ಚೀನಾದಲ್ಲಿ ಒಂದೇ ದಿನ 3.7 ಕೋಟಿ ಪಾಸಿಟಿವ್ ಕೇಸ್

ಚೀನಾದಲ್ಲಿ ಒಂದೇ ದಿನ 3.7 ಕೋಟಿ ಪಾಸಿಟಿವ್ ಕೇಸ್

ಬೀಜಿಂಗ್‌: ಕೊರೊನಾ ತವರು ಚೀನಾದಲ್ಲಿ ಒಂದೇ ದಿನ 3.7 ಕೋಟಿ ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ. ಡಿಸೆಂಬರ್‌ನ ಮೊದಲ 20 ದಿನಗಳಲ್ಲಿ 24.8 ಕೋಟಿ ಜನರು ಅಥವಾ ಜನಸಂಖ್ಯೆಯ ಸುಮಾರು 18% ರಷ್ಟು ಜನರು ವೈರಸ್‌ಗೆ ತುತ್ತಾಗಿರಬಹುದು ಎಂದು ಚೀನಾದ ಸರ್ಕಾರವೇ ಅಂದಾಜಿಸಿದೆ.

ಡಿಸೆಂಬರ್‌ನ ಮೊದಲ 20 ದಿನಗಳಲ್ಲಿ ಚೀನಾದಲ್ಲಿ ಜನಸಂಖ್ಯೆಯ ಶೇ18 ಜನರು ವೈರಸ್‌ಗೆ ತುತ್ತಾಗಿರುವುದರಿಂದ ಅತೀ ಹೆಚ್ಚು ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದ ದೇಶವಾಗಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಆಂತರಿಕ ಸಭೆ ನಡೆಸಿದ್ದು, ಈ ವೇಳೆ ಅಧಿಕಾರಿಗಳು ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ಸೋಂಕಿನ ಪ್ರಮಾಣವು ಹಿಂದಿನ ದೈನಂದಿನ ದಾಖಲೆಯ ಸುಮಾರು 4 ಮಿಲಿಯನ್‌ಗಿಂತ ಹೆಚ್ಚಿರಬಹುದು ತಿಳಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊರೊನಾ ಭೀತಿ-ಖಾಸಗಿ ಶಾಲೆಗಳಿಗೆ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ

ಬೀಜಿಂಗ್‌ನ ಕೋವಿಡ್ ಝೀರೋ ನಿರ್ಬಂಧಗಳನ್ನು ತ್ವರಿತವಾಗಿ ಕಿತ್ತುಹಾಕಿದ ನಂತರ ಈ ರೀತಿ ಪ್ರಕರಣ ಹೆಚ್ಚಾಗಿದೆ. ಇದು ಹೆಚ್ಚು ಸಾಂಕ್ರಾಮಿಕ ಒಮಿಕ್ರಾನ್ ರೂಪಾಂತರಗಳ ಹರಡುವಿಕೆಗೆ ಕಾರಣವಾಗಿದೆ. ಚೀನಾದ ನೈಋತ್ಯ ಮತ್ತು ರಾಜಧಾನಿ ಬೀಜಿಂಗ್‌ನಲ್ಲಿರುವ ಸಿಚುವಾನ್ ಪ್ರಾಂತ್ಯದ ಅರ್ಧಕ್ಕಿಂತ ಹೆಚ್ಚು ನಿವಾಸಿಗಳು ಸೋಂಕಿಗೆ ಒಳಗಾಗಿದ್ದಾರೆ. ಆದರೆ ಚೀನಾದಲ್ಲಿಎಷ್ಟು ಪ್ರಕರಣಗಳಿವೆ ಎಂಬುದರ ಅಂದಾಜು ಲೆಕ್ಕ ಹಾಕುವ ಪ್ರಕ್ರಿಯೆ ಯಾವುದು ಎಂಬುದು ಕೂಡಾ ಸ್ಪಷ್ಟವಾಗಿಲ್ಲ.

suddiyaana