ಚೀನಾದಿಂದ ಮತ್ತೊಂದು ಕುತಂತ್ರ – ಅರುಣಾಚಲದಲ್ಲಿ ಊರುಗಳ ಹೆಸರು ಬದಲಿಸಿದ್ದೇಕೆ?

ಚೀನಾದಿಂದ ಮತ್ತೊಂದು ಕುತಂತ್ರ – ಅರುಣಾಚಲದಲ್ಲಿ ಊರುಗಳ ಹೆಸರು ಬದಲಿಸಿದ್ದೇಕೆ?

ಸ್ವಲ್ಪ ಕಾಲ ಸೈಲೆಂಟ್ ಆಗಿ ಕುಳಿತಿದ್ದ ಚೀನಾ, ಮತ್ತೆ ತನ್ನ ನರಿಬುದ್ದಿ ತೋರಿಸಲು ಶುರುಮಾಡಿದೆ. ಅರುಣಾಚಲ ಪ್ರದೇಶ ತನಗೆ ಸೇರಿದ್ದು ಅನ್ನೋದನ್ನ ಮತ್ತೊಮ್ಮೆ ಪ್ರತಿಪಾದಿಸೋ ನಿಟ್ಟಿನಲ್ಲಿ ಸುಮಾರು 11 ಊರುಗಳ  ಹೆಸರನ್ನು ಬದಲಾಯಿಸಿ ಚೀನೀ ಭಾಷೆಯಲ್ಲಿ ವಿವರಗಳನ್ನು ನೀಡಿದೆ.

ಇದನ್ನೂ ಓದಿ: ಲವ್ ಮಾಡಲು 1 ವಾರ ರಜೆ ನೀಡಿದ 9 ಕಾಲೇಜುಗಳು! –  ಕಾರಣ ಏನು ಗೊತ್ತಾ?

ಅರುಣಾಚಲ ಪ್ರದೇಶ ತನ್ನದೆಂದು ಪ್ರತಿಪಾದಿಸುತ್ತಾ ಬಂದಿರೋ ಚೀನಾ ಇದೀಗ ಮೂರನೇ ಬಾರಿಗೆ ಚೀನೀ ಭಾಷೆಯಲ್ಲಿ ಇರುವ ಹೆಸರುಗಳ ವಿವರಗಳನ್ನು ನೀಡಿದೆ. ಅದರಲ್ಲಿ 11 ಊರುಗಳ ಹೆಸರುಗಳನ್ನು ಬದಲಾಯಿಸಿದ್ದು, ಅರಣಾಚಲ ಪ್ರದೇಶವನ್ನು ದಕ್ಷಿಣ ಭಾಗ – ಝಂಗಾನ್ ಅಂತಾ ಡ್ರ್ಯಾಗನ್ ಸರ್ಕಾರ ಹೇಳಿಕೊಳ್ಳುತ್ತಿದೆ.

11 ಸ್ಥಳಗಳ ಅಧಿಕೃತ ಹೆಸರುಗಳನ್ನು ಸಚಿವಾಲಯ ಬಿಡುಗಡೆ ಮಾಡಿದ್ದು, ಇದು ಎರಡು ಭೂ ಪ್ರದೇಶಗಳು, ಎರಡು ವಸತಿ ಪ್ರದೇಶಗಳು, ಐದು ಪರ್ವತ ಶಿಖರಗಳು ಮತ್ತು ಎರಡು ನದಿಗಳನ್ನು ಒಳಗೊಂಡಂತೆ ನಿಖರವಾದ ನಿರ್ದೇಶಾಂಕಗಳನ್ನು ನೀಡಿದೆ. ಇದು ಸ್ಥಳಗಳ ಹೆಸರುಗಳು ಮತ್ತು ಅವುಗಳ ಅಧೀನದ ಆಡಳಿತ ಜಿಲ್ಲೆಗಳ ವರ್ಗವನ್ನು ಸಹ ಪಟ್ಟಿ ಮಾಡಿದೆ.

ಚೀನಾ ಏಪ್ರಿಲ್ 2017 ಮತ್ತು ಡಿಸೆಂಬರ್ 2021 ರಲ್ಲಿಯೂ ಅರುಣಾಚಲ ಪ್ರದೇಶದ ಸ್ಥಳಗಳನ್ನು ಮರುನಾಮಕರಣ ಮಾಡುವ ಏಕಪಕ್ಷೀಯ ಘೋಷಣೆಗಳನ್ನು ಮಾಡಿತ್ತು. ಇದಕ್ಕೆ ಭಾರತ, ಅರುಣಾಚಲ ಪ್ರದೇಶವು ಭಾರತದಿಂದ ಬೇರ್ಪಡಿಸಲಾಗದ ಭಾಗವಾಗಿದೆ. ತನ್ನದೆಂದು ಹೇಳಿಕೊಳ್ಳಲು ಚೀನಾವು ಯಾವುದೇ ಪಾಲನ್ನು ಹೊಂದಿಲ್ಲ ಅಂತಾ ಸಮರ್ಥಿಸಿಕೊಂಡಿತ್ತು.

suddiyaana