ಮಾರುಕಟ್ಟೆಗೆ ಕಾಲಿಡ್ತು ಜಿರಳೆ ಕಾಫಿ! – ಕಾಕ್ರೋಚ್‌ ಕಾಫಿ ಬೆಲೆ ಇಷ್ಟೊಂದಾ?

ಮಾರುಕಟ್ಟೆಗೆ ಕಾಲಿಡ್ತು ಜಿರಳೆ ಕಾಫಿ! – ಕಾಕ್ರೋಚ್‌ ಕಾಫಿ ಬೆಲೆ ಇಷ್ಟೊಂದಾ?

ಬೆಳಗ್ಗೆ ಎದ್ದ ಕೂಡಲೇ ಒಂದು ಕಪ್‌ ಕಾಫಿ ಕುಡಿದ್ರೆ ಮೈಂಡ್‌ ರಿಫ್ರೆಶ್‌ ಆಗುತ್ತೆ ಅಂತಾ ಅನೇಕರು ಹೇಳುತ್ತಾರೆ. ಇನ್ನು ಕೆಲವರಂತೂ ಕಾಫಿಗೆ ತುಂಬಾ ಅಡಿಕ್ಟ್‌ ಆಗಿರ್ತಾರೆ. ದಿನಕ್ಕೆ ಹತ್ತು ಬಾರಿ ಕಾಫಿ ಕುಡಿಯುವವರೂ ಇರ್ತಾರೆ. ಕಾಫಿ ಶಾಪ್‌ ಕಂಡ ತಕ್ಷಣ ಹೋಗಿ ಕುಡಿಯುವವರು ಇದ್ದಾರೆ. ಆದ್ರೀಗ ಮಾರ್ಕೆಟ್‌ಗೆ ಹೊಸ ಕಾಫಿಯೊಂದು ಕಾಲಿಟ್ಟಿದೆ. ಅದು ಬೇರೆ ಯಾವ್ದೂ ಅಲ್ಲ. ಕಾಕ್ರೋಚ್‌ ಕಾಫಿ!

ಇದನ್ನೂ ಓದಿ: ನವೆಂಬರ್ 23ಕ್ಕೆ ಸ್ಮೃತಿ ಮಂಧಾನ ಮದುವೆ – ಗೆಳೆಯ ಪಲಾಶ್ ಮುಚ್ಚಲ್ ಜೊತೆ ವಿವಾಹಕ್ಕೆ ಸಿದ್ಧತೆ

ಸಾಮಾನ್ಯವಾಗಿ ಶುಂಠಿ ಕಾಫಿ, ನಾರ್ಮಲ್‌ ಕಾಫಿಯನ್ನ ನೀವು ಟೇಸ್ಟ್‌ ಮಾಡಿರ್ತೀರಿ. ಆದ್ರೆ ಎಂದಾದ್ರೂ ಜಿರಳೆ ಕಾಫಿ ಕುಡಿದಿದ್ದೀರಾ. ಇದೀಗ ಚೀನಾ ಒಂದು ವಿಚಿತ್ರ ಪ್ರಯೋಗವನ್ನು ಮಾಡಿದೆ. ಬೀಜಿಂಗ್‌ನಲ್ಲಿರುವ ವಸ್ತುಸಂಗ್ರಹಾಲಯವೊಂದರಲ್ಲಿ ಕಾಫಿ ಪುಡಿಯನ್ನು ಜಿರಳೆ ಮೇಲೆ ಸಿಂಪಡಿಸಿ, ನಂತರ ಅದನ್ನು ಒಣಗಿಸಿ, ನಂತರ ಜಿರಳೆಯ ಹಳದಿ ಭಾಗವನ್ನು ಪುಡಿ ಮಾಡಿ ಅದ್ರಿಂದ ಕಾಫಿ ರೆಡಿ ಮಾಡಿದ್ದಾರೆ.   ಈ ಈ ಕಾಫಿಯನ್ನು ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ಸಂದರ್ಶಕರು ಸೇವಿಸಿದ್ದಾರೆ. ಈ ಕಾಫಿಯನ್ನ ಟೇಸ್ಟ್‌ ಮಾಡಿ ಇದು ಸುಟ್ಟ ಮತ್ತು ಸ್ವಲ್ಪ ಹುಳಿ ರುಚಿಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಅಂದ್ಹಾಗೆ ಜಿರಳೆ ಕಾಫಿಗೆ ಬೆಲೆ ಕೂಡ ನಿಗದಿ ಮಾಡಲಾಗಿದೆ. ಒಂದು ಕಪ್ ಕಾಕ್ರೋಚ್ ಕಾಫಿಯ ಬೆಲೆ 45 ಯುವಾನ್ (532.87 ರೂ.) ಆಗಿದ್ದು, ಕಾಫಿಗಳನ್ನು ಈ ವಸ್ತುಸಂಗ್ರಹಾಲಯದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ. ಆದರೆ ಈ ವಸ್ತುಸಂಗ್ರಹಾಲಯದ ಹೆಸರನ್ನು ಎಲ್ಲೂ ಬಹಿರಂಗಪಡಿಸಿಲ್ಲ. 2025ರ ಜೂನ್​​ನಲ್ಲಿ ಈ ಪ್ರಯೋಗವನ್ನು ಮಾಡಿ ಮಾರಾಟ ಮಾಡಲಾಯಿತು. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಒಬ್ಬ ನೆಟ್ಟಿಗ ಕೀಟಗಳಿಂದ ಮಾಡಿದ ಆಹಾರವನ್ನು ಅಥವಾ ಪಾನೀಯವನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ.

ಈ ವಸ್ತುಸಂಗ್ರಹಾಲಯವು ಇಂತಹದೇ ಬೇರೆ ಬೇರೆ ಪಾನೀಯಗಳ ಪ್ರಯೋಗವನ್ನು ಮಾಡಿದೆ. ಹೂಜಿ ಸಸ್ಯದಿಂದ ಪಾನೀಯವೊಂದನ್ನು ಕೂಡ ತಯಾರಿಸಿದ್ದಾರೆ. ಇದಕ್ಕೆ ಬೇಕಾಗುವ ಎಲ್ಲಾ ಪದಾರ್ಥಗಳನ್ನು ಸಾಂಪ್ರದಾಯಿಕ ಚೀನೀ ಔಷಧ ಗಿಡಮೂಲಿಕೆ ಅಂಗಡಿಯಿಂದ ಖರೀದಿಸಲಾಗುತ್ತದೆ. ವರದಿಯ ಪ್ರಕಾರ ಜಿರಳೆ ಪುಡಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ, ಜತೆಗೆ ಪ್ರೋಟೀನ್ ಬೇಕಾದರೆ ಇದನ್ನು ಊಟದಲ್ಲಿ ಬಳಸಬಹುದು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇರುವೆ ಪಾನೀಯವನ್ನು ಕೂಡ ಮಾಡುತ್ತಾರೆ.

Shwetha M