ಹಲೋ ಅಪ್ಪಾ.. ಆ್ಯಪ್ ಡೌನ್‍ಲೋಡ್ ಮಾಡಿ ಪೇಮೆಂಟ್ ಮಾಡಿ.. – ಶುರುವಾಯ್ತು ಮತ್ತೊಂದು ಸುತ್ತಿನ ಪೋಸ್ಟರ್ ವಾರ್!
ಕಳೆದ ವರ್ಷ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್ ಪೇಸಿಎಮ್ ಸೇರಿದಂತೆ ಇನ್ನಿತರ ಪೋಸ್ಟರ್ಗಳನ್ನು ಅಂಟಿಸಿ ತೀವ್ರ ಪ್ರಚಾರ ಮಾಡಿತ್ತು. ಅದು ದೊಡ್ಡ ಮಟ್ಟದಲ್ಲಿ ಕುಖ್ಯಾತಿ ಪಡೆದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿ ಕಾಂಗ್ರೆಸ್ ಲಾಭ ಪಡೆದಿತ್ತು. ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರು ಪೋಸ್ಟರ್ ವಾರ್ ಆರಂಭಿಸಿದ್ದಾರೆ.
ಜಿಲ್ಲೆಯ ತಾಲೂಕು ಆಫೀಸ್, ಮೆಸ್ಕಾಂ ಕಚೇರಿ, ತಾಲೂಕು ಪಂಚಾಯ್ತಿ ಹಾಗೂ ಪ್ರವಾಸಿ ಮಂದಿರ ಸೇರಿದಂತೆ ಹಲವೆಡೆ ಪೋಸ್ಟರ್ಗಳನ್ನು ಅಂಟಿಸುವ ಮೂಲಕ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇವಿಷ್ಠ ಅಲ್ಲದೆ ಚಿಕ್ಕಮಗಳೂರು ನಗರದಲ್ಲಿ ಅಲ್ಲಲ್ಲೇ ಪೋಸ್ಟರ್ ಹಾಕಿ ಟೀಕೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಶ್ಯಾಡೋ ಸಿಎಂ ಎಂಬ ವ್ಯಂಗ್ಯ ಚಿತ್ರದ ಮೂಲಕ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಖ್ಯಾತ ನಟಿ ಮಾಧುರಿ ದೀಕ್ಷಿತ್! – ಈ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕೆ?
ಇಂಧನ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಜೆ ಜಾರ್ಜ್ ವಿರುದ್ಧವೂ ಪೋಸ್ಟರ್ ಹಾಕಿದ್ದು, ರಾಜ್ಯವನ್ನ ಕತ್ತಲೆಗೆ ದೂಡಿ ಇಂಧನ ಸಚಿವರು ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್ ಜೊತೆಗೆ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರು ಈ ತಿಂಗಳ ಕಪ್ಪ ಎಲ್ಲಿ ಎಂದು ಪ್ರಶ್ನೆ ಕೇಳುತ್ತಿದ್ದು, ಈಗ ತಾನೇ ವಿದ್ಯುತ್ ಬಿಲ್ ಹೆಚ್ಚಳವಾಗಿದೆ. ಇರೀ ಮೇಮ್… ಎಂದು ಇಂಧನ ಸಚಿವ ಜಾರ್ಜ್ ಉತ್ತರಿಸುತ್ತಿರುವಂತೆ ಪೋಸ್ಟ್ ಹಾಕಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಾಗೂ ಸರ್ಕಾರದ ಪಂಚ ಗ್ಯಾರಂಟಿಗಳ ವಿರುದ್ಧ ವ್ಯಂಗ್ಯವಾಡಿ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಅಭಿಯಾನದಲ್ಲಿ ಸೋನಿಯಾ ಗಾಂಧಿ, ಸಿ.ಎಂ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಯತೀಂದ್ರ ಸಿದ್ದರಾಮಯ್ಯ, ಕೆ.ಜೆ. ಜಾರ್ಜ್ ವಿರುದ್ಧ ಪೋಸ್ಟರ್ ವಾರ್ ನಡೆಸಿದ್ದಾರೆ. ಸರ್ಕಾರ ಒಂದೆಡೆ ಉಚಿತ ಎಂದು ಹೇಳಿಕೊಂಡು ಮತ್ತೊಂದೆಡೆ ಸುಲಿಗೆ ಮಾಡುತ್ತಿದೆ ಎಂದು ಲೇವಡಿ ಮಾಡಿದ್ದಾರೆ. ಇದು ಫ್ರೀ ಭಾಗ್ಯವಲ್ಲ. ಹಗಲು ದರೋಡೆ ಎಂದು ಚಿಕ್ಕಮಗಳೂರು ನಗರದಾದ್ಯಂತ ಅಲ್ಲಲ್ಲೇ ಪೋಸ್ಟರ್ ಹಾಕಿದ್ದಾರೆ.
ವೈ.ಎಸ್.ಟಿ. ಸಂಗ್ರಹ ಸಮಿತಿಯ ಸಮಿತಿಯ ಸುತ್ತೋಲೆ, ಹಲೋ ಅಪ್ಪಾ, ಆ್ಯಪ್ ಡೌನ್‍ಲೋಡ್ ಮಾಡಿ ಪೇಮೆಂಟ್ ಮಾಡಿ. ಇದು ರಾಜ್ಯ ಸರ್ಕಾರದ ಹಗಲು ದರೋಡೆ ಬೆಳ್ಳಂಬೆಳಗ್ಗೆ ಕಾಂಗ್ರೆಸ್ ವಿರುದ್ಧ ಪೋಸ್ಟರ್ ಅಂಟಿಸಿದ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಕನ್ನಡಿಗರಿಗೆ ಕಪಟ್ಟ ಐದು ಗ್ಯಾರಂಟಿಗಳು ಎಂದು ಶೀರ್ಷಿಕೆಯುಳ್ಳ ಪೋಸ್ಟರ್ ಕೂಡ ಅಂಟಿಸಲಾಗಿದೆ. ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕರೆಂಟ್ ಬಿಲ್ ಏರಿಕೆ, ಲೋಡ್ ಶೆಡ್ಡಿಂಗ್ ಶುರು, ಸದ್ದಿಲ್ಲದೇ ಬಸ್ ದರ ಏರಿಕೆ ಮಾಡಿದ್ದು, ಕಾವೇರಿ ನೀರನ್ನು ಬೇಕಾಬಿಟ್ಟಿ ತಮಿಳುನಾಡಿಗೆ ದಾನ ನೀಡಿದ್ದು, ಸರ್ಕಾರಿ ಕಾರ್ಯಕ್ರಮಗಳ ಆಚರಣೆಗೆ ಅನುದಾನ ನೀಡದೆ ಸುಮ್ಮನೆ ಕೂತಿದ್ದು, ಆಸ್ತಿ ನೋಂದಣಿ ದರ ಏರಿಕೆ, ಗೃಹಲಕ್ಷ್ಮೀ ಬರುತ್ತಿಲ್ಲ, ಶಕ್ತಿ ಯೋಜನೆಗೆ ಬಸ್ ಸಾಲ್ತಿಲ್ಲ, ಯುವನಿಧಿಯಿನ್ನೂ ಶುರುವೇ ಆಗಿಲ್ಲ ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ.