ರೊಮ್ಯಾನ್ಸ್ ಮಾಡಲು ವೇತನ ಸಹಿತ 30 ದಿನ ರಜೆ – ನವದಂಪತಿಗೆ ಸರ್ಕಾರದಿಂದಲೇ ಭರ್ಜರಿ ಆಫರ್!

ರೊಮ್ಯಾನ್ಸ್ ಮಾಡಲು ವೇತನ ಸಹಿತ 30 ದಿನ ರಜೆ – ನವದಂಪತಿಗೆ ಸರ್ಕಾರದಿಂದಲೇ ಭರ್ಜರಿ ಆಫರ್!

ಮದುವೆ ಅನ್ನೋದು ಎಲ್ಲರ ಜೀವನದಲ್ಲೂ ಬರುವ ಅಪರೂಪದ ಗಳಿಗೆ. ಆದ್ರೆ ಕೆಲಸಕ್ಕೆ ಹೋಗೋರಿಗೆ ಮಾತ್ರ ಮದುವೆ ಅಂದಾಗ ಮೊದಲು ಎದುರಾಗುವುದೇ ರಜೆಯ ಟೆನ್ಷನ್. ಕೆಲ ಬಾಸ್​ಗಳು 10, 15, 20 ದಿನ ರಜೆ ಕೊಡ್ತೇನೆ ಅಂದ್ರೆ ಇನ್ನೂ ಕೆಲ ಬಾಸ್​ಗಳು ಮೂರೇ ದಿನ ರಜೆ ಕೊಡೋದು. ಕೆಲಸ ಮಾಡೋರು ಯಾರು ಇಲ್ಲ ಅಂತಾ ಕಡ್ಡಿ ತುಂಡು ಮಾಡಿದಂತೆ ಹೇಳಿ ಬಿಡ್ತಾರೆ. ಅತ್ತ ಮದುವೆ ಆಸೆಗೆ ಕೆಲಸ ಬಿಟ್ರೆ ಮುಂದೆ ಹೇಗಪ್ಪಾ ಅಂತಾ ಅನ್ಕೊಂಡು ನಾಲ್ಕೈದು ದಿನಗಳ ರಜೆಯಲ್ಲೇ ಮದುವೆ ಮುಗಿಸಿಕೊಂಡು ಬರ್ತಾರೆ. ಹೀಗೆ ಮದುವೆಗೇ 3 ದಿನ ರಜೆ ಕೊಟ್ಟೋರು ಇನ್ನು ಹನಿಮೂನ್​ಗೆ ಕೊಡ್ತಾರಾ..? ಆದ್ರೆ ಈ ದೇಶದಲ್ಲಿ ಮಾತ್ರ ನವದಂಪತಿ ರೊಮ್ಯಾನ್ಸ್ ಮಾಡೋಕೆ ಅಂತಾನೇ 1 ತಿಂಗಳು ರಜೆ ನೀಡುವಂತೆ ಘೋಷಣೆ ಮಾಡಿದೆ.

ಇದನ್ನೂ ಓದಿ : ಕೋವಿಡ್‌ಗೆ ಹೆದರಿ ಮೂರು ವರ್ಷಗಳಿಂದ ಗೃಹಬಂಧನ – ಹೊರ ಪ್ರಪಂಚಕ್ಕೆ ಕೊನೆಗೂ ಕಾಲಿಟ್ಟ ತಾಯಿ ಮಗ

ಹೌದು. ನೀವು ಓದಿದ್ದು ಸರಿಯಾಗಿಯೇ ಇದೆ. ರೊಮ್ಯಾನ್ಸ್ ಮಾಡೋಕೆ ಅಂತಾನೇ 1 ತಿಂಗಳು ರಜೆ ಕೊಡಲು ಚೀನಾ ದೇಶ ಮುಂದಾಗಿದೆ. ಚೀನಾ ಈ ಹೊಸ ನಿಯಮವನ್ನು ಪರಿಚಯಿಸಿದ್ದು, ಇದು ಜಸ್ಟ್ ಮ್ಯಾರೀಡ್ ಕಪಲ್ ಹಾಗೂ ಭಾವೀ ವಧು-ವರರಿಗೆ ನೆಮ್ಮದಿ ನೀಡುವ ಉದ್ದೇಶ ಹೊಂದಿದೆ. ಎಷ್ಟೋ ಸಲ ರಜೆ ಸಿಗದೇ ನೂತನ ವಧು ವರರು ಪರಸ್ಪರ ಜೊತೆಯಾಗಿ ಕಾಲ ಕಳೆಯಲು ಕೂಡ ಆಗದ ಸ್ಥಿತಿ ನಿರ್ಮಾಣವಾಗುತ್ತದೆ. ಆದರೆ, ಚೀನಾ ದೇಶ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಮದುವೆಯಾದ ದಂಪತಿಗೆ ರೊಮ್ಯಾನ್ಸ್ ಮಾಡುವ ಸಲುವಾಗಿ 30 ದಿನಗಳ ವೇತನ ಸಹಿತ ರಜೆ ನೀಡುವುದಾಗಿ ಚೀನಾ ಸರ್ಕಾರ ಘೋಷಿಸಿದೆ.

