ಮಕ್ಕಳಿಂದ ತುಂಬಿದ ಬೀಜಿಂಗ್‌ನ ಆಸ್ಪತ್ರೆಗಳು! – ನಿತ್ಯ 7 ಸಾವಿರಕ್ಕೂ ಅಧಿಕ ಮಕ್ಕಳು ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲು

ಮಕ್ಕಳಿಂದ ತುಂಬಿದ ಬೀಜಿಂಗ್‌ನ ಆಸ್ಪತ್ರೆಗಳು! – ನಿತ್ಯ 7 ಸಾವಿರಕ್ಕೂ ಅಧಿಕ ಮಕ್ಕಳು ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲು

ಕೊರೊನಾ ತವರು ಚೀನಾದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಪತ್ತೆಯಾಗಿದೆ. ಡ್ರ್ಯಾಗನ್‌ ರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನ್ಯುಮೋನಿಯಾ ಪ್ರಕರಣಗಳು ವರದಿಯಾಗುತ್ತಿದ್ದು, ಪ್ರತಿನಿತ್ಯ ಬರೋಬ್ಬರಿ 7000ಕ್ಕೂ ಅಧಿಕ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ವರದಿಯಾಗಿದೆ.

ಬೀಜಿಂಗ್ ಸೇರಿದಂತೆ ದೇಶದಾದ್ಯಂತದ ನಗರಗಳಲ್ಲಿ ನ್ಯುಮೋನಿಯಾ ಪ್ರಕರಣಗಳು ಉಲ್ಬಣಗೊಳ್ಳುತ್ತಿದೆ. ಬೀಜಿಂಗ್‌ನಲ್ಲಿನ ಆಸ್ಪತ್ರೆಗಳು ಮಕ್ಕಳಿಂದ ತುಂಬಿವೆ. ಹೆಚ್ಚಿನ ಜ್ವರ, ಶ್ವಾಸಕೋಶದ ಉರಿಯೂತ ಮತ್ತು ಶೀತದ ಲಕ್ಷಣಗಳೊಂದಿಗೆ ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಬೀಜಿಂಗ್ ಮಕ್ಕಳ ಆಸ್ಪತ್ರೆಗೆ ಪ್ರತಿದಿನ ಕನಿಷ್ಠ 7,000 ಕ್ಕೂ ಅಧಿಕ ರೋಗಿಗಳು ದಾಖಲಾಗುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಹಸುಗೂಸು ಮಾರಾಟ ದಂಧೆ‌ ಪ್ರಕರಣ – ಮಹಿಳಾ ಏಜೆಂಟ್‌ ಹಾಗೂ ನಕಲಿ ವೈದ್ಯ ಅರೆಸ್ಟ್!

ಮಕ್ಕಳಲ್ಲಿ ಮೈಕೋಪ್ಲಾಸ್ಮಾದಿಂದ ಉಂಟಾಗುವ ನ್ಯುಮೋನಿಯಾದ ಉಲ್ಬಣ ತೀವ್ರ ಹೆಚ್ಚಾಗಿದೆ. ವೈದ್ಯರ ಭೇಟಿ ಮಾಡಲು ಮಕ್ಕಳು ಗಂಟೆಗಟ್ಟಲೆ ಕಾಯಬೇಕಾಗಿದೆ. ಆಸ್ಪತ್ರೆಯಲ್ಲಿ ಒಂದು ಕೈಗೆ ಡ್ರಿಪ್ಸ್‌ ಹಾಕ್ಕೊಂಡು ಹೋಂ ವರ್ಕ್‌ ಮುಂತಾದ ಕೆಲಸಗಳನ್ನು ಮಕ್ಕಳು ಅಲ್ಲೇ ಮಾಡುತ್ತಿರುವ ವಿಡಿಯೋಗಳು ವೈರಲ್‌ ಆಗ್ತಿದೆ.  ಇದೆಲ್ಲದರ ಮಧ್ಯೆ ಚೀನಾದಲ್ಲಿ ಮಾಸ್ಕ್‌ ಕಡ್ಡಾಯ ನಿಯಮವನ್ನು ಸಹ ಮರಳಿ ತರಲಾಗಿದೆ. ಜನರು ಆಸ್ಪತ್ರೆಗಳಲ್ಲಿ ಮಾಸ್ಕ್‌ಗಳನ್ನು ಧರಿಸಿ ಓಡಾಡುತ್ತಿದ್ದಾರೆ. ಮಾತ್ರವಲ್ಲ ಸಾಮಾಜಿಕ ಅಂತರ ಪಾಲನೆ ಮಾಡುವುದು ಸಹ ಕಡ್ಡಾಯವಾಗಿದೆ.

ಮಕ್ಕಳಲ್ಲಿ ವರದಿಯಾದ ಉಸಿರಾಟದ ಕಾಯಿಲೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆ ಚೀನಾಕ್ಕೆ ಅಧಿಕೃತ ವಿನಂತಿಯನ್ನು ಮಾಡಿದೆ. ಇದಕ್ಕೂ ಮೊದಲು, ಚೀನಾ ಒದಗಿಸಿದ ಡೇಟಾದಲ್ಲಿ ಯಾವುದೇ ಅಸಾಮಾನ್ಯ ರೋಗಕಾರಕಗಳು ಪತ್ತೆಯಾಗಿಲ್ಲ ಎಂದು ಪ್ರಧಾನ ಆರೋಗ್ಯ ಸಂಸ್ಥೆ ಹೇಳಿದೆ.

ಕೋವಿಡ್ ನಿರ್ಬಂಧಗಳನ್ನು ತೆಗೆದ ನಂತರ ಚೀನಾದ ಮೇನ್‌ಲ್ಯಾಂಡ್‌ನಲ್ಲಿ ಮೊದಲ ಚಳಿಗಾಲದಲ್ಲಿ ಇತರ ಉಸಿರಾಟದ ಕಾಯಿಲೆಗಳು ವಿಶಾಲ ಜನಸಂಖ್ಯೆಯನ್ನು ತೀವ್ರವಾಗಿ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಸರ್ಕಾರ ಎಚ್ಚರಿಸಿದೆ. ಫ್ಲೂ, ಅಡೆನೊವೈರಸ್ ಮತ್ತು ಉಸಿರಾಟದ ಸಿನ್ಸಿಟಿಯಲ್ ವೈರಸ್, ಮೈಕೋಪ್ಲಾಸ್ಮಾವನ್ನು ಮೀರಿಸಿದೆ. ಇದು ನಗರದ ಉನ್ನತ ಮಕ್ಕಳ ವೈದ್ಯಕೀಯ ಕೇಂದ್ರಗಳಲ್ಲಿ ರೋಗಿಗಳಲ್ಲಿ ಹೆಚ್ಚಾಗಿ ಪತ್ತೆಯಾದ ರೋಗಕಾರಕಗಳಾಗಿವೆ ಎಂದು ಬೀಜಿಂಗ್‌ನ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಮಕ್ಕಳಿಗೆ ಮೈಕೋಪ್ಲಾಸ್ಮಾ ಅಪಾಯ ಕಡಿಮೆಯಾದರೂ, ಹಲವಾರು ಉಸಿರಾಟದ ರೋಗಕಾರಕಗಳ ಹರಡುವಿಕೆಯು ಈಗ ಮತ್ತು ಮುಂದಿನ ವಸಂತಕಾಲದ ನಡುವೆ ದೊಡ್ಡ ಸಾಂಕ್ರಾಮಿಕವಾಗಿ ಹೊರಹೊಮ್ಮಬಹುದು ಎಂದೂ ಹೇಳಿದೆ.

Shwetha M