ನಕಲಿ ಫೇಸ್ ಬುಕ್ ಅಕೌಂಟ್ ಕ್ರಿಯೇಟ್ ಮಾಡಿ ಚೀನಾ ಕಳ್ಳಾಟ – ಅಮೆರಿಕ, ಭಾರತದ ಚುನಾವಣೆಗಳ ಮೇಲೆ ಪ್ರಭಾವಕ್ಕೆ ಯತ್ನ

ನಕಲಿ ಫೇಸ್ ಬುಕ್ ಅಕೌಂಟ್ ಕ್ರಿಯೇಟ್ ಮಾಡಿ ಚೀನಾ ಕಳ್ಳಾಟ – ಅಮೆರಿಕ, ಭಾರತದ ಚುನಾವಣೆಗಳ ಮೇಲೆ ಪ್ರಭಾವಕ್ಕೆ ಯತ್ನ

ಈಗೇನಿದ್ರೂ ಸ್ಮಾರ್ಟ್ ಫೋನ್, ಸೋಶಿಯಲ್ ಮೀಡಿಯಾ ಜಮಾನಾ. ಟಿವಿ ಮತ್ತು ಪತ್ರಿಕಾ ಮಾಧ್ಯಮಗಳಿಗಿಂತ ಸೋಶಿಯಲ್ ಮೀಡಿಯಾದಲ್ಲೇ ಬಹುಬೇಗ ಸುದ್ದಿಗಳು ಸ್ಪ್ರೆಡ್ ಆಗಿ ಬಿಡುತ್ತವೆ. ಆದ್ರೆ ಸುದ್ದಿಯಾಗಲೀ ಅಥವಾ ಸುದ್ದಿ ಮಾಡುವವರ ಬಗ್ಗೆಯಾಗಲಿ ಗೊತ್ತೇ ಆಗಲ್ಲ. ಯಾವ ಖಾತೆ ಅಸಲಿ, ಯಾವ ಖಾತೆ ನಕಲಿ, ಯಾವ ಸುದ್ದಿ ಸತ್ಯ, ಯಾವ ಸುದ್ದಿ ಸುಳ್ಳು, ಸುದ್ದಿ ಮೂಲ ಯಾವುದು ಅನ್ನೋದು ಕೆಲವೊಮ್ಮೆ ಹೊರ ಜಗತ್ತಿಗೆ ತಿಳಿಯಲ್ಲ. ಇದೇ ಕೆಲವರ ಪಾಲಿಗೆ ಅಡ್ವಾಂಟೇಜ್ ಆಗ್ತಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಒಂದು ದೇಶದ ಸರ್ಕಾರ, ರಾಜಕೀಯ ಪರಿಸ್ಥಿತಿ, ರಾಜಕಾರಣಿಗಳ ವ್ಯಕ್ತಿತ್ವವನ್ನೇ ಬದಲಿಸುವಷ್ಟು ತಾಕತ್ತಿದೆ.

ಇದನ್ನೂ ಓದಿ : ಚೀನಾ ಮಕ್ಕಳಲ್ಲಿ ಕಾಣಿಸಿಕೊಂಡ ನ್ಯೂಮೋನಿಯಾ ಸೋಂಕು ಭಾರತದಲ್ಲೂ ಪತ್ತೆ!

ಭಾರತದ ಜೊತೆ ಪದೇಪದೆ ಕ್ಯಾತೆ ತೆಗೆಯುವ ಚೀನಾ ಕೇವಲ ಭಾರತದ ರಾಜಕೀಯವನ್ನು ಮಾತ್ರ ಟಾರ್ಗೆಟ್ ಮಾಡಿರಲಿಲ್ಲ. ತನ್ನ ಪರಮವೈರಿ ರಾಷ್ಟ್ರವಾಗಿರುವ ಅಮೆರಿಕದಲ್ಲೂ ಕೂಡ ಕುತಂತ್ರ ಕೆಲಸ ಮಾಡುತ್ತಿತ್ತು. ವಿದೇಶಗಳ ಟೆಕ್ ಕಂಪೆನಿಗಳಿಗೆ ತನ್ನ ನೆಲದಲ್ಲಿ ನಿರ್ಬಂಧ ವಿಧಿಸಿರುವ ಚೀನಾ ಕೊನೆಗೆ ಅದೇ ಕಂಪನಿಗಳ ಌಪ್​ಗಳನ್ನ ಬಳಸಿ ವಿದೇಶಿ ನೆಲದಲ್ಲಿ ಅಶಾಂತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿದೆ. ಇದಕ್ಕಾಗಿ ವ್ಯವಸ್ಥಿತ ತಂಡವೊಂದು ಌಕ್ಟಿವ್ ಆಗಿದ್ದು ಬಹುದೊಡ್ಡ ಜಾಲವೇ ಹರಡಿಕೊಂಡಿರುವುದು ಗೊತ್ತಾಗಿದೆ. ಚೀನಾ ಮೂಲದ ವ್ಯಕ್ತಿಗಳ ಕರಾಮತ್ತು ಎಳೆ ಎಳೆಯಾಗಿ ಬಿಚ್ಚಿಟ್ಟಿರುವ ಮೆಟಾ ಸಂಸ್ಥೆ ಸಾವಿರಾರು ಫೇಕ್ ಖಾತೆಗಳನ್ನು ಡಿಲೀಟ್ ಮಾಡಿದೆ.

