ಸೆಲಾ ಸುರಂಗ ಮಾರ್ಗದ ಮೇಲೂ ಚೀನಾ ಕಣ್ಣು! – ನಮ್ಮ ಜಾಗದಲ್ಲಿ ಕಟ್ಟಿದ್ದು ಎಂದು ಕಿರಿಕ್ ಮಾಡಿದ ಡ್ರ್ಯಾಗನ್‌ ರಾಷ್ಟ್ರ!

ಸೆಲಾ ಸುರಂಗ ಮಾರ್ಗದ ಮೇಲೂ ಚೀನಾ ಕಣ್ಣು! – ನಮ್ಮ ಜಾಗದಲ್ಲಿ ಕಟ್ಟಿದ್ದು ಎಂದು ಕಿರಿಕ್ ಮಾಡಿದ ಡ್ರ್ಯಾಗನ್‌ ರಾಷ್ಟ್ರ!

ಭಾರತದ ವಿರುದ್ಧ ಚೀನಾ ದೇಶ ಒಂದಲ್ಲ ಒಂದು ಕುಂತ್ರಗಳನ್ನು ರೂಪಿಸುತ್ತಲೇ ಇರುತ್ತದೆ. ಸದಾ ನರಿ ಬುದ್ದಿ ತೋರಿಸುವ ಡ್ರ್ಯಾಗನ್‌ ರಾಷ್ಟ್ರ ಈಗ ಅರುಣಾಚಲ ಪ್ರದೇಶದಲ್ಲಿ ಸೆಲಾ ಪಾಸ್‌ ಸುರಂಗ ಮಾರ್ಗ ನಿರ್ಮಾಣ ಮಾಡಿದ ಭಾರತದ ಕ್ರಮಕ್ಕೆ ತಗಾದೆ ತೆಗೆದಿದೆ. ತೇಜ್‌ಪುರ -ತವಾಂಗ್‌ ಸಂಪರ್ಕಿಸುವ ಸೆಲಾಪಾಸ್‌ ಮಾರ್ಗ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಚೀನಾ ಟೀಕಿಸಿದೆ.

ಇದನ್ನೂ ಓದಿ: ಮನೆ ಕಾಯುವವರಿಗೆ ಟಿಕೆಟ್ ಕೊಡಬೇಕೇ ಹೊರತು ನಾವು ಅವರ ಮನೆ ಕಾಯಬರಬಾರದು – ಪ್ರತಾಪ್ ಸಿಂಹ ಹೀಗೆ ಹೇಳಿದ್ದು ಯಾರಿಗೆ?

ಹೌದು, ಇತ್ತೀಚೆಗೆ ತೇಜ್‌ಪುರ -ತವಾಂಗ್‌ ಸಂಪರ್ಕಿಸುವ ಸೆಲಾಪಾಸ್‌ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದರು. ಪ್ರಧಾನಿ ಮೋದಿ ಅವರ ನಡೆಯನ್ನು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್‌ ವೆನ್‌ಬಿನ್‌ ಟೀಕಿಸಿದ್ದಾರೆ. ”ಅರುಣಾಚಲ ಪ್ರದೇಶ ದಕ್ಷಿಣ ಟಿಬೆಟ್‌ನ ಒಂದು ಭಾಗ. ಅದು ಎಂದೆಂದಿಗೂ ಚೀನಾದ ಅವಿಭಾಜ್ಯ ಅಂಗ. ವಿವಾದಿತ ಗಡಿ ಪ್ರದೇಶದಲ್ಲಿ ಭಾರತ ಯಾವುದೇ ಅಭಿವೃದ್ಧಿ ಯೋಜನೆ ಕೈಗೊಳ್ಳಲು ಅಧಿಕಾರ ಹೊಂದಿಲ್ಲ,” ಎಂದು ಹೇಳಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಭಾರತ ಕೈಗೊಳ್ಳುವ ಯೋಜನೆಗಳು ಅಕ್ರಮವಾಗಿರುತ್ತವೆ, ಇಂಥ ಯೋಜನೆಗಳಿಗೆ ಚೀನಾದ ವಿರೋಧ ಇದ್ದೇ ಇದೆ. ಪ್ರಧಾನಿ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ಕ್ರಮಕ್ಕೆ ರಾಜತಾಂತ್ರಿಕ ಪ್ರತಿಭಟನೆ ವ್ಯಕ್ತಪಡಿಸಿರುವ ಚೀನಾ, ಜಂಗ್ನಾನ್‌ ಪ್ರದೇಶದಲ್ಲಿ ಏಕಪಕ್ಷೀಯವಾಗಿ ಅಭಿವೃದ್ಧಿ ಕೈಗೊಳ್ಳಲು ಭಾರತಕ್ಕೆ ಯಾವುದೇ ಹಕ್ಕು ಇಲ್ಲ ಎಂದು ಹೇಳಿದ್ದಾರೆ.

Shwetha M