ಬೆಳ್ತಂಗಡಿ ಕೋರ್ಟ್‌ಗೆ ಚಿನ್ನಯ್ಯ ಹಾಜರು! – ತಿಮರೋಡಿಗಾಗಿ ಪೊಲೀಸರಿಂದ ಹುಡುಕಾಟ!

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ಹೊಸ ಹೊಸ ತಿರುವು ಪಡೆದುಕೊಳ್ತಿದೆ. ಇದೀಗ ಮಾಸ್ಕ್ ಮ್ಯಾನ್ ಚಿನ್ನಯ್ಯ ಅರೆಸ್ಟ್ ಆಗಿದ್ದು, ಮತ್ತೊಂದ್ಕಡೆ ಮಹೇಶ್ ಶೆಟ್ಟಿ ತಿಮರೋಡಿಯನ್ನು ರಾಯಚೂರಿನ ಮಾನ್ವಿಗೆ ಗಡಿಪಾರು ಮಾಡಲಾಗಿದೆ. ತಿಮರೋಡಿ ಗಡಿಪಾರು ಆಗ್ತಿದ್ದಂತೆ, ಇತ್ತ ಬುರುಡೆ ಗ್ಯಾಂಗ್‌ನಿಂದ 15 & 16ನೇ ವಿಡಿಯೋ ರಿಲೀಸ್ ಆಗಿದೆ.
ಇದನ್ನೂ ಓದಿ: ಪಹಲ್ಗಾಮ್ ಭಯೋತ್ಪಾದಕರ ಕುರಿತು ಜೋರಾದ ತನಿಖೆ – ಸತ್ಯ ಹೊರ ಹಾಕುತ್ತಾ ಮೊಬೈಲ್ ಚಾರ್ಜರ್?
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಡಲಾಗಿದೆ ಎಂದು ಆರೋಪ ಮಾಡಿದ್ದ ಗ್ಯಾಂಗ್‌ನಿಂದ 15 & 16ನೇ ವಿಡಿಯೋ ರಿಲೀಸ್ ಆಗಿದೆ. 2023ರ ಆಗಸ್ಟ್‌ನಲ್ಲಿ ಮಾಡಿದ ವಿಡಿಯೋ ಇದಾಗಿದ್ದು, ತಿಮರೋಡಿ ಮನೆಗೆ ಚಿನ್ನಯ್ಯ ಮೊದಲ ಭಾರೀ ಭೇಟಿ ನೀಡಿದ್ದಾಗ ಚೆನ್ನೈ ಮೂಲದ ಸ್ವಾಮೀಜಿ, ಸೌಜನ್ಯ ಕೇಸ್, ಮಹಿಳೆಯರ ಕೊಲೆಗಳ ಬಗ್ಗೆ ಚರ್ಚೆ ಆಗಿದೆ. ಪಾಯಿಂಟ್ ನಂ.16ರಲ್ಲಿ ಅನಾಥ ಶವ ಹೂತಿರೋ ಬಗ್ಗೆಯೂ ಚಿನ್ನಯ್ಯ ಹೇಳಿದ್ದಾನೆ. ಕೋರ್ಟ್‌ನಲ್ಲಿ ಚಿನ್ನಯ್ಯ 183 ಸ್ವಇಚ್ಛಾ ಹೇಳಿಕೆ ಪೂರ್ಣವಾಗದಿದ್ದರಿಂದ ಇಂದು ಮತ್ತೆ ಹೇಳಿಕೆ ದಾಖಲಿಸಲಿದೆ.
ಮಹೇಶ್ ಶೆಟ್ಟಿ ತಿಮರೋಡಿಯನ್ನು ರಾಯಚೂರಿನ ಮಾನ್ವಿಗೆ ಗಡಿಪಾರು ಮಾಡಲಾಗಿದೆ. ಈ ಆದೇಶ ಜಾರಿಯಾಗ್ತಿದ್ದಂತೆ ಮಾನ್ವಿ ತಾಲೂಕಿಗೆ ತಿಮರೋಡಿಯನ್ನು ಗಡಿಪಾರು ಮಾಡಿದ್ದಕ್ಕೆ ವಿರೋಧ ವ್ಯಕ್ತವಾಗಿದೆ. ನಮ್ಮ ಜಿಲ್ಲೆಗೆ ಬೇಡ, ಯಾವುದಾದರೂ ಕಾಡಿಗೆ ಕಳುಹಿಸಿ ಎಂದು ದಲಿತ ಸೇನೆ ಹಾಗೂ ಸಮಾನ ಮನಸ್ಕರ ವೇದಿಕೆ ಪ್ರತಿಭಟನೆ ನಡೆಸಿದೆ. ಆದ್ರೀಗ ತಿಮರೋಡಿಯ ಸುಳಿವು ಇಲ್ಲಿವರೆಗೂ ಸಿಕ್ಕಿಲ್ಲ. ಪ್ರತಿ 7 ದಿನಗಳಿಗೊಮ್ಮೆ ಮಾನ್ವಿ ಠಾಣೆಯ ಅಧಿಕಾರಿ ಮುಂದೆ ಹಾಜರಾಗಲು ಸೂಚನೆ ನೀಡಲಾಗಿದೆ. ಆದ್ರೆ ತಿಮರೋಡಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಮಾನ್ವಿಗೂ ಹೋಗಿಲ್ಲ ಎಂದು ವರದಿಯಾಗಿದೆ. ಈ ಮಧ್ಯೆ, ತಿಮರೋಡಿ ಮನೆಗೆ ಎಸ್‌ಐಟಿ ಅಧಿಕಾರಿಗಳು ಭೇಟಿ ನೀಡಿ, ಹಣ ವರ್ಗಾವಣೆ ಬಗ್ಗೆ ಪತ್ನಿಯಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ನೋಡಿರಿ

