ಚಿಕ್ಕಣ್ಣ Weds ಪಾವನಾ.. ಉದ್ಯಮಿ ಜೊತೆ ಕಾಮಿಡಿ ಕಿಂಗ್ ಕಲ್ಯಾಣ! – ಅಣ್ತಮ್ಮನ ಮದ್ವೆಗೆ ಬರ್ತಾರಾ ಯಶ್?

ಕಾಮಿಡಿ ಕಿಂಗ್ ಚಿಕ್ಕಣ್ಣ.. ಉಪಾಧ್ಯಕ್ಷ ಸಿನಿಮಾ ಬೆನ್ನಲ್ಲೇ ಮದ್ವೆ ಯಾವಾಗ ಅನ್ನೋ ಪ್ರಶ್ನೆ ಚಿಕ್ಕಣ್ಣನಿಗೆ ಎದುರಾಗ್ತಾನೇ ಇತ್ತು.. ಇದೀಗ ಚಿಕ್ಕಣ್ಣನಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಪಾವನಾ ಅವರ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಆಗಸ್ಟ್ 29 ಮತ್ತು 30ರಂದು ಮದುವೆ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಮದುವೆಯ ಸಿದ್ದತೆಗಳು ಆರಂಭವಾಗಿದೆ. ಇದೀಗ ಚಿಕ್ಕಣ್ಣನ ಭಾವಿ ಪತ್ನಿ ಪಾವನಾ ಅವರ ಹಿನ್ನೆಲೆ ಏನು ಅನ್ನೋದ್ರ ಬಗ್ಗೆ ಫ್ಯಾನ್ಸ್ ಸರ್ಚ್ ಮಾಡ್ತಿದ್ದಾರೆ. ಮತ್ತೊಂದ್ಕಡೆ ಅಣ್ತಮ್ಮನ ಮದ್ವೆಗೆ ರಾಕಿಂಗ್ ಸ್ಟಾರ್ ಯಶ್ ಅಂತ ಅಭಿಮಾನಿಗಳು ಕೇಳ್ತಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಕಾಮಿಡಿ ನಟ ಚಿಕ್ಕಣ್ಣ ಮದುವೆ – 29 ಮತ್ತು 30 ರಂದು ಮೆಚ್ಚಿದ ಹುಡುಗಿ ಜೊತೆ ಕಲ್ಯಾಣ
ಸ್ಯಾಂಡಲ್‌ವುಡ್‌ನ ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಅದ್ಬುತ ಅಭಿನಯದ ಮೂಲಕ ಸಿನಿಪ್ರೇಕ್ಷಕರ ಮನಗೆದ್ದಿದ್ದಾರೆ. ಇದೀಗ ತಮ್ಮ ಜೀವನದಲ್ಲಿ ಹೊಸ ಅಧ್ಯಾಯವೊಂದನ್ನ ಆರಂಭಿಸಲು ಸಜ್ಜಾಗಿದ್ದಾರೆ. ಪಾವನಾ ಅವರ ಜೊತೆ ಚಿಕ್ಕಣ್ಣ ಮದುವೆ ನಿಶ್ಚಯವಾಗಿದ್ದು, ಆಗಸ್ಟ್ 29 ಮತ್ತು 30 ರಂದು ಸಪ್ತಪತಿ ತುಳಿಯಲಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನ ಸ್ಪೆಕ್ಟ್ರಮ್ ಹಾಲ್‌ನಲ್ಲಿ ಚಿಕ್ಕಣ್ಣ ಅದ್ದೂರಿಯಾಗಿ ಮದುವೆಯಾಗಲಿದ್ದಾರೆ. ಈಗಾಗಲೇ ಕುಟುಂಬಸ್ಥರಿಗೆ, ಸ್ನೇಹಿತರಿಗೆ, ಗಣ್ಯರಿಗೆ, ನಟನಟಿಯರಿಗೆ ಮದುವೆಗೆ ಆಹ್ವಾನಿಸಿದ್ದಾರೆ. ಈಗಾಗಲೇ ಮದುವೆಯ ಸಿದ್ಧತೆ ಆರಂಭಗೊಂಡಿದೆ. ಈ ಬೆನ್ನಲ್ಲೇ ಚಿಕ್ಕಣ್ಣ ಭಾವಿ ಪತ್ನಿ ಹಿನ್ನೆಲೆ ಏನು ಅಂತ ಅನೇಕರು ಗೂಗಲ್‌ನಲ್ಲಿ ಸರ್ಚ್ ಮಾಡ್ತಿದ್ದಾರೆ.
ಅಂದ್ಹಾಗೆ ಪಾವನಾ ಮಂಡ್ಯ ಜಿಲ್ಲೆಯರು. ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಪಾವನಾರನ್ನ ಚಿಕ್ಕಣ್ಣ ಮದುವೆಯಾಗಲಿದ್ದಾರೆ. ಮೆಕಾನಿಕಲ್ ಇಂಜಿನಿಯರ್ ಆಗಿರುವ ಪಾವನಾ ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ತನ್ನದೇ ಸ್ವಂತ ಕಂಪನಿ ನಡೆಸುತತ್ತಿದ್ದಾರೆ ಚಿಕ್ಕಣ್ಣ ಭಾವಿ ಪತ್ನಿ. ಸಾಮಾಜಿಕ ಕಾಳಜಿಯುಳ್ಳ ಯಶಸ್ವಿ ಪಾವನಾ ಗೌಡ ಅವರು ಜೈವಿಕವಾಗಿ ವಿಘಟನಗೊಳ್ಳುವ ಉತ್ಪನ್ನಗಳನ್ನ ತಯಾರಿಸುವ ಉದ್ಯಮವನ್ನ ನಡೆಸುತ್ತಿದ್ದಾರೆ. ಅಂದ್ರೆ ಪ್ರಕೃತಿಗೆ ಮಾರಕವಾಗಿರುವ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಮಣ್ಣಿನಲ್ಲಿ ಕರಗುವ ಉತ್ಪನ್ನ ತಯಾರಿಸುವುದು ಪಾವನಾ ಅವರ ಬ್ಯುಸಿನೆಸ್.
