ಚೀನಾದಲ್ಲಿ ಹೆಚ್ಚಾದ ಕೊರೋನಾ ಪಾಸಿಟಿವ್‌ ಕೇಸ್‌! – ಮೇ ತಿಂಗಳಲ್ಲಿ ಶೇ.40 ರಷ್ಟು ಸೋಂಕು ಏರಿಕೆ

ಚೀನಾದಲ್ಲಿ ಹೆಚ್ಚಾದ ಕೊರೋನಾ ಪಾಸಿಟಿವ್‌ ಕೇಸ್‌! – ಮೇ ತಿಂಗಳಲ್ಲಿ ಶೇ.40 ರಷ್ಟು ಸೋಂಕು ಏರಿಕೆ

ಬೀಜಿಂಗ್: ಕೊರೋನಾ ವೈರಸ್ನ ತವರು ಚೀನಾದಲ್ಲಿ ಪಾಸಿಟಿವ್‌ ಪ್ರಕರಣ ಮತ್ತೆ ಹೆಚ್ಚಾಗಿದೆ. ಕಳೆದ ಎರಡು ತಿಂಗಳಿನಿಂದ ಕೋವಿಡ್‌ ಪಾಸಿಟಿವ್‌ ಪ್ರಕರಣದಲ್ಲಿ ದಿಢೀರ್‌ ಏರಿಕೆಯಾಗಿದೆ. ಮೇ ತಿಂಗಳಿನಲ್ಲಿ ಶೇ. 40 ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿದೆ.

ಇದನ್ನೂ ಓದಿ: 50ನೇ ವಯಸ್ಸಿನಲ್ಲಿ ಮತ್ತೆ ತಂದೆಯಾದ ಪ್ರಭುದೇವ – ಎರಡನೇ ಪತ್ನಿ ಹಿಮಾನಿಗೆ ಹೆಣ್ಣು ಮಗು

ಚೈನೀಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಬಿಡುಗಡೆ ಮಾಡಿರುವ ಪ್ರಕಾರ, ಏಪ್ರಿಲ್‌ನಿಂದ ಚೀನಾ ದೇಶಾದ್ಯಂತದ ಆಸ್ಪತ್ರೆಗಳಲ್ಲಿ ಕೋವಿಡ್ -19 ರೋಗನಿರ್ಣಯ ಮಾಡಿದ ಜನರ ಸಂಖ್ಯೆಯಲ್ಲಿ ಐದು ಪಟ್ಟು ಹೆಚ್ಚು ಏರಿಕೆ ಕಂಡಿದೆ. ಇದು ಮೇ ತಿಂಗಳ ಅಂತ್ಯದಲ್ಲಿ ಪರೀಕ್ಷಿಸಲ್ಪಟ್ಟವರ (ಕೋವಿಡ್ ಪರೀಕ್ಷೆ) ಪೈಕಿ ಶೇಕಡಾ 40 ಕ್ಕಿಂತ ಹೆಚ್ಚು ಜನರು ಸೋಂಕಿಗೆ ತುತ್ತಾಗಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ.

ಸರ್ಕಾರದ ಅಂಕಿ‌ ಅಂಶಗಳ ಪ್ರಕಾರ, ಚೀನಾವು ಮೇ ತಿಂಗಳಲ್ಲಿ ಮತ್ತೊಂದು ಕೋವಿಡ್ -19 ಅಲೆಗೆ ತುತ್ತಾಗಿದ್ದು, ಇದು 2022 ರ ಕೊನೆಯಲ್ಲಿ ಸಾಂಕ್ರಾಮಿಕ ಸಮಯದಲ್ಲಿ ಕಂಡುಬಂದ ಗರಿಷ್ಠ ಪ್ರಮಾಣಕ್ಕೆ ಹೋಲಿಸಿದರೆ ಹೆಚ್ಚು ಪಾಸಿಟಿವಿಟಿ ಪ್ರಮಾಣವನ್ನು ಹೊಂದಿತ್ತು ಎಂದು ಹೇಳಲಾಗಿದೆ. ಕೋವಿಡ್ -19 ಸೋಂಕಿಗೆ ಒಳಗಾದವರಲ್ಲಿ ಚೀನಾ ಮೇ ತಿಂಗಳಲ್ಲಿ 164 ಸಾವುಗಳನ್ನು ವರದಿ ಮಾಡಿದೆ.

suddiyaana