ದೇವರನ್ನು ಪ್ರಾರ್ಥಿಸುವಾಗ ತಂದೆ, ಮಾತೆ ಅನ್ನುವಂತಿಲ್ಲ! – ಧರ್ಮಗುರುಗಳು ಹೀಗೆ ಹೇಳಿದ್ದೇಕೆ?
ದೇವರ ಬಗೆಗಿನ ಕಲ್ಪನೆ ಇಂದು ನಿನ್ನೆಯದಲ್ಲ. ಮನುಷ್ಯನ ಬುದ್ಧಿ ವಿಕಾಸಗೊಳ್ಳಲು ಪ್ರಾರಂಭ ಆದಾಗಿನಿಂದಲೂ ಆತ ಯಾವುದೇ ಸಂಕಷ್ಟ ಎದುರಾಗುತ್ತಿದ್ದಂತೆ ದೇವರ ಮೊರೆಹೋಗುತ್ತಾನೆ. ಯಾವುದೇ ಕೆಲಸ ಪ್ರಾರಂಭಿಸಬೇಕೆಂದರೂ ದೇವರನ್ನೇ ಪ್ರಾರ್ಥಿಸುವುದು ಸಾಮಾನ್ಯ. ಮುಂಜಾನೆ ಎದ್ದ ಕೂಡಲೇ ಅದೆಷ್ಟೋ ಜನ ಭಗವಂತ, ಸ್ವಾಮೀ, ಮಾತೆ, ತಾಯಿ, ತಂದೆ ನೀನೇ ಕಾಪಾಡು ಎನ್ನುವಂತಹ ಪದಗಳನ್ನು ಬಳಸುತ್ತಾರೆ. ಆದರೆ, ಇನ್ನುಮುಂದೆ ಇಂತಹ ಪದಗಳನ್ನು ಬಳಸಬಾರದು ಅಂತಾ ಇಂಗ್ಲೆಂಡ್ ಚರ್ಚ್ ವೊಂದರ ಧರ್ಮಗುರುಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಟರ್ಕಿ ಭೂಕಂಪಕ್ಕೆ ಸಿಲುಕಿರುವ ಕನ್ನಡಿಗರಿಗಾಗಿ ಸಹಾಯವಾಣಿ – ರಾಜ್ಯಸರ್ಕಾರದಿಂದ ನೆರವಿನ ಭರವಸೆ
ಹೌದು, ತಂದೆ, ಮಾತೆ, ತಾಯಿ ಇಂತಹ ಪದಗಳು ಮಹಿಳೆ, ಪುರುಷ ಎಂಬ ಅರ್ಥವನ್ನು ಸೂಚಿಸುತ್ತದೆ. ಚರ್ಚ್ ಗಳಲ್ಲಿಯೂ ತಂದೆ ಎಂದು ಸಂಭೋದಿಸಲಾಗುತ್ತದೆ. ಇದು ಪುರುಷ ಪ್ರಾಧಾನ್ಯತೆಯ ಸೂಚಕವಾಗಿದೆ. ಈ ಹಿನ್ನೆಲೆ ಇನ್ನು ಮುಂದೆ ದೇವರನ್ನು ಸ್ಮರಿಸಲು ಇಂತಹ ಪದಗಳನ್ನು ಬಳಸಬಾರದು. ಲಿಂಗತಟಸ್ಥ ಪದಗಳನ್ನು ಮಾತ್ರ ಬಳಸಬೇಕು. ಅಂತಹ ಪದಗಳನ್ನು ಹುಡುಕುತ್ತಿರುವುದಾಗಿ ಇಂಗ್ಲೆಂಡ್ ಚರ್ಚ್ ನ ಧರ್ಮಗುರುಗಳು ತಿಳಿಸಿದ್ದಾರೆ.
ಚರ್ಚ್ ಆಫ್ ಇಂಗ್ಲೆಂಡ್‌ನಲ್ಲಿ ಪಾದ್ರಿಯೊಬ್ಬರು ಈ ರೀತಿಯ ಕರೆ ನೀಡಿದ್ದಾರೆ. ದೇವರ ಪ್ರಾರ್ಥನೆ ಸಮಯದಲ್ಲಿ ಓ ನನ್ನ ತಂದೆಯೇ ಎಂದು ಹೇಳಲಾಗುತ್ತದೆ. ದೇವರನ್ನು ಯಾವುದೇ ಲಿಂಗಸೂಚಕವಾಗಿ ಗುರುತಿಸುವ ಅಗತ್ಯವಿಲ್ಲ. ದೇವರಿಗೆ ಯಾವುದೇ ಪರಿಧಿ ಇಲ್ಲ. ಹೀಗಾಗಿ ದೇವರನ್ನು ಲಿಂಗತಟಸ್ಥ ಪದಗಳಿಂದ ಪ್ರಾರ್ಥಿಸಬೇಕು. ಅಂಥ ಪದದ ಹುಡುಕಾಟಕ್ಕಾಗಿ ಸಮಿತಿ ರಚಿಸಲಾಗಿದೆ ಎಂದು ಹೇಳಿದ್ದಾರೆ.
ಕೆಲದಿನಗಳ ಹಿಂದೆ ಕೇರಳದ ಶಾಲೆಗಳಲ್ಲಿ ಶಿಕ್ಷಕರನ್ನು ಸರ್, ಮೇಡಂ ಅನ್ನುವಂತಿಲ್ಲ. ಈ ರೀತಿ ಸಂಭೋದಿಸಿದರೆ ಲಿಂಗ ಸಂಭೋದಿಸಿದಂತೆ ಆಗುತ್ತದೆ. ಟೀಚರ್ ಎಂಬ ಪದದ ಲಿಂಗ ತಟಸ್ಥವಾಗಿರುವುದರಿಂದ ಹೀಗೆ ಕರೆಯಬೇಕು ಎಂದು ಅಲ್ಲಿನ ಮಕ್ಕಳ ಹಕ್ಕುಗಳ ಆಯೋಗ ತಿಳಿಸಿತ್ತು. ಇದರ ಬೆನ್ನಲ್ಲೇ ಇಂಗ್ಲೆಂಡ್ ಚರ್ಚ್ ನ ಧರ್ಮಗುರುಗಳು ದೇವರ ಸ್ಮರಣೆಗೂ ಲಿಂಗತಟಸ್ಥ ಪದ ಬಳಸಬೇಕೆಂದು ತಿಳಿಸಿದ್ದಾರೆ.