ಮಗ ಹುಡುಗಿಯರನ್ನ ಮನೆಗೆ ಕರೆದುಕೊಂಡು ಬರುತ್ತಿಲ್ಲ- ಕಾಯಿಲೆ ಇದೆ ಎಂದು ವೈದ್ಯರ ಬಳಿ ಹೋದ ತಾಯಿ!

ಮಗ ಹುಡುಗಿಯರನ್ನ ಮನೆಗೆ ಕರೆದುಕೊಂಡು ಬರುತ್ತಿಲ್ಲ- ಕಾಯಿಲೆ ಇದೆ ಎಂದು ವೈದ್ಯರ ಬಳಿ ಹೋದ ತಾಯಿ!

ವಯಸ್ಸಿಗೆ ಬಂದ ಯುವಕರಿಗೆ ದೊಡ್ಡ ತಲೆನೋವು ಅಂದ್ರೆ ನಿನ್ನ ಮದುವೆ ಯಾವಾಗ ಅನ್ನೋ ಪ್ರಶ್ನೆ. ಯಾವುದೇ ಸಮಾರಂಭಗಳಿಗೆ ಹೋದರೂ ನೆಕ್ಸ್ಟ್  ನಿಂದೆ ಮದುವೆ ಅಲ್ವಾ, ಯಾವಾಗ ಮದುವೆ? ಹುಡುಗಿ ನೋಡ್ಕೊಂಡಿದ್ಯಾ, ಅಥವಾ ನಾವೇ ಹುಡುಗಿ ಹುಡುಕಬೇಕಾ ಅಂತಾ ಹೆತ್ತವರು ಮತ್ತು ಸಂಬಂಧಿಕರು ಆಗಾಗ ಪೀಡಿಸುತ್ತಾರೆ. ಇನ್ನೂ ಕೆಲವರು ತಮ್ಮ ಮಕ್ಕಳು ಅವರಿಗೆ ಇಷ್ಟ ಬಂದವರನ್ನುಮದುವೆ ಮಾಡಿಕೊಳ್ಳಲಿ ಅಂತಾ ಹೇಳುತ್ತಿರುತ್ತಾರೆ. ಇನ್ನೂ ಕೆಲವರು ನಾಲ್ಕು ಕತ್ತೆ ವಯಸ್ಸಾಯ್ತು ಬೇಗ ಮದುವೆ ಮಾಡಿಕೋ ಅಂತಾ ಆಗಾಗ ಹೇಳುತ್ತಿರುತ್ತಾರೆ. ಇದೇ ವಿಚಾರವಾಗಿ ಚೀನಾದ ಮಹಿಳೆಯೊಬ್ಬಳು ತನ್ನ ಮಗನನ್ನು ಪದೇ ಪದೆ ಮನೋವೈದ್ಯರ ಬಳಿ ಕರೆದುಕೊಂಡು ಹೋಗುತ್ತಿದ್ಧಾಳಂತೆ. ಆಕೆ ಕೊಡೋ  ಕಾರಣ ಕೇಳಿದ್ರೆ ನೀವೂ ಶಾಕ್ ಆಗೋದು ಪಕ್ಕಾ!

ಮಧ್ಯ ಚೀನೀ ಪ್ರಾಂತ್ಯದ 38 ವರ್ಷದ ಹೆನಾನ್‌ನ ವಾಂಗ್ ಎಂಬಾತ ತನ್ನ ನೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. 2020 ರಿಂದ ಆತನ ತಾಯಿ ಪದೇ ಪದೆ ಮನೋ ವೈದ್ಯರ ಬಳಿ ಕರೆದುಕೊಂಡು ಹೋಗುತ್ತಿದ್ದಾರಂತೆ. ಆಕೆ ಕೊಡುವ ಕಾರಣ ಕೇಳಿ ವೈದ್ಯರೂ ಸಹ ಒಂದು ಕ್ಷಣ ದಿಗ್ಬ್ರಮೆಗೊಂಡಿದ್ದಾರಂತೆ.

ಇದನ್ನೂ ಓದಿ: ಭೂಕಂಪದಲ್ಲಿ ಸಾವನ್ನೇ ಗೆದ್ದ ಮಗು ಈಗ ‘ಮಿರಾಕಲ್’ – ಕಂದನಿಗೆ ಹಾಲುಣಿಸುತ್ತಿದ್ದಾರೆ ವೈದ್ಯರ ಪತ್ನಿ!