ಇನ್ನು ಚಿಕ್ಕಣ್ಣ ಅವರದ್ದು ಲವ್ ಮ್ಯಾರೇಜ್ ಅಥವಾ ಅರೇಂಜಾ ಅನ್ನೋ ಪ್ರಶ್ನೆಯೂ ಅಭಿಮಾನಿಗಳಲ್ಲಿತ್ತು. ಈ ಬಗ್ಗೆ ಚಿಕ್ಕಣ್ಣ ಮಾತನಾಡಿದ್ದಾರೆ. ನಮ್ಮ ಮದುವೆ ಲವ್ ಮ್ಯಾರೇಜ್ ಅಲ್ಲ, ಅರೇಂಜ್ ಮ್ಯಾರೇಜ್. ಆದರೆ, ಮನೆಯವರು ಮದುವೆಗಾಗಿ ಹುಡುಗಿ ಹುಡುಕಲು ಆರಂಭಿಸಿದ ಬಳಿಕ ಪಾವನಾ ಅವರೊಂದಿಗೆ ಪ್ರೀತಿ ಮೂಡಿತು. ಹೀಗಾಗಿ ನಮ್ಮದು ಅರೇಂಜ್ ಕಮ್ ಲವ್ ಮ್ಯಾರೇಜ್. ನನ್ನ ವೃತ್ತಿಯನ್ನು ಅರ್ಥಮಾಡಿಕೊಳ್ಳುವ ಹುಡುಗಿ. ಪಾವನಾ ಪರಿಸರ ಪ್ರೇಮಿಯೂ ಆಗಿದ್ದಾರೆ. ಅವರ ಗುಣಗಳು ನನಗೆ ಇಷ್ಟ. ಪಾವನಾ ಸಿಗೋಕೆ ನಾನು ಲಕ್ಕಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಅಣ್ತಮ್ಮನ ಮದುವೆಗೆ ರಾಕಿಭಾಯ್ ಬರ್ತಾರಾ ಎಂದು ಫ್ಯಾನ್ಸ್ ಕೇಳ್ತಿದ್ದಾರೆ. ಚಿಕ್ಕಣ್ಣ ಈಗಾಗಲೇ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯನ್ನು ಭೇಟಿಯಾಗಿ ಇನ್ವಿಟೇಷನ್ ಕಾರ್ಡ್ ನೀಡಿದ್ದಾರೆ. ಸುದ್ದಿಗೋಷ್ಠಿ ವೇಳೆ ಯಶ್ ಹಾಗೂ ತಮ್ಮ ನಡುವಿನ ಮಾತುಕತೆಯ ಬಗ್ಗೆಯೂ ಚಿಕ್ಕಣ್ಣ ರಿವೀಲ್ ಮಾಡಿದ್ದಾರೆ. ಯಶ್ ಅವರು ಗಂಡ ಅಂದರೆ ಹಿಂಗೇ ಇರ್ಬೇಕು ಅಂತ. ಏನೇನ್ ತಪ್ಪು ಮಾಡ್ಬಾರ್ದು ಅದನ್ನ ರಾಧಿಕಾ ಹತ್ರಾ ಕೇಳಿಕೊಂಡು ಬಿಡಪ್ಪ ಎಂದು ಯಶ್ ಅಂದಿದ್ದಾರೆ ಅಂತ ಚಿಕ್ಕಣ್ಣ ಹೇಳಿದ್ರು. ಇನ್ನು ಯಶ್ ಮತ್ತು ರಾಧಿಕಾ ಅವರು ಮದುವೆಗೆ ಬರ್ತಾರಾ? ಕೇಳಿದ್ದಕ್ಕೆ ಎಲ್ರಿಗೂ ಇನ್ವಿಟೇಶನ್ ಕೊಟ್ಟಿದ್ದೇನೆ. ಫ್ರೀ ಇದ್ದವರು, ನನ್ನ ಮೇಲೆ ಪ್ರೀತಿ ಪ್ರೋತ್ಸಾಹ ಇದ್ದವರು ಬರ್ತಾರೆ. ಎಲ್ರೂ ತಮ್ಮದೇ ಕೆಲಸಗಳಲ್ಲಿ ಬ್ಯುಸಿ ಇರ್ತಾರೆ ಎಂದಿದ್ದಾರೆ ಚಿಕ್ಕಣ್ಣ. ಒಟ್ಟಾರೆ ಚಿಕ್ಕಣ್ಣ ಇದೀಗ ಜೀವನದ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದು, ಅವರ ಮದುವೆಯ ಸಂಭ್ರಮವನ್ನು ನೋಡಲು ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ.

ನೋಡಿರಿ

