ನೆರೆಮನೆಯಾತನ ಮೇಲೆ ಸೇಡು – 1,100 ಕೋಳಿಗಳನ್ನು ಬೆದರಿಸಿ ಕೊಂದಿದ್ದು ಹೇಗೆ ಗೊತ್ತಾ?  

ನೆರೆಮನೆಯಾತನ ಮೇಲೆ ಸೇಡು – 1,100 ಕೋಳಿಗಳನ್ನು ಬೆದರಿಸಿ ಕೊಂದಿದ್ದು ಹೇಗೆ ಗೊತ್ತಾ?  

ನೆರೆಹೊರೆಯವರು ಅಂದ ಮೇಲೆ ಸಣ್ಣ ಪುಟ್ಟ ಮನನಸ್ತಾಪಗಳು ಸಾಮಾನ್ಯ. ಇಂದು ಕಿತ್ತಾಡಿ ನಾಳೆ ಒಂದಾಗುವವರು ಇದ್ದಾರೆ. ಇನ್ನೂ ಕೆಲವರು ವರ್ಷಾನುಗಟ್ಟೆಲೆ ಕೋಪ ಮಾಡಿಕೊಂಡಿರುವುದನ್ನು ನೋಡಿರುತ್ತೇವೆ. ಆದರೆ  ಕೆಲವೊಂದು ಜಗಳಗಳು ತಾರಕಕ್ಕೇರಿ ಪೊಲೀಸ್ ಠಾಣೆ ಮೆಟ್ಟಿಲೇರುತ್ತವೆ. ಇಲ್ಲೊಬ್ಬ ವ್ಯಕ್ತಿ ನೆರೆಮನೆಯಾತನ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಮಾಡಿದ ಕೃತ್ಯ ಎಲ್ಲರನ್ನು ಬೆಚ್ಚಿಬೀಳಿಸುವಂತಿದೆ.

ಅಕ್ಕ ಪಕ್ಕದ ಮನೆಯವರು ಸಣ್ಣ ವಿಚಾರಗಳಿಗೂ ವಾದ ಮಾಡಿಕೊಳ್ಳುವುದು ಸಾಮಾನ್ಯ. ಈ ವೇಳೆ ವಾದ ವಿವಾದವಾಗುವುದೂ ಇದೆ. ಇಲ್ಲೊಬ್ಬ ವ್ಯಕ್ತಿ ನೆರೆಮನೆಯಾತನ ಮೇಲೆ ಸೇಡು ತೀರಿಸಿಕೊಳ್ಳಲು 1,100 ಕೋಳಿಗಳನ್ನು ಹೆದರಿಸಿ ಸಾಯಿಸಿದ್ದಾನೆ!

ಇದನ್ನೂ ಓದಿ: ಫಸ್ಟ್ ತಿನ್ನಿ ಆಮೇಲೆ ಬಿಲ್ ಪೇ ಮಾಡಿ! – ಮಾವು ಖರೀದಿಗೂ ಬಂತು ಇಎಂಐ!

ಚೀನಾದ ಗು ಎಂಬಾತನಿಗೆ ಸೇರಿದ ಮರವನ್ನು ಆತನ ಅನುಮತಿ ಇಲ್ಲದೇ ನೆರೆಮನೆ ಝಾಂಗ್ ಎಂಬಾತ 2022 ರ ಏಪ್ರಿಲ್ ನಲ್ಲಿ ಕತ್ತರಿಸಿದ್ದ. ಇದರಿಂದ ಸಿಟ್ಟಿಗೆದ್ದ ಗು, ಝಾಂಗ್ ನ ಕೋಳಿ ಫಾರ್ಮ್ ಗೆ ನುಗ್ಗಿ ಕೋಳಿಗಳನ್ನು ಬೆದರಿಸಿ ಅವುಗಳ ಸಾವಿಗೆ ಕಾರಣನಾಗಿದ್ದಾನೆ.

ಕೋಳಿ ಫಾರ್ಮ್ ನಲ್ಲಿ ಬ್ಯಾಟರಿ ದೀಪಗಳನ್ನು ಬಳಸಿ ಕೋಳಿಗಳನ್ನು ಬೆದರಿಸಿದ್ದಾನೆ. ಆರಂಭದಲ್ಲಿ ಸುಮಾರು 460 ಕೋಳಿಗಳು ಸಾವನ್ನಪ್ಪಿವೆ. ಘಟನೆಯ ನಂತರ ಗು ನನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ 35,734 ರೂಪಾಯಿ ದಂಡ ವಿಧಿಸಬೇಕು ಅಂತಾ ಕೋರ್ಟ್ ತೀರ್ಪು ನೀಡಿತ್ತು. ಇದರಿಂದ ಸಿಟ್ಟಿಗೆದ್ದ ಗು, ಝಾಂಗ್ ವಿರುದ್ಧ ಮತ್ತೆ ಸೇಡು ತೀರಿಸಿಕೊಳ್ಳಲು ಯೋಚಿಸಿದ್ದಾನೆ.

ಗು ಯೋಜನೆಯಂತೆ 2 ನೇ ಬಾರಿ ಸೇಡು ತೀರಿಸಿಕೊಳ್ಳಲು ಮತ್ತೆ ಕೋಳಿ ಫಾರ್ಮ್ ಗೆ ನುಗ್ಗಿ ಬ್ಯಾಟರಿ ದೀಪಗಳನ್ನು ಉರಿಸಿ 640 ಕೋಳಿಗಳನ್ನು ಕೊಂದಿದ್ದಾನೆ. ಒಟ್ಟಾರೆಯಾಗಿ ಗು ಸುಮಾರು 1,100 ಕೋಳಿಗಳನ್ನು ತನ್ನ ಸೇಡಿಗೆ ಕೊಂದಿದ್ದು, 1,64,855 ಮೌಲ್ಯದ ಕೋಳಿಗಳು ಸಾವನ್ನಪ್ಪಿವೆ ಅಂತಾ ವರದಿಯಾಗಿದೆ.

ಈ ಘಟನೆಗೆ ಸಂಬಂಧಿಸಿ ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಹೆಂಗ್ಯಾಂಗ್ ಕೌಂಟಿಯ ನ್ಯಾಯಾಲಯ, ಗು  ಉದ್ದೇಶಪೂರ್ವಕವಾಗಿ ಆಸ್ತಿ ನಷ್ಟ ಮಾಡಿದ್ದಾನೆ ಅಂತಾ ಹೇಳಿದೆ. ಅಷ್ಟೇ ಅಲ್ಲದೇ 6 ತಿಂಗಳ ಕಾಲ ಜೈಲು ಮತ್ತು 1 ವರ್ಷಗಳ ಕಾಲ ಮಾನಸಿಕ ವರ್ತನೆ ಮೇಲೆ ನಿಗಾ ವಹಿಸಬೇಕು ಅಂತಾ ಕೋರ್ಟ್ ತೀರ್ಪು ನೀಡಿದೆ.

suddiyaana