ಟಾಕ್ಸಿಕ್ ಚಿತ್ರತಂಡದಿಂದ ಕ್ರೈಸ್ತ ಧರ್ಮಕ್ಕೆ ಅಪಮಾನ? – ಯಶ್ ಸಿನಿಮಾಗೆ ಸಾಲು ಸಾಲು ಸಂಕಷ್ಟ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ರಿಲೀಸ್ಗೆ ಸಜ್ಜಾಗಿದೆ. ಆದ್ರೆ ಈ ಸಿನಿಮಾಗೆ ಸಾಲು ಸಾಲು ಸಂಕಷ್ಟ ಎದುರಾಗ್ತಿದೆ. ಇತ್ತೀಚೆಗಷ್ಟೇ ಟೀಸರ್ ವಿರುದ್ಧ ಮಹಿಳಾ ಒಕ್ಕೂಟಗಳು ಸಿಡಿದೆದ್ದಿದವು. ಇದೀಗ ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ಈ ಸಿನಿಮಾದ ದೂರು ನೀಡಿದೆ.
ಇದನ್ನೂ ಓದಿ: ಇನ್ಮುಂದೆ ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಊಟ ಹಾಕುವಂತಿಲ್ಲ! – ರೂಲ್ಸ್ ಬ್ರೇಕ್ ಮಾಡಿದ್ರೆ ಫೈನ್ ಫಿಕ್ಸ್!
ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟಾಕ್ಸಿಕ್ ಟೀಸರ್ ವಿರುದ್ಧ ಮಹಿಳಾ ಒಕ್ಕೂಟಗಳು ಆಕ್ರೋಶ ಹೊರಹಾಕಿದ್ದವು. ಟೀಸರ್ನಲ್ಲಿ ಕಾಣಿಸಿರುವ ಕೆಲವು ದೃಶ್ಯಗಳು ಅಶ್ಲೀಲವಾಗಿದ್ದು ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿವೆ ಎಂದು ಆರೋಪಿಸಿ ಬೆಂಗಳೂರಿನಲ್ಲಿರುವ ರಾಜ್ಯ ಮಹಿಳಾ ಅಯೋಗದ ಕಚೇರಿಗೆ ದೂರು ನೀಡಿದ್ದವು. ಜೊತೆಗೆ ಆ ದೃಶ್ಯವನ್ನ ತೆಗೆದುಹಾಕುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿಗೆ ದೂರು ನೀಡಿದ್ದವು. ಇದೀಗ ಮತ್ತೊಂದು ವಿಚಾರಕ್ಕೆ ಟಾಕ್ಸಿಕ್ ಸಿನಿಮಾ ಸದ್ದು ಮಾಡ್ತಿದೆ. ಇದೀಗ ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ಸಿನಿಮಾ ವಿರುದ್ಧ ತಿರುಗಿಬಿದ್ದಿದೆ.
ಟಾಕ್ಸಿಕ್ ಸಿನಿಮಾ ದೃಶ್ಯಗಳಲ್ಲಿ ಕ್ರೈಸ್ತರಿಗೆ ಮುಜುಗರ ತರಲಾಗಿದೆ. ಕ್ರೈಸ್ತರ ದೇವದೂತ ಸಂತ ಮಿಕಯೇಲ್ಗೆ ಅಪಮಾನ ಮಾಡಲಾಗಿದೆ. ದೇವದೂತರ ಮುಂದೆ ಅಶ್ಲೀಲ ಚಿತ್ರೀಕರಣ ಮಾಡಿದ್ದಾರೆ. ಹೀಗಾಗಿ ಯೂಟ್ಯೂಬ್ ಪೋಸ್ಟ್ಗಳನ್ನ ತೆಗೆಯಬೇಕು, ಸಿನಿಮಾದಲ್ಲಿ ಚಿತ್ರೀಕರಣ ಮಾಡಿರುವ ದೃಶ್ಯಗಳನ್ನ ತೆಗೆಯುವಂತೆ ಸೂಚನೆ ನೀಡಬೇಕು ಎಂದು ನ್ಯಾಷನಲ್ ಕ್ರಿಶ್ಚಿಯನ್ ಫೆಡರೇಷನ್ ಚಲನಚಿತ್ರ ವಾಣಿಜ್ಯ ಮಂಡಳಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಗೃಹಸಚಿವರು ಹಾಗೂ ಸೆನ್ಸಾರ್ ಬೋರ್ಡ್ಗೆ ದೂರು ನೀಡಲಾಗಿದೆ.
ಕೂಡಲೇ ಚಿತ್ರತಂಡ ಸಂತ ಮಿಕಯೇಲ್ ಮುಂದೆ ಚಿತ್ರೀಕರಿಸಿರುವ ದೃಶ್ಯಗಳನ್ನ ತೆಗೆಯಬೇಕು. ಅಪಮಾನ ಮಾಡಿದ್ದಕ್ಕಾಗಿ ಕ್ರೈಸ್ತರಲ್ಲಿ ಕ್ಷಮೆ ಕೇಳಬೇಕು. ಒಂದು ವೇಳೆ ಪೋಸ್ಟ್ಗಳನ್ನ ತೆಗೆಯದಿದ್ದರೆ, ಕಾನೂನು ಹೋರಾಟ ಮಾಡಲಾಗುವುದು ರಾಷ್ಟ್ರೀಯ ಕ್ರೈಸ್ತರ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ನೋಡಿರಿ

