ಹಸೆಮಣೆ ಏರಬೇಕಿದ್ದ ಜೀವದ ಗೆಳತಿಯರ ಬಾಳಲ್ಲಿ ದುರಂತ! – ಸ್ನೇಹಿತೆಯರ ಖುಷಿ ಕಸಿದುಕೊಂಡ ಯಮರಾಜ!

ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಭೀಕರ ಬಸ್ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ, ಮದುವೆಗೆ ಸಿದ್ಧರಾಗಿದ್ದ ಹಾಸನ ಮೂಲದ ಇಬ್ಬರು ಆಪ್ತ ಗೆಳತಿಯರಾದ ನವ್ಯ ಮತ್ತು ಮಾನಸ ಒಟ್ಟಿಗೆ ಪ್ರಾಣ ಕಳೆದುಕೊಂಡಿದ್ದು, ಅವರ ಕುಟುಂಬಗಳ ಕನಸುಗಳು ನುಚ್ಚುನೂರಾಗಿವೆ.
ಇದನ್ನೂ ಓದಿ: ಅಬ್ಬಬಾ.. ಬೈಕ್ ಸೀಟ್‌ನಲ್ಲಿತ್ತು 57 ಲಕ್ಷ ಹಣ! – ಸ್ಮಗ್ಲರ್ ಪ್ಲ್ಯಾನ್‌ಗೆ ಪೊಲೀಸರೇ ಶಾಕ್!
ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಸಮೀಪ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಲಾರಿ ಡ್ರೈವರ್ ಸೇರಿ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ನವ್ಯ ಹಾಗೂ ಮಾನಸ ಅವರ ಪೋಷಕರ ನೋವಿನ ಕಥೆ ಕರುಳು ಹಿಂಡುವಂತಿದೆ. ಜೀವದ ಗೆಳತಿಯರಿಬ್ಬರು ಸಿಗಂದೂರಿಗೆ ಪ್ರಯಾಣಿಸುತ್ತಿದ್ದರು. ಮಾನಸ ಮತ್ತು ನವ್ಯ ಎಂಬ ಇಬ್ಬರಿಗೂ ಮದುವೆ ನಿಶ್ಚಯವಾಗಿತ್ತು. ಈಗ ಇಬ್ಬರ ದುರ್ಮರಣ ಕುಟುಂಬದವರ ಕಣ್ಣೀರಿನ ಕಥೆಯಾಗಿ ಮಾರ್ಪಟ್ಟಿದೆ. ಇನ್ನೂ ಕೆಲವೇ ತಿಂಗಳಲ್ಲಿ ಹಸೆಮಣೆ ಏರಬೇಕಿದ್ದ ಮಗಳಂದಿರು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಗುರುತೇ ಸಿಗದಂತೆ ಆಗಿರುವುದು ಪಾಲಕರಿಗೆ ಆಘಾತ ತರಿಸಿದೆ. ನಮ್ಮ ಮಗಳನ್ನ ಹುಡುಕಿ ಕೊಡಿ, ಮದುವೆ ಫಿಕ್ಸ್ ಆಗಿದೆ ಎಂದು ಮಾನಸ ತಂದೆ ಕಣ್ಣೀರು ಹಾಕಿದ್ದರು. ಈವರೆಗೂ 6 ಮೃತದೇಹಗಳು ಪತ್ತೆಯಾಗಿದ್ದು, ಈ ಪೈಕಿ ನವ್ಯಾ ಹಾಗೂ ಮಾನಸಾ ಶವಗಳ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಶವಾಗಾರದಲ್ಲಿ ಮಾನಸಾ ತಂದೆ ಗಣೇಶನ ಪೆಂಡೆಂಟ್ ಇದ್ದ ಲಾಕೆಟ್ ಮೂಲಕ ಮಗಳ ಶವವನ್ನು ಪತ್ತೆಹಚ್ಚಿದ್ದಾರೆ ಎಂದು ಚಿತ್ರದುರ್ಗ ಎಸ್‌ಪಿ ರಂಜಿತ್ ಬಂಡಾರು ತಿಳಿಸಿದ್ದಾರೆ.
ಈ ಕುರಿತು ಮಾನಸಾ ತಂದೆ ಚಂದ್ರೇಗೌಡ ಮಾತನಾಡಿ, ಮಗಳಿಗೆ ಪ್ರೀತಿಯಿಂದ ಚಿನ್ನದ ಸರ ಹಾಗೂ ಗಣೇಶನ ಡಾಲರ್ ಕೊಡಿಸಿದ್ದೆ. ಎಂಗೇಜ್‌ಮೆಂಟ್ ಆಗಿತ್ತು. ಮದುವೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ವಿಧಿಯಾಟ ಅವಳು ಬದುಕುಳಿಯಲಿಲ್ಲ. ಕೊನೆಗೆ ಬೆಂಗಳೂರಿನಿಂದ ಗೋಕರ್ಣ ಹೋಗಲು ನಾನೇ ಹೋಗಿ ಬಸ್ ಹತ್ತಿಸಿದ್ದೆ ಎಂದು ಕಣ್ಣೀರಿಟ್ಟಿದ್ದಾರೆ.

ನೋಡಿರಿ

