ಮನೆ ಖರೀದಿಸಿದ್ರೆ ವೈಫೈ ಫ್ರೀ ಅಲ್ಲ.. ವೈಫ್ ಫ್ರೀ ಕೊಡ್ತಿವಿ! – ವಿಚಿತ್ರ ಆಫರ್ ಘೋಷಿಸಿದ ರಿಯಲ್ ಎಸ್ಟೇಟ್ ಕಂಪನಿ!
ಚೀನಾದಲ್ಲಿ ಸದ್ಯ ಅನೇಕ ಕಂಪನಿಗಳು ದಿವಾಳಿಯಾಗಿವೆ. ಇದು ಚೀನಾದ ಆರ್ಥಿಕತೆ ಮೇಲೂ ಪರಿಣಾಮ ಬೀರಿವೆ. ಹೀಗಾಗಿ ರಿಯಲ್ ಎಸ್ಟೇಟ್ ಬಿಸಿನೆಸ್ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದೀಗ ಚೀನಾದ ರಿಯಲ್ ಎಸ್ಟೇಟ್ ಬಿಸಿನೆಸ್ ಕಂಪನಿಯೊಂದು ವಿಚಿತ್ರ ಆಫರ್‌ವೊಂದನ್ನು ಘೋಷಿಸಿದೆ. ಈ ಕಂಪನಿ ಮನೆ ಖರೀದಿಸುವವರಿಗೆ ವೈಫೈ- ಫ್ರೀ ಘೋಷಿಸಿಲ್ಲ. ಬದಲಾಗಿ ವೈಫನ್ನೇ ಫ್ರೀಯಾಗಿ ಕೋಡ್ತೆವೆ ಅಂತಾ ಹೇಳಿದೆ.
ಇದನ್ನೂ ಓದಿ: ಪ್ರತಿ ತಿಂಗಳು 1 ಕೋಟಿ ಮನೆಗಳಿಗೆ 300 ಯೂನಿಟ್ ವಿದ್ಯುತ್ ಉಚಿತ – ರೈತರಿಗೆ ಆಧುನಿಕ ತಂತ್ರಜ್ಞಾನದ ಸಹಾಯ
ಹೌದು ಅಚ್ಚರಿಯಾದ್ರೂ ಸತ್ಯ. ಈಗಿನಕಾಲದಲ್ಲಿ ಸಾಮಾನ್ಯವಾಗಿ ಮನೆ ಖರೀದಿ ಮಾಡಿದ್ರೆ ವೈ-ಫೈ ಫ್ರೀ ಅಂದ್ರೆ ನಂಬಬಹುದು. ಆದರೆ ಇಲ್ಲೊಂದು ಎಸ್ಟೇಟ್ ಕಂಪನಿ ವೈಫನ್ನೇ ಫ್ರೀಯಾಗಿ ಕೊಡುತ್ತೇವೆ ಅಂತಾ ಜಾಹಿರಾತು ನೀಡಿದೆ. ಈ ಜಾಹಿರಾತು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಜಾಹಿರಾತಿನಲ್ಲಿ ಮನೆ ಖರೀದಿಸಿ ಹೆಂಡತಿಯನ್ನು ಉಚಿತಾಗಿ ಪಡೆಯಿರಿ ಎಂದು ಬರೆಯಲಾಗಿದೆ. ಟಿಯಾಂಜಿನ್ ಮೂಲದ ಕಂಪನಿ ಈ ರೀತಿಯಾಗಿ ಜಾಹಿರಾತು ನೀಡಿದ್ದು, ಕಂಪನಿಯು ಎಲ್ಲೆಂದರಲ್ಲಿ ಜಾಹೀರಾತುಗಳನ್ನು ಹಾಕಿದೆ ಎಂದು ಹೇಳಲಾಗುತ್ತಿದೆ. ಈ ಜಾಹಿರಾತಿನ ಮೂಲಕ ಚೀನಾದ ಪ್ರಾಪರ್ಟಿ ಡೆವಲಪರ್ಗಳು ಎಷ್ಟು ಹತಾಶರಾಗಿದ್ದಾರೆ ಅಂತಾ ನಾವು ಅರ್ಥಮಾಡಿಕೊಳ್ಳಬಹುದಾಗಿದೆ. ಹೀಗಾಗಿ ಚೀನಾದ ರಿಯಲ್ ಎಸ್ಟೇಟ್ ಕಂಪನಿಗಳು ಆಸ್ತಿಯನ್ನು ಮಾರಾಟ ಮಾಡಲು ಚಿತ್ರವಿಚಿತ್ರ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ಕೆಲವೊಂದು ಕಂಪನಿಗಳು ಮನೆ ಖರೀದಿಸಿದರೆ ಚಿನ್ನದ ಗಟ್ಟಿಯನ್ನು ನೀಡುವುದಾಗಿ ಹೇಳಿದೆ.
ಚೀನಾದ ರಿಯಲ್ ಎಸ್ಟೇಟ್ ಬಿಸಿನೆಸ್ ನಡೆಯುತ್ತಿರುವುದು ಇಂತಹ ವಿಚಿತ್ರ ಆಫರ್‌ಗಳಿಂದಲೇ. ಉಚಿತ ಭರವಸೆಗಳನ್ನು ನೀಡಿ ಮನೆ ಅಥವಾ ಆಸ್ತಿಯನ್ನು ಖರೀದಿ ಮಾಡಿಸುವ ಬಗೆ ಇದು. ರಿಯಲ್ ಎಸ್ಟೇಟ್ ಕಂಪನಿ ಇಂತಹ ಜಾಹೀರಾತನ್ನು ಏಕೆ ನೀಡುತ್ತಿದೆ ಎಂಬುದು ಎಲ್ಲರ ಮನಸ್ಸಿನಲ್ಲಿ ಉದ್ಭವವಾಗಿರುವ ಗೊಂದಲವಾಗಿದೆ. ರಾತ್ರೋರಾತ್ರಿ ಚೀನಾದ ರಿಯಲ್ ಎಸ್ಟೇಟ್ ಬಿಸಿನೆಸ್ನಲ್ಲಿ ಬಿರುಗಾಳಿ ಎದ್ದಿದೆ.