ಕಾಂಗ್ರೆಸ್‌ನಲ್ಲಿ ಸಂಪುಟ ಪುನರ್ ರಚನೆಗೆ ಸರ್ಕಸ್ –  ರಣದೀಪ್ ಸುರ್ಜೇವಾಲ ಭೇಟಿ ಮಾಡಿದ 12 ಶಾಸಕರು!

ಕಾಂಗ್ರೆಸ್‌ನಲ್ಲಿ ಸಂಪುಟ ಪುನರ್ ರಚನೆಗೆ ಸರ್ಕಸ್ –  ರಣದೀಪ್ ಸುರ್ಜೇವಾಲ ಭೇಟಿ ಮಾಡಿದ 12 ಶಾಸಕರು!

ಕರ್ನಾಟಕ ಉಪ ಚುನಾವಣೆ ಮುಕ್ತಾಯವಾದ ಬೆನ್ನಲ್ಲೆ ಸಂಪುಟ ಪುನರ್ ರಚನೆಗೆ ಚಟುವಟಿಕೆಗಳು ಜೋರಾಗಿವೆ. ಸರ್ಕಾರವೂ ಮೂರು ವರ್ಷ ಪೂರೈಸುತ್ತಿರುವ ಹಿನ್ನೆಲೆ ನಮಗೂ ಸಚಿವ ಸ್ಥಾನ ಕೊಡಿ ಎಂದು ಶಾಸಕರು ಹೈಕಮಾಂಡ್‌ ಭೇಟಿಗೆ ದೆಹಲಿಗೆ ತೆರಳಿದ್ದು, ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಕುರಿಗಾಹಿ ಮೇಲೆ ಮೊಸಳೆ ಅಟ್ಯಾಕ್!‌ – ಅಯ್ಯೋ.. ವ್ಯಕ್ತಿಯ ಬಲಗೈ ಕಟ್!

ಕರ್ನಾಟಕದ 12 ಶಾಸಕರು ಇಂದು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಸಂಪುಟ ಪುನರ್ ರಚನೆಗೆ ಮನವಿ ಮಾಡಿದ್ದಾರೆ. ನಮಗೂ ಸಚಿವ ಸ್ಥಾನ ಕೊಡಿ ಎಂದು ಕಾಂಗ್ರೆಸ್‌ನ ಹಲವು ಹಿರಿಯ ಶಾಸಕರು ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಹೈಕಮಾಂಡ್ ನಾಯಕರ ಭೇಟಿಯಾಗಿ ಮನವಿ ಸಲ್ಲಿಸಲು ಪ್ರಯತ್ನಿಸುತ್ತಿದ್ದಾರೆ.

ಸದ್ಯ ಟಿ.ಬಿ.ಜಯಚಂದ್ರ, ಅಶೋಕ್ ಪಟ್ಟಣ್, ರಾಘವೇಂದ್ರ ಹಿಟ್ನಾಳ್, ಡಿಜಿ ಶಾಂತನಗೌಡ, ಹಂಪನಗೌಡ ಬಾರ‍್ಲಿ, ಬಸವರಾಜ್ ಶಿವಣ್ಣನವರ್, ಮಹಾಂತೇಶ್ ಕೌಜಲಗಿ, ಷಡಕ್ಷರಿ, ಯಶವಂತರಾಯಗೌಡ ಪಾಟೀಲ್, ಜಿಟಿ ಪಾಟೀಲ್ ಅವರು ದೆಹಲಿಯಲ್ಲಿ ಉಳಿದಿದ್ದಾರೆ.

Shwetha M