ನಿಮಗೆ ಮಾತ್ರ ಟೆಕ್ನಾಲಜಿ ಬಗ್ಗೆ ಗೊತ್ತಿರೋದಾ? – ಸ್ಟೈಲ್ ಆಗಿ ಡ್ರೋನ್ ಹಾರಿಸಿದ ಚಿಂಪಾಂಜಿಗಳು!

ನಿಮಗೆ ಮಾತ್ರ ಟೆಕ್ನಾಲಜಿ ಬಗ್ಗೆ ಗೊತ್ತಿರೋದಾ? – ಸ್ಟೈಲ್ ಆಗಿ ಡ್ರೋನ್ ಹಾರಿಸಿದ ಚಿಂಪಾಂಜಿಗಳು!

ಪ್ರಾಣಿಗಳು ತುಂಬಾ ಮುದ್ದಾಗಿರುತ್ತವೆ. ಅವುಗಳು ಮುದ್ದು ಮುದ್ದಾಗಿ ಏನು ಮಾಡಿದ್ರೂ ಚಂದವೇ. ಕೆಲವೊಮ್ಮೆ ಅವು ಮಾಡುವ ಕೆಲಸಗಳನ್ನು ನಂಬಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಪ್ರಾಣಿಗಳ ವಿಚಿತ್ರ ಕ್ರಿಯೆಗಳು ಕೆಲವೊಮ್ಮೆ ಮನುಷ್ಯರನ್ನೇ ಹೋಲುತ್ತವೆ. ಇನ್ನೂ ಕೋತಿ, ಚಿಂಪಾಂಜಿಗಳ ಬಗ್ಗೆ ಕೇಳಬೇಕೆ? ಅವುಗಳು ಮನುಷ್ಯರಂತೆ ವರ್ತಿಸುತ್ತವೆ. ಇದೀಗ ಇಲ್ಲಿ ಎರಡು ಚಿಂಪಾಜಿಗಳು ಡ್ರೋನ್‌ ಹಾರಿಸಿವೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿವೆ.

ಇದನ್ನೂ ಓದಿ: ಸುಮಲತಾಗೆ ಬಿಜೆಪಿ ಟಿಕೆಟ್ ಮಿಸ್ ಆಯ್ತಾ..? – ಸಂಸದೆಯ ಪಾಡು ಈಗ ಅತ್ತಲೂ ಇಲ್ಲ ಇತ್ತಲೂ ಇಲ್ಲ

ಚಿಂಪಾಂಜಿ ತುಂಬಾನೇ ಬುದ್ಧಿವಂತ ಪ್ರಾಣಿ. ಅವುಗಳು ಮನುಷ್ಯರಂತೆಯೇ ಭಾವನೆಗಳನ್ನು ವ್ಯಕ್ತಪಡಿಸುವುದರ ಜೊತೆಗೆ ಅವುಗಳು ಮಾನವರಂತೆಯೇ ತರ್ಲೆ ತಮಾಷೆಗಳನ್ನು ಸಹ ಮಾಡುತ್ತವೆ. ಒಮ್ಮೊಮ್ಮೆ ಇವುಗಳು ತೋರುವ ಬುದ್ಧಿವಂತಿಕೆ ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತವೆ. ಇದೀಗ ಅಂತಹದೊಂದು ವಿಡಿಯೋ ವೈರಲ್ ಆಗಿದೆ. ಚಿಂಪಾಂಜಿಗಳು ಮನುಷ್ಯರಿಗಿಂತ ನಾವೇನು ಕಮ್ಮಿಯಿಲ್ಲ ಎನ್ನುತ್ತಾ ಸ್ಟೈಲ್ ಆಗಿ ಡ್ರೋನ್ ಹಾರಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಚಿಂಪಾಂಜಿಗಳು ಡ್ರೋನ್‌ ಹಾರಿಸುವ ವಿಡಿಯೋ ಪೋಸ್ಟ್‌ ಮಾಡಲಾಗಿದೆ. @TheFigen_   ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಚಿಂಪಾಂಜಿಗಳೆರಡು ಡ್ರೋನ್ ಹಾರಿಸುತ್ತಾ ಖುಷಿ ಪಡುತ್ತಿರುವ ದೃಶ್ಯವನ್ನು  ಕಾಣಬಹುದು. ಅದರಲ್ಲಿ ಒಂದು ಬುದ್ಧಿವಂತ ಚಿಂಪಾಂಜಿಯೂ ಏನು ಈ ಮನುಷ್ಯರಿಗೆ ಮಾತ್ರನಾ ಹೊಸ ಹೊಸ ಟೆಕ್ನಾಲಜಿಯ ಬಗ್ಗೆ ಗೊತ್ತಿರೋದು, ನಾನು ಕೂಡಾ ಬುದ್ಧಿವಂತ, ನೋಡು ನೋಡು ನಾನ್ ಅವರಿಗಿಂತ ಏನೂ ಕಮ್ಮಿಯಿಲ್ಲ ಎನ್ನುತ್ತಾ ಕೈಯಲ್ಲಿ ರಿಮೋಟ್ ಇಟ್ಟುಕೊಟ್ಟು ಸ್ಟೈಲ್ ಆಗಿ ಡ್ರೋನ್ ಹಾರಿಸಿದೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

Shwetha M