ಪತ್ನಿ ಮರಣದ ನಂತರ ಕಾಡಿತು ಒಂಟಿತನ.. – 62 ರ ವಯಸ್ಸಿನಲ್ಲಿ ತಂದೆಗೆ ಮದುವೆ ಮಾಡಿಸಿದ ಮಕ್ಕಳು!

ಪತ್ನಿ ಮರಣದ ನಂತರ ಕಾಡಿತು ಒಂಟಿತನ.. – 62 ರ ವಯಸ್ಸಿನಲ್ಲಿ ತಂದೆಗೆ ಮದುವೆ ಮಾಡಿಸಿದ ಮಕ್ಕಳು!

ಅದೊಂದು ಸುಂದರವಾದ ಕುಟುಂಬ. ತಂದೆ – ತಾಯಿ ಮಕ್ಕಳು ಎಲ್ಲರೂ ಅನ್ಯೋನ್ಯವಾಗಿದ್ದರು. ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಮನೆಯ ಯಜಮಾನಿ ಅಕಾಲಿಕವಾಗಿ ನಿಧನರಾಗಿದ್ದಾರೆ. ಪತ್ನಿಯನ್ನು ಕಳೆದುಕೊಂಡಿದ್ದರಿಂದ ಮನೆ ಯಜಮಾನ ಮಾನಸಿಕವಾಗಿ ಕುಗ್ಗಿಹೋಗಿದ್ದರು. ಒಂದು ವರ್ಷದಿಂದ ಒಂಟಿಯಾಗಿ ಜೀವನ ನಡೆಸುತ್ತಾ ಇದ್ದರು. ಪತ್ನಿ ನಿಧನದಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ತಂದೆಗೆ 62 ರ ವಯಸ್ಸಿನಲ್ಲಿ ಮಕ್ಕಳೇ ಸೇರಿಕೊಂಡು ಮತ್ತೊಂದು ಮದುವೆ ಮಾಡಿಸಿದ್ದಾರೆ.

ಹೌದು, ಕೇರಳದ ಪೊಟ್ಟನ್‌ಮಲಾ ಎಂಬಲ್ಲಿ ಈ ವಿವಾಹ ಸಮಾರಂಭ ಅದ್ದೂರಿಯಾಗಿ ನಡೆದಿದೆ. ಪೊಟ್ಟನ್‌ಮಲಾ ನಿವಾಸಿ ರಾಧಾಕೃಷ್ಣನ್‌ ತಮ್ಮ ಪತ್ನಿಯನ್ನು ಕಳೆದ ಒಂದು ವರ್ಷದಿಂದ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಪತ್ನಿ ಇಲ್ಲದೆ ಇದ್ದರೂ ತನ್ನ ಮೂವರು ಮಕ್ಕಳೊಂದಿಗೆ ಖುಷಿಯಿಂದಲೇ ಇದ್ದರು. ಆದರೂ ಕೂಡ ತನ್ನ ಮುದ್ದಿನ ಮಡದಿ ಇಲ್ಲಾ ಅಂತಾ ಅವರಿಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಅವರು ದಿನೇ ದಿನೇ ಮಾನಸಿಕವಾಗಿ ಕುಗ್ಗಿಹೋಗುತ್ತಿದ್ದರು. ಒಂಟಿತನ ಕಾಡಲಾರಂಭಿಸಿತ್ತು..

ಇದನ್ನೂ ಓದಿ: ಹಸಿವಾಯ್ತು ಅಂತಾ ಬಾಂಬ್‌ ಕಚ್ಚಿದ! – ಎಣ್ಣೆ ಮತ್ತಲ್ಲಿ ಇದೆಲ್ಲಾ ಬೇಕಿತ್ತಾ?

ಮಕ್ಕಳು ಕೂಡ ಬೇರೆ ಬೇರೆ ಸ್ಥಳಗಳಲ್ಲಿ ವಾಸಿಸುತ್ತಿದ್ದರು. ತಂದೆಯ ಒಂಟಿತನದ ಮೌನವನ್ನು ಗಮನಿಸಿದ ಮಕ್ಕಳಾದ ರಶ್ಮಿ ಮತ್ತು ರಂಜು ಅವರು ತಂದೆಗೆ 62 ವಯಸ್ಸಿನಲ್ಲಿ ಸಂಗಾತಿಯನ್ನು ಹುಡಕಲು ಮುಂದಾಗಿದ್ದಾರೆ. ಈ ವಿಚಾರದಲ್ಲಿ ತಂದೆಯ ಮನವೊಲಿಸಿದ ಮಕ್ಕಳು ಸಂಗಾತಿಯನ್ನು ಹುಡುಕಿದ್ದಾರೆ.

ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಹೊಂದಿಕೆಯಾಗುವ ಸಂಗಾತಿಯನ್ನು ಮಕ್ಕಳು ಹುಡುಕಿದ್ದಾರೆ. ಅದರಂತೆ ಅಡೂರಿನ ಮಲ್ಲಿಕಾ ಕುಮಾರಿ (60) ಅವರನ್ನು ಆಯ್ದುಕೊಂಡು ಮಕ್ಕಳೇ ಮುಂದೆ ನಿಂತು ಎರಂಕಾವು ಭಗವತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ವಿವಾಹ ಮಾಡಿಸಿದ್ದಾರೆ.

ಮಲ್ಲಿಕಾ ಕುಮಾರಿ ಅವರ ಪತಿ 5 ವರ್ಷಗಳ ಹಿಂದೆ ನಿಧನರಾಗಿದ್ದು, ಅವರಿಗೆ ಮಕ್ಕಳಾಗಿರಲಿಲ್ಲ. ಕುಟಂಬದವರ ಮುಂದೆ ಅದ್ಧೂರಿಯಾಗಿಯೇ ತನ್ನ ತಂದೆಯ ವಿವಾಹವನ್ನು ಮಕ್ಕಳು ಮಾಡಿಸಿದ್ದಾರೆ.

Shwetha M