500 ವಿದ್ಯಾರ್ಥಿನಿಯರು, ಒಬ್ಬನೇ ಹುಡುಗ! – ಪರೀಕ್ಷಾ ಕೊಠಡಿಯಲ್ಲೇ ಮೂರ್ಛೆ ಹೋದ ವಿದ್ಯಾರ್ಥಿ!

500 ವಿದ್ಯಾರ್ಥಿನಿಯರು, ಒಬ್ಬನೇ ಹುಡುಗ! – ಪರೀಕ್ಷಾ ಕೊಠಡಿಯಲ್ಲೇ ಮೂರ್ಛೆ ಹೋದ ವಿದ್ಯಾರ್ಥಿ!

ಶಾಲೆಯಲ್ಲಿ ಟೀಚರ್ ನಾಳೆ ಪರೀಕ್ಷೆ ಎಲ್ಲರು ಓದಿಕೊಂಡು ಬನ್ನಿ ಎಂದು ಹೇಳಿರುತ್ತಾರೆ. ಆದರೆ ಕೆಲ ಮಕ್ಕಳು ಓದದೇ ಬಂದಿದ್ದರೆ ಜ್ವರ ಬರುತ್ತಿದೆ, ಹೊಟ್ಟೆ ನೋವು ಆಗುತ್ತಿದೆ ಎಂದು ನಾಟಕವಾಡುವುದನ್ನು ನೋಡಿರುತ್ತೇವೆ. ಇನ್ನೂ ಕಾಲೇಜಿನಲ್ಲಿ ಸೆಮಿನಾರ್, ಎಕ್ಸಾಮ್ ಇದ್ರೆ ಏನೇನೋ ಡ್ರಾಮಾ ಮಾಡಿ ತಪ್ಪಿಸಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಪರೀಕ್ಷೆ ಹಾಲ್ ನಲ್ಲಿ ತಾನು ಒಬ್ಬನೇ ಹುಡುಗ ಎಂದು ಮೂರ್ಛೆ ಹೋಗಿದ್ದಾನೆ!

ಇದನ್ನೂ ಓದಿ: ಫ್ಲೈಟ್ ನಲ್ಲಿ ಮಕ್ಕಳಿಗೂ ಟಿಕೆಟ್ ಇದೆ ಎಂದಿದ್ದಕ್ಕೆ ಮಗುವನ್ನೇ ಬಿಟ್ಟು ಹೋದ ದಂಪತಿ!

ಬಿಹಾರದ ನಳಂದಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಶಂಕರ್ ಎಂಬ ಪಿಯು ವಿದ್ಯಾರ್ಥಿ ಷರೀಫ್ ಅಲ್ಲಮ ಇಕ್ಬಾಲ್ ಕಾಲೇಜಿನಲ್ಲಿ ಓದುತ್ತಿದ್ದು, ಬ್ರಿಲಿಯಂಟ್ ಶಾಲೆಯಲ್ಲಿ ಮಧ್ಯಂತರ ಪರೀಕ್ಷೆ ಬರೆಯಲು ಹೋಗಿದ್ದಾನೆ. ಈ ವೇಳೆ ದಿಢೀರನೆ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಪರೀಕ್ಷಾ ಭಯದಿಂದ ಆತ ಬಿದ್ದಿರಬಹುದು ಎಂದು ಅಲ್ಲಿದ್ದ ಸಿಬ್ಬಂದಿ ಆತನನ್ನು ಎಚ್ಚರಿಸಲು ಪ್ರಯತ್ನಿಸಿದ್ದಾರೆ. ಆದರೆ ಎಷ್ಟು ಬಾರಿ ಎಚ್ಚರಿಸಲು ಪ್ರಯತ್ನಿಸಿದರೂ ಆತ ಎಚ್ಚರಗೊಂಡಿರಲಿಲ್ಲ. ಬಳಿಕ ಆತನನ್ನು ಆಸ್ಪತ್ರೆಗೆ ಕರೆದ್ಯೊಯ್ದಿದ್ದಾರೆ.

