ಇದು ಶಾಲೆನಾ.. ಮಸಾಜ್‌ ಪಾರ್ಲರಾ? –  ಕ್ಲಾಸ್‌ನಲ್ಲೇ ಮಕ್ಕಳ ಕೈಯಲ್ಲಿ ಮಸಾಜ್‌ ಮಾಡಿಕೊಂಡ ಶಿಕ್ಷಕಿ!  

ಇದು ಶಾಲೆನಾ.. ಮಸಾಜ್‌ ಪಾರ್ಲರಾ? –  ಕ್ಲಾಸ್‌ನಲ್ಲೇ ಮಕ್ಕಳ ಕೈಯಲ್ಲಿ ಮಸಾಜ್‌ ಮಾಡಿಕೊಂಡ ಶಿಕ್ಷಕಿ!  

ಶಾಲೆ ಅಂದಾಗ ಟೀಚರ್‌ ಪಾಠ ಮಾಡ್ತಿದ್ರೆ, ವಿದ್ಯಾರ್ಥಿಗಳು ಕೂತು ಪಾಠ ಕೇಳುವ ಚಿತ್ರಣ ನಮ್ಮ ಕಣ್ಣ ಮುಂದೆ ಬರುತ್ತೆ. ಆದ್ರೆ ಇಲ್ಲೊಂದು ಕಡೆ ಮಾತ್ರ ಶಿಕ್ಷಕಿ ಕ್ಲಾಸ್‌ನ ಮಸಾಜ್‌ ಪಾರ್ಲರ್‌ ಮಾಡಿಕೊಂಡಿದ್ದಾರೆ. ಮಕ್ಕಳ ಕೈಯಲ್ಲಿ ಮಸಾಜ್‌ ಮಾಡಿಸುತ್ತಿರುವ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗ್ತಿದೆ.

ಇದನ್ನೂ ಓದಿ: ಹೈಕಮಾಂಡ್‌ ಚಾನ್ಸ್‌ ಕೊಟ್ಟರೆ ಮತ್ತೆರಡು ಬಜೆಟ್‌ ಮಂಡನೆ ಮಾಡುತ್ತೇನೆ! – ಸಿಎಂ ಸಿದ್ದರಾಮಯ್ಯ!

ಶಿಕ್ಷಕಿಯೊಬ್ಬಳು ತನ್ನ ಅಧಿಕಾರವನ್ನೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಶಿಕ್ಷಕಿಯೊಬ್ಬಳು ಪುಟ್ಟ ವಿದ್ಯಾರ್ಥಿನಿಯಿಂದ ಮಸಾಜ್ ಮಾಡಿಸಿಕೊಂಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್​ ಮಿಡಿಯಾಗಳಲ್ಲಿ ವೈರಲ್​ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

 ಏನಿದು ಘಟನೆ?

ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಈ ನಾಚಿಕೆಗೇಡಿನ ಘಟನೆ ನಡೆದಿದೆ. ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿರುವ ಮಧು ರೈ, ಪಾಠ ಮಾಡುವ ಬದಲು, ತರಗತಿಯಲ್ಲಿ ವಿದ್ಯಾರ್ಥಿನಿಯೊಬ್ಬಳಿಂದ ಮಸಾಜ್ ಮಾಡಿಸಿಕೊಂಡಿದ್ದಾಳೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಶಿಕ್ಷಕಿ ಮಧು ರೈ ತರಗತಿಯ ನೆಲದ ಮೇಲೆ ಮಲಗಿದ್ದು, ಸುತ್ತ ಇರುವ ಪುಟ್ಟ ಬಾಲಕಿಯರು ಶಿಕ್ಷಕಿಯ ಕಾಲುಗಳನ್ನು ಒತ್ತುತ್ತಿರುವ ದೃಶ್ಯ ಸೆರೆಯಾಗಿದೆ. ಜ್ಞಾನದ ದೀಪ ಬೆಳಗಬೇಕಾದ ಗುರುವೇ, ಮಕ್ಕಳನ್ನು ಇಂತಹ ಕೀಳು ಕೆಲಸಗಳಿಗೆ ಬಳಸಿಕೊಂಡಿರುವುದು ಪೋಷಕರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ, ಕೂಡಲೇ ತನಿಖೆಗೆ ಆದೇಶಿಸಿದೆ. ಚಿತ್ರಕೂಟದ ಜಿಲ್ಲಾ ಮೂಲ ಶಿಕ್ಷಣಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯೋಪಾಧ್ಯಾಯಿನಿಯನ್ನು ಅಮಾನತುಗೊಳಿಸಲು ಮುಂದಾಗಿರುವುದು ವರದಿಯಾಗಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಘಟನೆಗಳು ನಡೆಯುವುದು ಶಿಕ್ಷಕ ವೃತ್ತಿಗೇ ಅವಮಾನ. ವಿದ್ಯಾರ್ಥಿಗಳ ಮೇಲೆ ಇಂತಹ ಒತ್ತಡ ಹೇರುವುದು ಶಿಕ್ಷಣ ಇಲಾಖೆಯ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Shwetha M