ಚೀನಾದ ಕುತಂತ್ರ ಬುದ್ಧಿ ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಸುಮಾರು 4,700ಕ್ಕೂ ಹೆಚ್ಚು ನಕಲಿ ಖಾತೆಗಳ ಮೂಲಕ ಅಮೆರಿಕದ ರಾಜಕೀಯವನ್ನು ಟಾರ್ಗೆಟ್ ಮಾಡಲಾಗಿತ್ತು. ಗರ್ಭಪಾತ, ಅಧ್ಯಕ್ಷೀಯ ಅಭ್ಯರ್ಥಿಗಳು ಮತ್ತು ಅಮೆರಿಕ-ಚೀನಾ ನಡುವಿನ ಸಂಬಂಧದ ಬಗ್ಗೆ ಪೋಸ್ಟ್ ಮಾಡಲಾಗುತ್ತಿತ್ತು. ಇಂತಹ ವಿಷಯಗಳ ಕುರಿತು ನಿರಂತರವಾಗಿ ಚೀನಿ ಮೂಲದ ವ್ಯಕ್ತಿಗಳು ನಕಲಿ ಖಾತೆಗಳ ಮೂಲಕ ಪೋಸ್ಟ್ ಗಳನ್ನ ಮಾಡ್ತಿದ್ರು. ಪ್ರೊಫೈಲ್ ಗಳಲ್ಲಿ ಕೆಲವರು ಅಮೆರಿಕನ್ನರಂತೆ ಪೋಸ್ ನೀಡಿದ್ದು, ಹಫ್ಪೋಸ್ಟ್, ಬ್ರೀಟ್ಬಾರ್ಟ್, ವಾಲ್ ಸ್ಟ್ರೀಟ್ ಜರ್ನಲ್ ಮತ್ತು ಫಾಕ್ಸ್ ನ್ಯೂಸ್ ನಂತಹ ಮಾಧ್ಯಮಗಳ ಲೇಖನಗಳಿಗೆ ತಮ್ಮ ಲಿಂಕ್ ಗಳನ್ನು ಹಂಚಿಕೊಂಡಿರುವುದು ಬೆಳಕಿಗೆ ಬಂದಿತ್ತು. ಸದ್ಯ ಮೆಟಾ ಸಂಸ್ಥೆ ಇಂಥ ನಕಲಿ ಚೀನಾ ಮೂಲದ ಫೇಸ್ಬುಕ್ ಅಕೌಂಟ್​ಗಳನ್ನು ಈ ವರ್ಷದ ಆರಂಭದಲ್ಲೇ ನಾಶ ಮಾಡಿದ್ದಾಗಿ ಹೇಳಿದೆ. ಚೀನೀಯರು ಭಾರತ ಮಾತ್ರವಲ್ಲ ಅಮೆರಿಕವನ್ನೂ ಗುರಿಯಾಗಿಸಿ ಪೋಸ್ಟ್ ಮಾಡಲು ನಕಲಿ ಖಾತೆಗಳನ್ನು ಸೃಷ್ಟಿಸಿದ್ದರು. ಅಮೆರಿಕದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಗರ್ಭಪಾತ, ಅಧ್ಯಕ್ಷೀಯ ಅಭ್ಯರ್ಥಿಗಳು, ಅಮೆರಿಕ ಚೀನಾ ಸಂಬಂಧ ಇತ್ಯಾದಿ ವಿಚಾರಗಳ ಬಗ್ಗೆ ಫೇಸ್ಬುಕ್​ನಲ್ಲಿ ಪೋಸ್ಟ್ ಹಾಕಲಾಗುತ್ತಿತ್ತು. ಇಂಥ 4,700 ನಕಲಿ ಫೇಸ್ಬುಕ್ ಖಾತೆಗಳನ್ನು ತಾನು ಗುರುತಿಸಿದ್ದಾಗಿ ಮೆಟಾ ಸಂಸ್ಥೆ ತಿಳಿಸಿದೆ.

2024ರಲ್ಲಿ ಭಾರತದಲ್ಲಿ ನಡೆಯುವ ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಇಡೀ ಜಗತ್ತೇ ಕಣ್ಣಿಟ್ಟಿದೆ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಆಗಿದ್ದ ನರೇಂದ್ರ ಮೋದಿ 2019ರಲ್ಲಿ 2ನೇ ಬಾರಿಗೆ ಪ್ರಧಾನಿ ಆಗಿದ್ರು. ಇದೀಗ 2024ರ ಚುನಾವಣೆಯಲ್ಲಿ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಮೋದಿಯವರ ಜನಪ್ರಿಯತೆ ಕುಗ್ಗಿಸಲು ಕೇಂದ್ರ ಸರ್ಜಾರದ ವಿರೋಧವಾಗಿ ಪೋಸ್ಟ್ ಗಳನ್ನ ಶೇರ್ ಮಾಡುತ್ತಿದ್ದರು. ಅಲ್ಲದೆ 2024ರಲ್ಲಿ ವಿಶ್ವದ ದೊಡ್ಡಣನಿಗೆ ಅಧ್ಯಕ್ಷ ಪಟ್ಟ ಕಟ್ಟಲಾಗುತ್ತದೆ. ಅಮೆರಿಕದಲ್ಲಿ ಭಾರತೀಯ ಮೂಲದವರ ಪ್ರಾಬಲ್ಯ ಇದ್ದು, ಮುಂದಿನ ಅಧ್ಯಕ್ಷಿಯ ಚುನಾವಣೆಗೆ ಭಾರತ ಮೂಲದ ವ್ಯಕ್ತಿಗಳ ಹೆಸರು ಮುಂಚೂಣಿಯಲ್ಲಿದೆ.

 

Shantha Kumari