗಿಕ ತಂಪಾಗಿಸುವ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಮ್ಮ ಗಂಟಲು ಸಹಿಸಿಕೊಳ್ಳುವಷ್ಟು ಶೀತಲವಾಗಿರುವ ನೀರನ್ನು ನಮಗೆ ಒದಗಿಸುತ್ತದೆ. ಜೇಡಿಮಣ್ಣು ಅನೇಕ ಖನಿಜ ಲವಣಗಳ ಮಿಶ್ರಣವಾಗಿದೆ. ಅದರಲ್ಲಿ ವಿದ್ಯುತ್ಕಾಂತೀಯ ಶಕ್ತಿ ಅಡಗಿದೆ. ಈ ಎಲ್ಲಾ ಸದ್ಗುಣಗಳು ಆ ನೀರಿನಲ್ಲಿ ಹೀರಲ್ಪಡುತ್ತವೆ.
ಆ ನೀರನ್ನು ಕುಡಿಯುವುದರಿಂದ ಬೇಸಿಗೆಯಲ್ಲಿ ನಾವು ಕಳೆದುಕೊಳ್ಳುವ ಶಕ್ತಿಯನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ ಮತ್ತು ನಮ್ಮ ದೇಹವು ನಿರ್ಜಲೀಕರಣಗೊಳ್ಳುವುದನ್ನು ತಡೆಯುತ್ತದೆ. ಬೇಸಿಗೆಯಲ್ಲಿ ಬಿಸಿಲಿನಿಂದ ಸುಟ್ಟು ಹೋಗುವುದು ಸಹಜ. ಇದನ್ನು ತಪ್ಪಿಸಲು ಮಣ್ಣಿನ ಪಾತ್ರೆಗಳಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದು ಉತ್ತಮ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ನೀರು ದೇಹದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಬಿಸಿಲಿನ ಬೇಗೆಯಿಂದಲೂ ನಮ್ಮನ್ನು ರಕ್ಷಿಸುತ್ತದೆ.
ಪ್ಲಾಸ್ಟಿಕ್ ಅಥವಾ ಲೋಹದ ಬಾಟಲಿಗಳಲ್ಲಿ ಸಂಗ್ರಹವಾಗಿರುವ ನೀರು ಕೆಲವು ರಾಸಾಯನಿಕಗಳಿಂದ ಪ್ರಭಾವಿತವಾಗಿರುತ್ತದೆ. ಆದರೆ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ನೈಸರ್ಗಿಕ, ಸೌಮ್ಯವಾದ ರುಚಿಯನ್ನು ಹೊಂದಿರುತ್ತದೆ. ಇದು ರುಚಿಯನ್ನು ಸುಧಾರಿಸುತ್ತದೆ. ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿರುವುದರಿಂದ ಭೂ ಮಾಲಿನ್ಯ ಹೆಚ್ಚುತ್ತಿದೆ. ಮಣ್ಣಿನ ಮಡಕೆಗಳು ಸಂಪೂರ್ಣವಾಗಿ ನೈಸರ್ಗಿಕ ವಸ್ತುಗಳಿಂದ ಮಾಡಲ್ಪಟ್ಟಿರುವುದರಿಂದ ಅವು ಪರಿಸರಕ್ಕೆ ಹಾನಿ ಮಾಡುವುದಿಲ್ಲ. ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ಕಡಿಮೆ ಮಾಡಲು ಮಣ್ಣಿನ ಮಡಿಕೆಗಳು ಉತ್ತಮ ಪರ್ಯಾಯವಾಗಿದೆ.

ನೋಡಿರಿ

