ಟಿಬೆಟ್‌ ಹೆಸರನ್ನೇ ಬದಲಾಯಿಸಿದ ಚೀನಾ – ಡ್ರ್ಯಾಗನ್‌ ರಾಷ್ಟ್ರದ ಹೊಸ ಪ್ಲ್ಯಾನ್‌ ಏನು?

ಟಿಬೆಟ್‌ ಹೆಸರನ್ನೇ ಬದಲಾಯಿಸಿದ ಚೀನಾ – ಡ್ರ್ಯಾಗನ್‌ ರಾಷ್ಟ್ರದ ಹೊಸ ಪ್ಲ್ಯಾನ್‌ ಏನು?

ಡ್ರ್ಯಾಗನ್‌ ರಾಷ್ಟ್ರ ಚೀನಾ ಭಾರತದ ಮೇಲೆ ಸದಾ ಒಂದು ಕಣ್ಣಿಟ್ಟಿದೆ. ಇದೀಗ ಚೀನಾ ಭಾರತದ ಮೇಲೆ ಕಣ್ಣಿಡಲು ಮತ್ತೊಂದು  ಹೊಸ ಪ್ಲ್ಯಾನ್‌ ಮಾಡಿದೆ. ಚೀನಾ ಸರ್ಕಾರ ಟಿಬೆಟ್ ನ ಹೆಸರನ್ನೇ ಬದಲಾಯಿಸಿದೆ.

ಹೌದು ಬಹಳ ವರ್ಷಗಳಿಂದಲೂ ಟಿಬೆಟ್‌ ಮೇಲೆ ನಿಯಂತ್ರಣ ಸಾಧಿಸಿದ್ದರೂ ಟಿಬೆಟ್‌ ಕುರಿತ ಮಾಹಿತಿ ನೀಡುವಾಗ ಟಿಬೆಟ್‌ ಎಂದೇ ಪ್ರಸ್ತಾಪಿಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಟಿಬೆಟ್‌ ಕುರಿತ ಶ್ವೇತಪತ್ರದಲ್ಲಿ ಟಿಬೆಟ್‌ನ ಹೆಸರಿನ ಇಂಗ್ಲಿಷ್‌ ಭಾವಾನುವಾದ ಕ್ಸಿ ಜಾಂಗ್‌ ಎಂದು ಪ್ರಸ್ತಾಪಿಸಲಾಗಿದೆ. ಈ ಮೂಲಕ ಟಿಬೆಟ್‌ ಹೆಸರನ್ನು ಅಧಿಕೃತವಾಗಿ ಬದಲಾಯಿಸುವ ಹುನ್ನಾರ ನಡೆಸಿದೆ ಎನ್ನಲಾಗಿದೆ.

ಚೀನಾ ಈ ಹೆಸರನ್ನು ಶ್ವೇತಪತ್ರಗಳಲ್ಲಿ ಬಳಸಿರುವ ಹಿನ್ನೆಲೆಯಲ್ಲಿ ಅಲ್ಲಿನ ಮಾಧ್ಯಮಗಳೂ ಕೂಡ ಅದನ್ನೇ ಬಳಸಲು ಪ್ರಾರಂಭಿಸಿದೆ. ಇದನ್ನು ಟಿಬೆಟ್‌ನ ರಾಜಕೀಯ ಮುಖಂಡರು ಚೀನಾ ಸರ್ಕಾರದ ವರ್ತನೆಯನ್ನು ಖಂಡಿಸಿದ್ದು, ಹೆಸರು ಬದಲಿಸುವ ಮೂಲಕ ತಮ್ಮ ಅಸ್ಮಿತೆಯನ್ನೇ ಹೊಸಕಿ ಹಾಕಲು ಚೀನಾ ಸಂಚು ರೂಪಿಸಿದೆ ಎಂದು ಕಿಡಿಕಾರಿದ್ದಾರೆ.

ಟಿಬೆಟಿಯನ್ನರ ಪ್ರಾದೇಶಿಕವಾದ ಬೌದ್ಧ ಧರ್ಮದ ಪಂಥವನ್ನ ಅನುಸರಿಸುತ್ತಾರೆ. ಆದರೆ ಚೀನಾದ ಬೌದ್ಧ ಧರ್ಮ ಕಮ್ಯುನಿಸಂನ ಪ್ರಭಾವಕ್ಕೆ ಒಳಗಾಗಿ, ಮಾವೋ ಅವರ ಸಂಪೂರ್ಣ ಕ್ರಾಂತಿಗೆ ಬಲಿಯಾಗಿ, ತನ್ನತನವನ್ನು ಕಳೆದುಕೊಂಡು ಸಾಮ್ರಾಜ್ಯಶಾಹಿಯಾಗಿದೆ. ಇದಕ್ಕೆ ಸದಾ ಟಿಬೆಟ್‌ನ ಮೇಲೆ ಕಣ್ಣು. ಟಿಬೆಟ್‌ ಅನ್ನು ಆಕ್ರಮಿಸಿದರೆ ಅಲ್ಲಿಂದ ಭಾರತದ ಮೇಲೂ ಕಣ್ಣಿಡುವುದು ಸುಲಭ ಎಂಬುದು ಚೀನಾದ ಯೋಚನೆ ಎಂದು ಹೇಳಲಾಗುತ್ತಿದೆ.

Shwetha M