ಯುವಜನತೆಯನ್ನು ಮದುವೆಯಾಗಲೂ ಪ್ರೇರೇಪಿಸುವ ನಿಟ್ಟಿನಲ್ಲಿ ಈ ಯೋಜನೆಗೆ ಚೀನಾ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಚೀನಾದಲ್ಲಿ ಈ ಮೊದಲು ಮದುವೆಯಾದವರಿಗೆ ಮೂರು ದಿನಗಳ ರಜೆ ನೀಡಲಾಗುತ್ತಿತ್ತಂತೆ. ಸದ್ಯ ಸಿಚುವಾನ್‌ನಲ್ಲಿ, ನವವಿವಾಹಿತ ದಂಪತಿಗಳು ಇನ್ನೂ ಮೂರು ದಿನಗಳ ರಜೆಯನ್ನು ನೀಡಲಾಗುತ್ತಿದೆ. ಮತ್ತೊಂದು ಮುಖ್ಯ ವಿಚಾರವೇನೆಂದರೆ ಈ ಹೊಸ ತೀರ್ಮಾನ ಎಲ್ಲ ಪ್ರಾಂತ್ಯದಲ್ಲಿ ಜಾರಿಯಾಗಿಲ್ಲ ಎನ್ನಲಾಗಿದೆ. ಚೀನಾದ ಕೆಲವು ಭಾಗಗಳಲ್ಲಿ ಈ ವಿಶೇಷ 30 ದಿನಗಳ ರಜೆ ನೀಡಲಾಗುತ್ತಿದ್ದು, ಇದು ಗನ್ಸು ಮತ್ತು ಶಾಂಕ್ಸಿ ಪ್ರಾಂತ್ಯಗಳನ್ನು ಒಳಗೊಂಡಿದೆ. ಇದರ ಜೊತೆಗೆ, ಶಾಂಘೈನಲ್ಲಿ 10 ದಿನಗಳ ರಜೆಯನ್ನು ನೀಡಲಾಗುತ್ತಿದೆ.

ಸಹಜವಾಗಿ ನಿಮಗೆಲ್ಲ ಚೀನಾ ಸರ್ಕಾರ ಈ ರೀತಿ ನಿರ್ಣಯ ಕೈಗೊಳ್ಳಲು ಕಾರಣವೇನು ಎಂಬ ಕುತೂಹಲ ಸೃಷ್ಟಿಸಿರಬಹುದು. ಚೀನಾದಲ್ಲಿ ಜನಸಂಖ್ಯೆಯು ವೇಗವಾಗಿ ಕಡಿಮೆಯಾಗುತ್ತಿದ್ದು ಇದನ್ನು ಕಂಡು ಗಾಬರಿಗೊಂಡ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸರ್ಕಾರ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಚೀನಾದಲ್ಲಿ ವಯಸ್ಸಾದವರ ಜನಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು ಇದರಿಂದಾಗಿ ಜನಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲು ಚೀನಾ ಸರ್ಕಾರ ಮುಂದಾಗಿದೆ.

ಜನ ಸಂಖ್ಯೆ ಹೆಚ್ಚಿಸುವ ಸಲುವಾಗಿ ಮದುವೆಯಾದವರಿಗೆ ರೊಮ್ಯಾನ್ಸ್ ಮಾಡಲು 30 ದಿನಗಳ ವೇತನ ಸಹಿತ ರಜೆ ನೀಡಲು ಚೀನಾ ಸರ್ಕಾರ ತೀರ್ಮಾನ ಕೈಗೊಂಡಿದೆ. ಚೀನಾ ದೇಶದಲ್ಲಿನ ಈ ನಿರ್ಧಾರ ನೋಡಿದ ಬೇರೆ ದೇಶಗಳ ದಂಪತಿ ನಮ್ಮ ದೇಶದಲ್ಲೂ ಇಂಥಾದ್ದೇ ತೀರ್ಮಾನ ಕೈಗೊಂಡರೆ ಎಷ್ಟು ಚೆಂದ ಅಂತಾ ಮಾತಾಡಿಕೊಳ್ತಿದ್ದಾರೆ.

suddiyaana