ಪವನ್ ಕಲ್ಯಾಣ್ ಗೆ ಬೆಂಬಲ ಸೂಚಿಸಿದ ಬೆನ್ನಲ್ಲೇ ಯೂ – ಟರ್ನ್ ಹೊಡೆದ ಮೆಗಾಸ್ಟಾರ್ ಚಿರಂಜೀವಿ
ಆಂಧ್ರಪ್ರದೇಶದಲ್ಲಿ ಚುನಾವಣಾ ಕಾವು ರಂಗೇರಿದೆ. ನಟ ಪವನ್ ಕಲ್ಯಾಣ್ ಪೀಠಾಪುರಂ ಕ್ಷೇತ್ರದಿಂದ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಈ ಬಾರಿ ಇತರೆ ರಾಜಕೀಯ ಪಕ್ಷಗಳ ಜೊತೆಗೆ ಸಿನಿಮಾ ರಂಗದ ಸೆಲೆಬ್ರಿಟಿಗಳು ಕೂಡ ಪವನ್ ಕಲ್ಯಾಣ್ಗೆ ಬೆಂಬಲ ನೀಡುತ್ತಿದ್ದಾರೆ. ಈ ಹಿಂದೆ ಮುನಿಸಿಕೊಂಡಿದ್ದ ಅಣ್ಣ ಮೆಗಾಸ್ಟಾರ್ ಚಿರಂಜೀವಿ ಸಹ ಪವನ್ ಕಲ್ಯಾಣ್ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಬೆಂಬಲ ಸೂಚಿಸಿದ ಕೆಲವೇ ದಿನಗಳಲ್ಲಿ ಚಿರಂಜೀವಿ ಯೂ-ಟರ್ನ್ ಹೊಡೆದರಾ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಪುಲ್ವಾಮಾ ದಾಳಿಗೆ ಬಿಜೆಪಿಯೇ ನೇರ ಹೊಣೆ..! ಗುಪ್ತಚರ ಬ್ಯೂರೋ ಏನು ಮಾಡುತ್ತಿದೆ? – ರೇವಂತ್ ರೆಡ್ಡಿ
ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಪ್ರಕಟಿಸಿದ್ದ ಮೆಗಾಸ್ಟಾರ್ ಚಿರಂಜೀವಿ, ಸಹೋದರ ಪವನ್ ಕಲ್ಯಾಣ್ ಪರವಾಗಿ ಮಾತನಾಡಿದ್ದರು. ಪವನ್ಗೆ ಸಮಾಜ ಸೇವೆ ಮಾಡುವ ಅತೀವ ಆಸೆಯಿದೆಯೆಂದು, ಪವನ್ ಜನಪರ ಕಾಳಜಿ ಇರುವ ವ್ಯಕ್ತಿಯೆಂದು. ಈ ಬಾರಿ ಪವನ್ಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಆದ್ರೆ ಇದೀಗ ತಮಗೆ ಯಾವುದೇ ರಾಜಕೀಯ ಪಕ್ಷದೊಟ್ಟಿಗೆ ಸಂಬಂಧ ಇಲ್ಲವೆಂದು ಚಿರಂಜೀವಿ ಹೇಳಿದ್ದಾರೆ. ಇದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ.
ಮೇ 13ರಂದು ಆಂಧ್ರಪ್ರದೇಶದ ಚುನಾವಣೆ ನಡೆಯುತ್ತಿದೆ ಈಗಾಗಲೇ ಮತದಾರನ ಒಲವು ಪವನ್ ಕಲ್ಯಾಣ್ ಕಡೆ ಇದೆ ಎಂದು ಹೇಳಲಾಗುತ್ತಿದೆ. ನಟ ನಾನಿ ಸೇರಿದಂತೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಪವನ್ ಕಲ್ಯಾಣ್ ಪರ ಮತಯಾಚನೆ ಮಾಡುವ ಇಂಗಿತವನ್ನೂ ವ್ಯಕ್ತ ಪಡಿಸಿದ್ದಾರೆ. ಈ ಚುನಾವಣೆ ನಿಜಕ್ಕೂ ರಂಗೇರಿದೆ. ಈ ನಡುವೆ ಚಿರಂಜೀವಿ ಮಾತು ಅಚ್ಚರಿ ಮೂಡಿಸಿದೆ.