ಮನೆ ಖರೀದಿಸಿದ್ರೆ ವೈಫೈ ಫ್ರೀ ಅಲ್ಲ.. ವೈಫ್‌ ಫ್ರೀ ಕೊಡ್ತಿವಿ! – ವಿಚಿತ್ರ ಆಫರ್‌ ಘೋಷಿಸಿದ ರಿಯಲ್​ ಎಸ್ಟೇಟ್​ ಕಂಪನಿ!

ಮನೆ ಖರೀದಿಸಿದ್ರೆ ವೈಫೈ ಫ್ರೀ ಅಲ್ಲ.. ವೈಫ್‌ ಫ್ರೀ ಕೊಡ್ತಿವಿ! – ವಿಚಿತ್ರ ಆಫರ್‌ ಘೋಷಿಸಿದ ರಿಯಲ್​ ಎಸ್ಟೇಟ್​ ಕಂಪನಿ!

ಚೀನಾದಲ್ಲಿ ಸದ್ಯ ಅನೇಕ ಕಂಪನಿಗಳು ದಿವಾಳಿಯಾಗಿವೆ.  ಇದು ಚೀನಾದ ಆರ್ಥಿಕತೆ ಮೇಲೂ ಪರಿಣಾಮ ಬೀರಿವೆ. ಹೀಗಾಗಿ ರಿಯಲ್ ಎಸ್ಟೇಟ್ ಬಿಸಿನೆಸ್ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದೀಗ ಚೀನಾದ ‌ ರಿಯಲ್‌ ಎಸ್ಟೇಟ್ ಬಿಸಿನೆಸ್ ಕಂಪನಿಯೊಂದು ವಿಚಿತ್ರ ಆಫರ್‌ವೊಂದನ್ನು ಘೋಷಿಸಿದೆ. ಈ ಕಂಪನಿ ಮನೆ ಖರೀದಿಸುವವರಿಗೆ ವೈಫೈ- ಫ್ರೀ ಘೋಷಿಸಿಲ್ಲ. ಬದಲಾಗಿ ವೈಫನ್ನೇ ಫ್ರೀಯಾಗಿ ಕೋಡ್ತೆವೆ ಅಂತಾ ಹೇಳಿದೆ.

ಇದನ್ನೂ ಓದಿ: ಪ್ರತಿ ತಿಂಗಳು 1 ಕೋಟಿ ಮನೆಗಳಿಗೆ 300 ಯೂನಿಟ್ ವಿದ್ಯುತ್ ಉಚಿತ – ರೈತರಿಗೆ ಆಧುನಿಕ ತಂತ್ರಜ್ಞಾನದ ಸಹಾಯ

ಹೌದು ಅಚ್ಚರಿಯಾದ್ರೂ ಸತ್ಯ. ಈಗಿನಕಾಲದಲ್ಲಿ ಸಾಮಾನ್ಯವಾಗಿ ಮನೆ ಖರೀದಿ ಮಾಡಿದ್ರೆ ವೈ-ಫೈ ಫ್ರೀ ಅಂದ್ರೆ ನಂಬಬಹುದು. ಆದರೆ ಇಲ್ಲೊಂದು ಎಸ್ಟೇಟ್‌ ಕಂಪನಿ ವೈಫನ್ನೇ ಫ್ರೀಯಾಗಿ ಕೊಡುತ್ತೇವೆ ಅಂತಾ ಜಾಹಿರಾತು ನೀಡಿದೆ. ಈ ಜಾಹಿರಾತು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಜಾಹಿರಾತಿನಲ್ಲಿ ಮನೆ ಖರೀದಿಸಿ ಹೆಂಡತಿಯನ್ನು ಉಚಿತಾಗಿ ಪಡೆಯಿರಿ ಎಂದು ಬರೆಯಲಾಗಿದೆ. ಟಿಯಾಂಜಿನ್ ಮೂಲದ ಕಂಪನಿ ಈ ರೀತಿಯಾಗಿ ಜಾಹಿರಾತು ನೀಡಿದ್ದು, ಕಂಪನಿಯು ಎಲ್ಲೆಂದರಲ್ಲಿ ಜಾಹೀರಾತುಗಳನ್ನು ಹಾಕಿದೆ ಎಂದು ಹೇಳಲಾಗುತ್ತಿದೆ. ಈ ಜಾಹಿರಾತಿನ ಮೂಲಕ ಚೀನಾದ ಪ್ರಾಪರ್ಟಿ ಡೆವಲಪರ್​ಗಳು ಎಷ್ಟು ಹತಾಶರಾಗಿದ್ದಾರೆ ಅಂತಾ ನಾವು ಅರ್ಥಮಾಡಿಕೊಳ್ಳಬಹುದಾಗಿದೆ. ಹೀಗಾಗಿ ಚೀನಾದ ರಿಯಲ್‌ ಎಸ್ಟೇಟ್‌ ಕಂಪನಿಗಳು ಆಸ್ತಿಯನ್ನು ಮಾರಾಟ ಮಾಡಲು ಚಿತ್ರವಿಚಿತ್ರ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ಕೆಲವೊಂದು ಕಂಪನಿಗಳು ಮನೆ ಖರೀದಿಸಿದರೆ ಚಿನ್ನದ ಗಟ್ಟಿಯನ್ನು ನೀಡುವುದಾಗಿ ಹೇಳಿದೆ.

ಚೀನಾದ ರಿಯಲ್ ಎಸ್ಟೇಟ್ ಬಿಸಿನೆಸ್​ ನಡೆಯುತ್ತಿರುವುದು ಇಂತಹ ವಿಚಿತ್ರ ಆಫರ್‌ಗಳಿಂದಲೇ. ಉಚಿತ ಭರವಸೆಗಳನ್ನು ನೀಡಿ ಮನೆ ಅಥವಾ ಆಸ್ತಿಯನ್ನು ಖರೀದಿ ಮಾಡಿಸುವ ಬಗೆ ಇದು.  ರಿಯಲ್ ಎಸ್ಟೇಟ್ ಕಂಪನಿ ಇಂತಹ ಜಾಹೀರಾತನ್ನು ಏಕೆ ನೀಡುತ್ತಿದೆ ಎಂಬುದು ಎಲ್ಲರ ಮನಸ್ಸಿನಲ್ಲಿ ಉದ್ಭವವಾಗಿರುವ ಗೊಂದಲವಾಗಿದೆ. ರಾತ್ರೋರಾತ್ರಿ ಚೀನಾದ ರಿಯಲ್​ ಎಸ್ಟೇಟ್​ ಬಿಸಿನೆಸ್​ನಲ್ಲಿ ಬಿರುಗಾಳಿ ಎದ್ದಿದೆ.

Shwetha M