ನಿಮ್ಮ ಮಕ್ಕಳಿಗಿದ್ಯಾ ಮೊಬೈಲ್ ಚಟ! – ಡ್ರಗ್, ಆಲ್ಕೋಹಾಲ್‌ಗಿಂತ ಫೋನ್ ಡೇಂಜರ್
ಕಣ್ಣು ಕಾಣಲ್ಲ.. ನಿದ್ದೆ ಬರಲ್ಲ.. ಭವಿಷ್ಯ ಕತ್ತಂ!

ನಾವು ಮೊಬೈಲ್‌ಗೆ ಎಷ್ಟ ಅಡಿಕ್ಟ್ ಆಗಿದ್ದೇವೆ ಅಂದ್ರೆ ಮನುಷ್ಯ ಸಿಗರೇಟ್, ಡ್ರಗ್ಸ್, ಆಲ್ಕೋಹಾಲ್‌ಗೆ ಅಡಿಕ್ಟ್ ಆಗುವಂತೆ.. ನಮ್ಮ ದೈನಂದಿನಕ್ಕೆ ಒಂದಷ್ಟು ಟೈಂ ಮೊಬೈಲ್ ನೋಡುತ್ತಾ ದಿವವಿಡಿ ಅದ್ರಲ್ಲೇ ಅವಿತುಕೊಂಡಿದ್ದೇವೆ.. ಇದು ಒಂದು ರೀತಿಯ ಚಟ ಆಗಿದೆ. ನೀವು ಹಾಗೇ ನೆನಪು ಮಾಡ್ಕೊಳ್ಳಿ.. 1990ರಲ್ಲಿ ಮಿಡೆಲ್ ಕ್ಲಾಸ್ ಫ್ಯಾಮೀಲಿ ಹೇಗಿತ್ತು ಅನ್ನೋದ್ದನ್ನ.. ಅಪ್ಪ ಮನೆಯಲ್ಲಿ ಕುಳಿತು ಪೇಪರ್ ಓದುತ್ತಿದ್ರೆ, ಅಮ್ಮ ಮನೆ ಕೆಲಸ ಅದು ಇದು ಅಂತ ಹೇಳಿ ಮಾತನಾಡುತ್ತಿದ್ದರು. ಮಕ್ಕಳು ಶಾಲೆಯಲ್ಲಿ ಕೊಟ್ಟು ಹೋಂ ವರ್ಕ್ ಮಾಡಿ, ಅಮ್ಮನ ಅಡುಗೆ ಕೆಲಸದಲ್ಲಿ ಹೆಲ್ಪಿ ಮಾಡಿ ಅಕ್ಕಪಕ್ಕದ ಮಕ್ಕಳ ಜೊತೆ ಆಟ ಆಡಿ ಸಮಯ ಕಳೆಯುತ್ತಿದ್ದೇವೆ.. ಹೊರಗಡೆ ಆಟವನ್ನೇ ಹೆಚ್ಚಾಗಿ ಆಡುತ್ತಾ, ಮಣ್ಣಿನ ಜೊತೆ ಆಟ ಆಡುತ್ತಾ ಸಮಯ ಕಳೆಯುತ್ತಿದ್ದ ದಿನ ಸೂಪರ್ ಆಗಿತ್ತು.. ಬಟ್ ಈಗ 2025ರಲ್ಲಿ ಒಂದು ಮಿಡಲ್ ಕ್ಲಾಸ್ ಫ್ಯಾಮೀಲಿ ಹೇಗಿದೆ. ಅಪ್ಪ ಸೋಫಾದಲ್ಲಿ ಕುಳಿತು ನ್ಯೂಸ್ ಸ್ಕ್ರೋಲ್ ಮಾಡುತ್ತಿದ್ದರೇ ಅಮ್ಮ ಅಡುಗೆ ಮಾಡುತ್ತಾ ಮೊಬೈಲ್ ಸಿರಿಯಲ್, OTT/ಯಲ್ಲಿ ಮಳುಗಿ ಹೋಗಿರ್ತಾರೆ. 10 ವರ್ಷದ ಮಗು ಇನ್ಸ್ಟಾ ಗ್ರಾಮ್‌ನಲ್ಲಿ ಸ್ಟೋರಿ, ರೀಲ್ಸ್ ನೋಡುತ್ತಾ ಟೈಂ ಕಳೆಯುತ್ತಿದ್ದಾರೆ. 