ವೈದ್ಯರು ಆತನಿಗೆ ಚಿಕಿತ್ಸೆ ನೀಡಿದ ಬಳಿಕ ಆತ ಎಚ್ಚರಗೊಂಡಿದ್ದಾನೆ. ಬಳಿಕ ತಾನು ಪ್ರಜ್ಞೆ ತಪ್ಪಿ ಬೀಳಲು ಕಾರಣ ಏನು ಎಂದು ಹೇಳಿದ್ದಾನೆ. ಈತನ ಕಾರಣ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ತಾನು ಪರೀಕ್ಷಾ ಭಯದಿಂದ ಪ್ರಜ್ಞೆ ತಪ್ಪಿ ಬಿದ್ದಿಲ್ಲ. ತಾನು ಪರೀಕ್ಷೆ ಬರೆಯುವ ಕೊಠಡಿ ಪೂರ್ತಿ ವಿದ್ಯಾರ್ಥಿನಿಯರೇ ತುಂಬಿದ್ದರು. ನಾನೊಬ್ಬನೇ ಹುಡುಗ ಇದ್ದಿದ್ದರಿಂದ ನನಗೆ ಆಘಾತವಾಗಿದೆ. ಈಗಲೂ ನನ್ನ ದೇಹದಲ್ಲಿ, ತಲೆಯಲ್ಲಿ ಮತ್ತು ಕಣ್ಣುಗಳಲ್ಲಿ ನೋವಾಗುತ್ತಿತ್ತು ಎಂದು ಹೇಳಿದ್ದಾನೆ.

ಘಟನೆ ಬಳಿಕ ಶಂಕರ್ ಚಿಕ್ಕಮ್ಮ ಮಾತನಾಡಿದ್ದು, ಶಂಕರ್ ಪರೀಕ್ಷೆ ಬರೆಯುವ ಕೊಠಡಿಯಲ್ಲಿ ಸುಮಾರು 500 ಹುಡುಗಿಯರಲ್ಲಿ ಇವನು ಒಬ್ಬನೇ ಹುಡುಗ ಎಂದು ತಿಳಿದಾಗ ಭಯದಿಂದ ಮೂರ್ಛೆ ಹೋಗಿದ್ದಾನೆ. ಆತ ಇನ್ನೂ ಆಘಾತದಿಂದ ಹೊರಬಂದಿಲ್ಲ. ಇನ್ನೂ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಹೇಳಿದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ ತಾನೊಬ್ಬನೇ ಹುಡುಗ ಎಂಬ ಶಾಕ್ ಬೆನ್ನಲ್ಲೇ ಶಂಕರ್ ಗೆ  ಮತ್ತೊಂದು ಅಘಾತ ಕಾದಿತ್ತು. ಆತನಿಗೆ ನೀಡಿದ ಪ್ರವೇಶ ಪತ್ರದಲ್ಲಿ ಲೋಪದೋಷ ಇರುವುದು ಕಂಡುಬಂದಿದೆ. ಪ್ರವೇಶ ಪತ್ರದಲ್ಲಿ ‘ಹುಡುಗ’ ಎಂಬಲ್ಲಿ “ಹುಡುಗಿ” ಎಂದು ನಮೂದಿಸಲಾಗಿತ್ತು. ಇದರಿಂದಾಗಿ ಆತ ಈ ಕಾಲೇಜಿಗೆ ಪರೀಕ್ಷೆ ಬರೆಯಲು ಬಂದಿದ್ದಾನೆ. ವಿದ್ಯಾರ್ಥಿನಿಯರ ಮಧ್ಯೆ ಏಕಾಂಗಿಯಾಗಿದ್ದ ಶಂಕರ್ ಆತಂಕಗೊಂಡು ಪ್ರಜ್ಞೆತಪ್ಪಿ ಬಿದ್ದಿದ್ದಾನೆ ಎಂದು ವರದಿಯಾಗಿದೆ.

suddiyaana