2020 ರಿಂದ ಹೆನಾನ್ ಯಾವುದೇ ಹುಡುಗಿಯನ್ನು ಮನೆಗೆ ಕರೆದಕೊಂಡು ಬರುತ್ತಿಲ್ಲ ಅಂತ ಆತನ ತಾಯಿ ಮನೋವೈದ್ಯರ ಬಳಿ ಕರೆದುಕೊಂಡು ಹೋಗುತ್ತಿದ್ದಾಳಂತೆ. ಇದು ಮಗನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಆತನ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ‘ತನ್ನ ಮಗ  ಇಲ್ಲಿವರೆಗೆ ಹೊಸ ವರ್ಷದಂದು ಒಬ್ಬಳೇ ಒಬ್ಬಳು ಹುಡುಗಿಯನ್ನೂ ಮನೆಗೆ ಕರೆದುಕೊಂಡು ಬಂದಿಲ್ಲ. ಏನಾದರೂ ಅವನಿಗೆ ಮನೋರೋಗವಿದೆಯೇ ಹೇಳಿ’ ಅಂತ ಪ್ರತಿ ಬಾರಿ ವೈದ್ಯರ ಬಳಿ ಕೇಳುತ್ತಿದ್ದಾರಂತೆ. ಆದರೆ ಮಗನಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ಆತ ಮಾನಸಿಕವಾಗಿ ದೃಢವಾಗಿದ್ದಾನೆ ಎಂದು ವೈದ್ಯರು ಹೇಳುತ್ತಾರಂತೆ.

ಹೀಗೆ ಒಂದು ಆಸ್ಪತ್ರೆಗೆ ಕರೆದುಕೊಂಡು ಹೋದರೆ ಪರವಾಗಿಲ್ಲ. ಒಂದು ಆಸ್ಪತ್ರೆಯಲ್ಲಿ ನಿಮ್ಮ ಮಗ ಆರೋಗ್ಯವಾಗಿದ್ದಾನೆ ಎಂದು ಹೇಳಿದ್ದನ್ನು ಆಕೆ ನಂಬದೇ ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಳಂತೆ. ಪ್ರತಿ ಬಾರಿ ಎಲ್ಲ ವೈದ್ಯರು ನಿಮ್ಮ ಮಗ ಚೆನ್ನಾಗಿ ಇದ್ದಾನೆ. ಮಾನಸಿಕವಾಗಿ ಸದೃಢವಾಗಿದ್ದಾನೆ ಅಂತ ಎಷ್ಟು ಬಾರಿ ಹೇಳಿದರೂ ಆಕೆ ಸಮಾಧಾನಗೊಂಡಿಲ್ಲಂತೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದಾನೆ.

‘ನಾನು ಅವಿವಾಹಿತ ಎಂದು ಗುರುತಿಸಿಕೊಳ್ಳುವ ಇರಾದೆ ಖಂಡಿತ ಇಲ್ಲ. ಆದರೆ ನನ್ನ ಕೆಲಸಗಳಲ್ಲಿ ಸಾಕಷ್ಟು  ಬ್ಯುಸಿಯಾಗಿದ್ದೇನೆ. ಅಲ್ಲದೆ ಈತನಕ ಸೂಕ್ತವೆನ್ನಿಸುವ ಯಾವುದೇ ವ್ಯಕ್ತಿಯನ್ನೂ ಭೇಟಿಮಾಡಿಲ್ಲ. ಏನು ಮಾಡುವುದು ನಾನು ಮದುವೆಯಾಗಿಲ್ಲವೆಂದು ನನ್ನ ತಾಯಿ ರಾತ್ರಿಹಗಲೂ ಯೋಚಿಸಿ ನಿದ್ರೆಯನ್ನೇ ಮಾಡುವುದಿಲ್ಲ. ಇದರಿಂದ ನನಗೆ ಬೇಸರವಾಗುತ್ತದೆ’ ಎಂದು ವಾಂಗ್ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

ತಾಯಿ ಆಸ್ಪತ್ರೆಗೆ ಹೋಗೋಣ ಎಂದು ಪದೇಪದೆ ಒತ್ತಾಯಿಸಿದಾಗ ಆಕೆಯ ಸಮಾಧಾನಕ್ಕೆ, ಧೈರ್ಯಕ್ಕೆ ವಾಂಗ್  ಹೋಗುತ್ತಾನೆ. ಪ್ರತೀ ವರ್ಷವೂ ಆತನಿಗೆ ಏನೂ ಸಮಸ್ಯೆ ಇಲ್ಲ ಎನ್ನುವುದು ದೃಢವಾಗುತ್ತೆ. ಹಾಗೆಯೇ ಈ ವರ್ಷವೂ ಅವನು ಮಾನಸಿಕವಾಗಿ ಸ್ವಸ್ಥವಾಗಿಯೇ ಇದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಆತನ ತಾಯಿ ಮಾತ್ರ ತನ್ನ ಮಗನಿಗೆ ಆದಷ್ಡು ಬೇಗ ಮದುವೆಯಾಗಲಿ ಅಂತಾ ನಾನಾ ರೀತಿಯ ಪ್ರಯತ್ನ ಮಾಡುತ್ತಿದ್ದಾಳೆ.

suddiyaana