3 ವರ್ಶದ ಮಗು ಕೂಡ ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾ ಕಾಲ ಕಳೆಯುತ್ತಿದೆ. ಅಂದ್ರೆ ನಾವು ಮೊಬೈಲ್‌ನ್ನ ಅಲ್ಲ ನಮ್ಮನ್ನ ಮೊಬೈಲ್ ಎಷ್ಟು ಆವರಿಸಿಕೊಂಡಿದೆ ಅಂತ ಅರ್ಥ ಆಗುತ್ತೆ.. ಎಲ್ಲಾರೂ ಒಂದೇ ಮನೆಯಲ್ಲಿದ್ದರೂ ಕೂಡ ಎಲ್ಲರೂ ಮಾನಸಿಕವಾಗಿ, ಬೇರೆ ಬೇರೆಯಾಗಿ ಡಿಜಿಟಲ್ ಜಗತ್ತಿನಲ್ಲಿ ಕಳೆದು ಹೋಗಿದ್ದಾರೆ. ಅವರವರ ನಡುವೆ ಯಾವುದೇ ಮಾತಿಲ್ಲ, ಯಾವುದೇ ಪ್ರೀತಿಯಿಲ್ಲ.. ಯಾವುದೇ ಸಂಪರ್ಕ ಇಲ್ಲ.. ಅವರ ಜೊತೆ ಇರುವುದು ಮುಖದ ಮೇಲೆ ಬೀಳುತ್ತಿರೋ ಮೊಬೈಲ್ ಬೆಳಕು ಮಾತ್ರ.. ಅದ್ರಲ್ಲೂ ಮಕ್ಕಳಂತೂ ಮೊಬೈಲ್ ಬಿಟ್ಟು ಇರೋವುದ್ದಕ್ಕೆ ಕೇಳುತ್ತಿಲ್ಲ.. ಮಕ್ಕಳ ಪೋಷಕರು ಕೂಡ ಅವರವರ ಕೆಲಸ ಆಗಬೇಕು, ತನ್ನ ಮಗು ಸೈಲೆಂಟ್ ಇರಬೇಕು ಅಂತ ಮೊಬೈಲ್ ಕೊಟ್ಟು ತನ್ನ ಕೆಲಸದಲ್ಲಿ ಬ್ಯುಸಿ ಆಗಿರ್ತಾರೆ.. ಬಟ್ ಇದು ಮೊದಲಿಗೆ ಚೆನ್ನಾಗಿ ಅನ್ಸಿದ್ರು, ನೀವು ನಿಮ್ಮ ಕೈಯಾರೆ ಮಕ್ಕಳನ್ನ ಮೊಬೈಲಿಗೆ ಬಲಿ ಕೊಡುತ್ತಿದ್ದೀರಾ ನೆನೆಪರಲಿ..
ಅಕ್ಟೋಬರ್ 2024ರಲ್ಲಿ ಭಾರತದಲ್ಲಿ 70000 ಸಾವಿರಕ್ಕೂ ಹೆಚ್ಚು ಪೋಷಕರನ್ನ ಸಮೀಕ್ಷೆ ಮಾಡಲಾಯ್ತು.. ಇದ್ರಲ್ಲಿ 66 ಪರ್ಸೆಂಟ್ ಪೋಷಕರು ನಮ್ಮ ಮಕ್ಕಳು ಸೋಷಿಯಲ್ ಮೀಡಿಯಾ, OTT, ಆನ್‌ಲೈನ್ ಆಟಗಳ ಚಟಕ್ಕೆ ಬಿದ್ದಿದ್ದಾರೆ ಅಂತ ಹೇಳಿದ್ದಾರೆ. 58 ಪರ್ಸೆಂಟ್ ಪೋಷಕರು ಮೊಬೈಲ್ ಕೊಟ್ಟಿಲ್ಲ ಅಂದ್ರೆ ಆ ಮಕ್ಕಳು ಬೇಜಾರ್ ಆಗ್ತಾರೆ, ಸಿಟ್ಟು ಮಾಡಿಕೊಳ್ತಾರೆ, ಹುಚ್ಚರಂತೆ ವರ್ತನೆ ಮಾಡ್ತಾರೆ ಅನ್ನೋದ್ದನ್ನ ಹೇಳಿದ್ದಾರೆ. ನೀವು ಅನ್ಕೋಬೋದ್ ಮಕ್ಕಳಿಗೆ ದಿನಕ್ಕೆ 2ರಿಂದ 3 ಗಂಟೆ ಮೊಬೈಲ್ ಕೊಟ್ರೆ ಏನು ಆಗಲ್ಲ.. ಮೊಬೈಲ್ ಕೊಟ್ಟು ನಮ್ಮ ಕೆಲಸ ಮಾಡಿ ಮಗಿಸಬಹುದು ಅಂತ ಬಟ್ ಇದು ಮೋಸ್ಟ್ ಡೇಂಜರ್.. ಹರಿಯಾಣದಲ್ಲಿ ಒಬ್ಬ ಬಾಲಕನ ತಂದೆ ತಾಯಿ ಇಬ್ಬರು ಕೆಲಸ ಮಾಡುತ್ತಿದ್ದರು.. ಅವನು ಕೇವಲ ಒಂದು ವರ್ಷ ಇದ್ದಾಗ ಅವನಿಗೆ ಮೊಬೈಲ್ ಕೊಟ್ಟು ಅವರು ತಮ್ಮ ಕೆಲಸದಲ್ಲಿ ಬ್ಯುಸಿ ಆಗಿ ಇರುತ್ತಿದ್ದರು. ಮೊದ್ಲಿಗೆ ಇದು ತುಂಬಾ ಬೆಸ್ಟ್ ಅನ್ಸಿತ್ತು ಆ ಪೋಷಕರಿಗೆ ಯಾಕಂದ್ರೆ ಆ ಮಗು ಸುಮ್ಮನೆ ಇರುತಿತ್ತು.. ಆದ್ರೆ ದಿನ ಕಳೆದಂತೆ ಆ ಮಗು ಮೊಬೈಲ್‌ಗೆ ಫುಲ್ ಅಡಿಕ್ಟ್ ಆಗ್ತಾ ಹೋದ.. ಪೋನ್ ಇದ್ದಾನ ಅವನು ಊಟ ಮಾಡ್ತಾ ಫೋನ್ ನೋಡುತ್ತಿದ್ದ. ಆಮೇಲೆ ಅವನಿಗೆ ಫೋನ್ ಇಲ್ಲದೇ ಊಟ ಮಾಡಿಸೋದು ಆ ಪೋಷಕರಿಗೆ ದೊಡ್ಡ ಕಷ್ಟ ಆಗಿತ್ತು. ನಂತ್ರ ಅವನ ಫೋಷಕರು ಇದ್ದನ್ನ ಅರ್ಥ ಮಾಡಿಕೊಂಡು ಅವನು 4 ವರ್ಷ ಇದ್ದಾಗ ಅವನಿಗೆ ಮೊಬೈಲ್ ಗಿಫ್ಟ್ ಕೊಡ್ತಾರೆ.. ನಂತ್ರ ಆ ಬಾಲಕ ಅದ್ರಲ್ಲೇ ಮುಳುಗಿ ಹೋಗ್ತಾನೆ. ಆ ಮೇಲೆ ಅವನಿಗೆ ಕಣ್ಣಿನ ನೋವು ಶುರವಾಗುತ್ತೆ.. ಅವನ ತಂದೆ ತಾಯಿ ಕನ್ನಡಕವನ್ನ ತೆಗೆಸಿಕೊಡ್ತಾರೆ.. ಅವನ ತಂದೆ ತಾಯಿ ಕೂಡ ಕನ್ನಡಕ ಹಾಕುತ್ತಿದ್ದರಿಂದ ಅದೇನು ದೊಡ್ಡ ವಿಷ್ಯ ಅನ್ಸಿಲ್ಲ.. ಆದ್ರೆ ಆತನ ತಲೆ ನೋವು ಕಣ್ಣು ನೋವು ಹೆಚ್ಚಾಗಿ ಡಾಕ್ಟರ್ ಹತ್ರ ಹೋದಾಗ. ಇದು ಮೊಬೈಲ್ ಅಡಿಕ್ಟನ್ ನಿಂದ ಆಗಿರೋದು ಅನ್ನೋದು ಗೊತ್ತಾಗುತ್ತೆ. ಆ ಹೊತ್ತಿಗೆ ಅವನಿಗೆ 9 ವರ್ಷ ಆಗಿತ್ತು. ಅವನಿಂದ ಮೊಬೈಲ್ ಕಸಿದುಕೊಳ್ಳುವಾಗ ಅವನು ಹುಚ್ಚನಂತೆ ಕೂಗುತ್ತಿದ್ದ, ತಲೆಯನ್ನ ಗೋಡೆೆಗೆ ಹೊಡೆದುಕೊಳ್ಳುವುದ್ದಕ್ಕೆ ಶುರು ಮಾಡುತ್ತಿದ್ದ.. ಅವನು ಮೊಬೈಲ್‌ಗೆ ಮಾದಕ ವೆಸನಿಯಂತೆ ಆಗಿದ್ದ.. ಇದು ಉದಾಹರಣೆ ಅಷ್ಟೇ.. ಈಗ ಅದೆಷ್ಟೋ ಮನೆಯಲ್ಲಿ ನಡೆಯುತ್ತಾ ಇರೋದ್ ಕೂಡ ಇದೇ ಘಟನೆಯೇ.. ನಿಮ್ಮ ಮನೆಯಲ್ಲೂ ಕೂಡ..
ಕಣ್ಣಿನ ಸಮಸ್ಯೆ
ನೇತ್ರಾತಜ್ಞರ ಪ್ರಕಾರ ಮಕ್ಕಳು ಹೀಗೆ ಮೊಬೈಲ್ ಬಳಸಿದ್ರೆ 2050 ಹೊತ್ತಿಗೆ 50 % ಮಕ್ಕಳು ಸಮೀಪ ದೃಷ್ಟಿ ದೋಷದಿಂದ ಬಳಲಿ, ಭಾರತದ ಅರ್ಧದಷ್ಟು ಜನ ಕನ್ನಡಕವನ್ನ ಧರಿಸಬೇಕಾಗುತ್ತೆ ಅನ್ನೋದ್ದನ್ನ ಹೇಳುತ್ತಿದ್ದಾರೆ.
ನಿದ್ದೆ ಕಮ್ಮಿ
ಹಾಗೇ ಮಕ್ಕಳು ಹೆಚ್ಚು ಮೊಬೈಲ್ ನೋಡುವುದರಿಂದ ನಿದ್ರಾಹೀನತೆ ಬಳಲುತ್ತಾರೆ. ಮೊಬೈಲ್ ಬಳಕೆಯಿಂದ ಮಕ್ಕಳ ಒಟ್ಟು ನಿದ್ರೆ ಟೈಂ ಕಡಿಮೆ ಆಗಿದೆ ಅನ್ನೋದು ಅಧ್ಯಾಯನದಿಂದ ತಿಳಿದು ಬಂದಿದೆ. ಒಂದು ಗಂಟೆ ಮೊಬೈಲ್ ನೋಡುವುದಿಂದ 10 ನಿಮಿಷ ನಿದ್ರೆ ಕಮ್ಮಿಯಾಗುತ್ತಂತೆ. ಮೊಬೈಲ್‌ನಲ್ಲಿರೋ ಎಲೆಕ್ಟ್ರಾನಿಕ್ ಲೈಟ್ ಇದ್ದಕ್ಕೆ ಕಾರಣವಂತೆ..
ಬೆಳವಣಿಗೆ ಕುಂಠಿತ
ಒಂದು ಮಗು ಆರೋಗ್ಯವಂತರ ಮನುಷ್ಯನಾಗಿ ಭವಿಷ್ಯದಲ್ಲಿ ಬೆಳೆಯಲು ಮೊದಲಿನ 5 ವರ್ಷಗಳಲ್ಲಿ ಪಂಚೇಂದ್ರಿಯಗಳು ಸರಿಯಾಗಿ ಪ್ರಚೋದನೆ ನೀಡಿ ಕೆಲಸ ಮಾಡಿದರೆ ಮಾತ್ರ ಮಗುವಿನ ಮೆದುಳು ಸರಿಯಾಗಿ ಕೆಲಸ ಮಾಡುತ್ತದೆ. ಸ್ಮಾರ್ಟ್ ಫೋನ್ ನೋಡುತ್ತಾ ಪುಟ್ಟ ಮಕ್ಕಳ ಕಣ್ಣು ಮತ್ತು ಕಿವಿ ಹೆಚ್ಚು ಪ್ರಚೋದನೆಗೆ ಒಳಗಾದಾಗ ಮಕ್ಕಳಲ್ಲಿ ಬೇರೆ ಅಂಗಾಂಗಗಳ ಬೆಳವಣಿಗೆ ಅಥವಾ ಇಡೀ ದೇಹದ ಒಟ್ಟಾರೆ ಬೆಳವಣಿಗೆ ಸಾಧ್ಯತೆ ಇರುವುದಿಲ್ಲ.
ಕಲಿಕೆೆ ಕೊರತೆ
ಮೊಬೈಲ್ ನಲ್ಲಿ ಬರುವ ವಿಡಿಯೊಗಳು ಮಕ್ಕಳ ಮೆದುಳಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಒಂದು ರೀತಿಯಲ್ಲಿ ಚಟವಾಗಿ ಬಿಡುತ್ತೆ. ಇದು ಮುಂದೆ ಶಾಲೆಗೆ ಹೋಗಲು ಪ್ರಾರಂಭಿಸುವಾಗ ಮಕ್ಕಳಲ್ಲಿ ಏಕಾಗ್ರತೆ ಕೊರತೆ ಆಗುತ್ತೆ.. ಮೊಬೈಲ್ ಹೆಚ್ಚು ನೆನೆಪಾಗುತ್ತೆ.. ಶಾಲೆಯಲ್ಲಿರುವಾಗ ಯಾವಾಗ ನಾನು ಮೊಬೈಲ್ ನೋಡ್ತಿನಿ ಮನೆಗ ಹೋಗ್ತಿನಿ ಅನ್ನೋ ಚಿಂತೆ ಹೆಚ್ಚಿಸುತ್ತೆ.. ಪುಸ್ತಕದ ಮೇಲೆ ಇಂಟ್ರೆಸ್ಟ್ ಹೋಗುತ್ತೆ.. ಅಲ್ಲದೇ ಸೋಷಿಯಲ್ ಮೀಡಿಯಾದಿಂದ ಹದಿಹರಿಯದ ವಯಸ್ಸಿನಲ್ಲಿ ದಾರಿ ತಪ್ಪುತ್ತಿದ್ದಾರೆ. ದಿನಕ್ಕೊಬ್ಬರ ಮೇಲೆ ಪ್ರೀತಿ ಆಗಿ, ಅದು ಬೇರೆ ರೀತಿಯಲ್ಲಿ ಹೋಗುತ್ತೆ..
ಆರಂಭದಲ್ಲಿ 5 ವರ್ಷ ಪುಟ್ಟ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಲು ಹೋಗಲೇಬೇಡಿ, ಮಗು ಹಠ ಮಾಡುತ್ತದೆ, ಸರಿಯಾಗಿ ಊಟ-ತಿಂಡಿ ಮಾಡುವುದಿಲ್ಲ ಎಂದು ಸ್ಮಾರ್ಟ್ ಫೋನ್ ತೋರಿಸಿ ತಿನ್ನಿಸುವ ಅಭ್ಯಾಸ ಮಾಡಲೇಬೇಡಿ. ಬೇರೆ ರೀತಿಯಲ್ಲಿ ಮಗುವನ್ನು ತಾಳ್ಮೆಯಿಂದ ನಿಭಾಯಿಸಿ ಅವರಿಗೆ ಊಟ-ತಿಂಡಿ ತಿನ್ನಿಸಿ.. ಮನೆಯಲ್ಲಿ ಮಕ್ಕಳನ್ನು ಸ್ಮಾರ್ಟ್ ಫೋನ್, ಮೊಬೈಲ್ ಪ್ರಪಂಚದಿಂದ ದೂರವಿಡಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಯಿದ್ದರೂ ನೀವು ಮೊಬೈಲ್ ಬಳಸೋದ್ದನ್ನ ಅವೈಡ್ ಮಾಡಿ.. ಮಕ್ಕಳ ಮನಸ್ಸು, ಕಣ್ಣನ್ನು ಬೇರೆಡೆಗೆ ಹರಿಯುವಂತೆ ದೊಡ್ಡವರು ಮಾಡಬೇಕು, ನಿರಂತರವಾಗಿ ಮೊಬೈಲ್ ಸ್ಕ್ರೀನ್ ನೋಡುವುದು ಒಳ್ಳೆಯದಲ್ಲ.

ನೋಡಿರಿ

